Advertisement

ಆರ್ಥಿಕತೆ: ಇಂಗ್ಲೆಂಡನ್ನು ಮೀರಿಸಲಿದೆ ಭಾರತ

01:20 AM Jan 21, 2019 | Team Udayavani |

ಹೊಸದಿಲ್ಲಿ: 2019ರಲ್ಲಿ ಭಾರತವು ಇಂಗ್ಲೆಂಡನ್ನು ಹಿಂದಿಕ್ಕಿ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಜಾಗತಿಕ ಕನ್ಸಲ್ಟನ್ಸಿ ಸಂಸ್ಥೆ ಪಿಡಬ್ಲೂéಸಿ ವರದಿಯಲ್ಲಿ ಉಲ್ಲೇಖೀಸಲಾಗಿದೆ. 2017ರಲ್ಲಿ ಫ್ರಾನ್ಸನ್ನು ಹಿಂದಿಕ್ಕಿ ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತ ಹೊರಹೊಮ್ಮಿತ್ತು. ಸಾಮಾನ್ಯವಾಗಿ 5ನೇ ಸ್ಥಾನಕ್ಕೆ ಇಂಗ್ಲೆಂಡ್‌ ಮತ್ತು ಫ್ರಾನ್ಸ್‌ ಪೈಪೋಟಿ ನೀಡುತ್ತಿದ್ದವು. ಆದರೆ ಈಗ ಭಾರತ 5ನೇ ಸ್ಥಾನ ಆಕ್ರಮಿಸಲಿದೆ ಎಂದು ವರದಿ ಹೇಳಿದೆ.

Advertisement

ಸಂಸ್ಥೆಯ ಜಾಗತಿಕ ಆರ್ಥಿಕ ಪರಿವೀಕ್ಷಣೆ ವರದಿ ಪ್ರಕಾರ, ಯುನೈಟೆಡ್‌ ಕಿಂಗ್‌ಡಮ್‌ನ ನೈಜ ಜಿಡಿಪಿ ಪ್ರಗತಿ ಶೇ.1.6, ಫ್ರಾನ್ಸ್‌ನದ್ದು ಶೇ. 1.7 ಆಗಿದೆ. ಭಾರತದ ಜಿಡಿಪಿ ಪ್ರಗತಿ ಶೇ. 7.6 ನಿರೀಕ್ಷಿಸ ಲಾಗಿದೆ. ಯಾವುದೇ ಜಾಗತಿಕ ಆರ್ಥಿಕ ಸಂಕಷ್ಟ ಎದುರಾಗದೇ ಇದ್ದರೆ ಭಾರತ ಶೇ.7.6ರಷ್ಟು ಆರೋಗ್ಯಕರ ಜಿಡಿಪಿ ಸಾಧಿಸ ಲಿದೆ. ಜಿಎಸ್‌ಟಿ ಹಾಗೂ ಇತರ ವಿವಿಧ ನೀತಿ ನಿರೂಪಣೆಗಳಿಂದ ದೇಶ ಪ್ರಗತಿ ಸಾಧಿಸಲಿದೆ ಎಂದು ವರದಿ ಹೇಳಿದೆ. ಇನ್ನೊಂದೆಡೆ ಇಂಗ್ಲೆಂಡ್‌ಗೆ ಬ್ರೆಕ್ಸಿಟ್‌ ಸಮಸ್ಯೆಯಿಂದ ಆರ್ಥಿ ಕತೆಗೆ ಹೊಡೆತ ಬಿದ್ದಿದ್ದು, ಅದು 5ರಿಂದ 7ನೇ ಸ್ಥಾನಕ್ಕೆ ಕುಸಿಯುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next