Advertisement

ಡಿಕೆಶಿ ವಿರುದ್ಧ FIR ದಾಖಲಿಸಿದ ಜಾರಿ ನಿರ್ದೇಶನಾಲಯ, ಮುಂದೇನು?

01:03 PM Sep 18, 2018 | Sharanya Alva |

ನವದೆಹಲಿ: ತೆರಿಗೆ ವಂಚನೆ ಮತ್ತು ಹವಾಲಾ ಪ್ರಕರಣದಡಿಯಲ್ಲಿ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಹಾಗೂ ಇತರರ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ದೂರು ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಹೇಳಿದೆ.

Advertisement

ಡಿಕೆ ಶಿವಕುಮಾರ್, ನವದೆಹಲಿ ಕರ್ನಾಟಕ ಭವನದ ಉದ್ಯೋಗಿ ಹನುಮಯ್ಯ ಹಾಗೂ ಇತರರ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ ಎ) ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಿವರಿಸಿದೆ.

ಡಿಕೆ ಶಿವಕುಮಾರ್ ಅವರ ವಿರುದ್ಧ ಇಡಿ ದೂರು ದಾಖಲಿಸಿ ಬಂಧಿಸಲಿದೆ ಎಂಬ ಸುದ್ದಿ ಇತ್ತೀಚೆಗಷ್ಟೇ ತುಂಬಾ ಹರಿದಾಡಿದ ಬೆನ್ನಲ್ಲೇ ಇದೀಗ ಇಡಿ ಪ್ರಕರಣ ದಾಖಲಿಸಿದೆ.

ಕೋಟ್ಯಂತರ ರೂಪಾಯಿ ಹವಾಲಾ ಹಣ ವರ್ಗಾವಣೆ ಹಾಗೂ ತೆರಿಗೆ ವಂಚನೆ ಪ್ರಕರಣದ ಬಗ್ಗೆ ಬೆಂಗಳೂರಿನ ವಿಶೇಷ ಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು, ಮಧ್ಯಂತರ ಜಾಮೀನು ನೀಡಿತ್ತು.  ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆರೋಪಪಟ್ಟಿಯನ್ನು ಸಲ್ಲಿಸಿದ್ದರು. ಏತನ್ಮಧ್ಯೆ ಆರೋಪಿಗಳ ಹೇಳಿಕೆನ್ನು ದಾಖಲು ಮಾಡಿಕೊಳ್ಳಲು ಅಧಿಕಾರಿಗಳು ಡಿಕೆಶಿ ಹಾಗೂ ಇತರರಿಗೆ ಕೂಡಲೇ ಸಮನ್ಸ್ ಜಾರಿ ಮಾಡುವ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ.

ಡಿಕೆಶಿ ಹಾಗೂ ನಿಕಟವರ್ತಿ ಎಸ್ ಕೆ ಶರ್ಮಾ ಇತರ ಮೂವರು ಮಂದಿ ಜತೆ ಸೇರಿ ನಿರಂತರವಾಗಿ ಅಪಾರ ಪ್ರಮಾಣದಲ್ಲಿ ಹವಾಲಾ ಮೂಲಕ ಹಣ ವರ್ಗಾವಣೆ ಮಾಡಿರುವುದಾಗಿ ಆದಾಯ ತೆರಿಗೆ ಇಲಾಖೆ ಆರೋಪಿಸಿತ್ತು.

Advertisement

ಕಲೆ ಹಾಕಿರುವ ಸಾಕ್ಷ್ಯಾಧಾರಗಳ ಪ್ರಕಾರ, ಆರೋಪಿ ನಂಬರ್ ಒಂದು(ಡಿಕೆಶಿ) ದೆಹಲಿ, ಬೆಂಗಳೂರಿನಲ್ಲಿ ಬೃಹತ್ ನೆಟ್ ವರ್ಕ್ ಗಳ ಮೂಲಕ ಅಕ್ರಮ ಹಣವನ್ನು ಹವಾಲಾ ಮೂಲಕ ವರ್ಗಾಯಿಸಿರುವುದಾಗಿ ದೂರಿದೆ. ಇದರಲ್ಲಿ ಸಚಿನ್ ನಾರಾಯಣ್, ಆಂಜನೇಯ ಹನುಮಂತಯ್ಯ ಮತ್ತು ಎನ್ ರಾಜೇಂದ್ರ ಇತರ ಆರೋಪಿಗಳಾಗಿದ್ದಾರೆ ಎಂದು ತಿಳಿಸಿದೆ.

ಆದಾಯ ತೆರಿಗೆ ಇಲಾಖೆ ಪ್ರಕಾರ, ನಾರಾಯಣ್ ಕಾಂಗ್ರೆಸ್ ಮುಖಂಡ ಡಿಕೆಶಿ ಹಾಗೂ ಶರ್ಮಾನ ವ್ಯವಹಾರದ ಪಾಲುದಾರರು. ಶರ್ಮಾ ಟ್ರಾನ್ಸ್ ಪೋರ್ಟ್ ಮೂಲಕ ಲಕ್ಸುರಿ ಪ್ರಯಾಣಿಕರ ಬಸ್ ಗಳನ್ನು ನಡೆಸುತ್ತಿದ್ದಾರೆ.

ಹನುಮಂತಯ್ಯ ನವದೆಹಲಿ ಕರ್ನಾಟಕ ಭವದ ಉದ್ಯೋಗಿ. ನವದೆಹಲಿಯಲ್ಲಿರುವ ಡಿಕೆಶಿ ನಿವಾಸದಲ್ಲಿದ್ದ ಅಕ್ರಮ ಹಣವನ್ನು ಸಂಗ್ರಹಿಸಿ ಇಡುವ ಜವಾಬ್ದಾರಿ ಹೊತ್ತಿರುವುದಾಗಿ ಇಲಾಖೆ ದೂರಿನಲ್ಲಿ ಆರೋಪಿಸಿದೆ. ಐದು ಮಂದಿ ಆರೋಪಿಗಳು ತೆರಿಗೆಯನ್ನು ವಂಚಿಸುವ ಸಂಚು ನಡೆಸಿರುವುದಾಗಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next