ಕೊಚ್ಚಿ/ನವದೆಹಲಿ:ವಯಾನಾಡ್ ಜಿಲ್ಲೆಯ ಕಟ್ಟಕಡದ ಪುಲ್ಪಲ್ಲಿ ಸೇವಾ ಸಹಕಾರ ಬ್ಯಾಂಕ್(ಬಿಎಸ್‌ಸಿಬಿ)ನ ಸಾಲ ಹಗರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನ ಮಾಜಿ ಅಧ್ಯಕ್ಷ, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಕೆ.ಕೆ.ಅಬ್ರಾಹಂರನ್ನು ಜಾರಿ ನಿರ್ದೇಶನಾಲಯದ(ಇಡಿ) ಅಧಿಕಾರಿಗಳು ಬಂಧಿಸಿದ್ದಾರೆ.
ಹಗರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ರಾತ್ರಿ ಅಬ್ರಾಹಂ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ವಿಚಾರಣೆಯ ನಂತರ ಬುಧವಾರ ಅವರನ್ನು ಬಂಧಿಸಿದ್ದು, ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ.
ಮತ್ತೊಬ್ಬ ಆರೋಪಿ ಸಂಜೀವನ್ ಜತೆಗೆ ಸೇರಿಕೊಂಡು ಅಬ್ರಾಹಂ ಅವರು ಬ್ಯಾಂಕಿನ 5 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಅಕ್ರಮವಾಗಿ ಬೇನಾಮಿ ಹೆಸರುಗಳಲ್ಲಿ ಸಾಲವಾಗಿ ವಿತರಿಸಿದ್ದರು. ಈ ಕುರಿತು ಸಂತ್ರಸ್ತರು ತನಿಖೆಗೆ ಕೋರಿ ಇಡಿ ಗೆ ಮೊರೆ ಹೋಗಿದ್ದರು. ಸಂತ್ರಸ್ತರ ಪೈಕಿ ಒಬ್ಬರು ಕೆಲವು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.