ಮುಂಬಯಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ನವಿ ಮುಂಬೈನಲ್ಲಿರುವ ರಿಯಲ್ ಎಸ್ಟೇಟ್ ಗ್ರೂಪ್ ಮೊನಾರ್ಕ್ ಯೂನಿವರ್ಸಲ್ ಗ್ರೂಪ್ ಗೆ ಸೇರಿದ 52.73 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
ವಸತಿ ಯೋಜನೆಯಲ್ಲಿ ಅಕ್ರಮ ನಡೆಸಿರುವ ಕುರಿತು ಮೋನಾರ್ಕ್ ಯೂನಿವರ್ಸಲ್ ಗ್ರೂಪ್ ನ ಗೋಪಾಲ್ ಅಮರಲಾಲ್ ಠಾಕೂರ್, ಹಸ್ಮುಖ್ ಅಮರಲಾಲ್ ಠಾಕೂರ್ ಸೇರಿ ಇತರರ ವಿರುದ್ಧ ಮಹಾರಾಷ್ಟ್ರ ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್‌ಗಳ ಆಧಾರದ ಮೇಲೆ ರಿಯಲ್ ಎಸ್ಟೇಟ್ ಗುಂಪಿನ ಅಕ್ರಮ ಹಣ ವರ್ಗಾವಣೆಯ ಕುರಿತು ಇಡಿ ತನಿಖೆಯನ್ನು ಪ್ರಾರಂಭಿಸಿದೆ, ಈ ವೇಳೆ ಬಿಲ್ಡರ್ ಗಳು ನಿಜವಾದ ಫ್ಲಾಟ್ ಖರೀದಿದಾರರನ್ನು ವಂಚಿಸಿದ್ದಾರೆ. ಫ್ಲಾಟ್‌ಗಳನ್ನು ಮಾರಾಟ ಮಾಡುವ ವೇಳೆ ಖರೀದಿರಾರರ ಹೆಸರುಗಳನ್ನೂ ನೋಂದಾಯಿಸದೆ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಮೊನಾರ್ಕ್ ಯೂನಿವರ್ಸಲ್ ಗ್ರೂಪ್ ತಮ್ಮ ಬಹು ಪ್ರಾಜೆಕ್ಟ್‌ಗಳಿಗೆ ಖರೀದಿದಾರರನ್ನು ಆಹ್ವಾನಿಸಿತ್ತು ಮತ್ತು ಟಾಪ್ ಬಾಲಿವುಡ್ ನಟಿಯನ್ನು ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿಕೊಂಡಿತ್ತು. ಮೊನಾರ್ಕ್ ಯೂನಿವರ್ಸಲ್ ಗ್ರೂಪ್ ಪ್ರಾಜೆಕ್ಟ್‌ಗಳನ್ನು ಪ್ರಚಾರ ಮಾಡುತ್ತಿದ್ದ ಬಾಲಿವುಡ್ ನಟಿಯನ್ನು ಒಳಗೊಂಡ ಜಾಹೀರಾತುಗಳನ್ನು ನೋಡಿದ ನಂತರ ದೊಡ್ಡ ದೊಡ್ಡ ಹೂಡಿಕೆದಾರರು ಈ ಕಂಪನಿಯಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಬಿಲ್ಡರ್ ಗೋಪಾಲ್ ಅಮರಲಾಲ್ ಠಾಕೂರ್ ಅವರು ಹೂಡಿಕೆದಾರರಿಂದ ಸಂಗ್ರಹಿಸಿದ ಅಪಾರ ಪ್ರಮಾಣದ ಹಣವನ್ನು ಅದರ ವಿವಿಧ ಸೋದರ ಸಂಸ್ಥೆಗಳಿಗೆ ಹಂಚಿದ್ದಾರೆ ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ: Daily Horoscope: ಉದ್ಯೋಗದಲ್ಲಿ ದಿನೇ ದಿನೇ ಉನ್ನತಿ, ಅಕಸ್ಮಾತ್ ಧನಾಗಮ ಯೋಗ