Advertisement
ಪಟ್ಟಣದ ಕೋಳಿ ಸಂವರ್ಧನಾ ಕೇಂದ್ರದ ಆವರಣದಲ್ಲಿ ಮೇವು ಕತ್ತರಿಸುವ ಯಂತ್ರ ವಿತರಣೆ ಹಾಗೂ ಪಶು ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಮೇವು ಕತ್ತರಿಸುವ ಯಂತ್ರವನ್ನು ವಿತರಿಸಿ ಮಾತನಾಡಿ, ಕೃಷಿ ಚಟುವಟಿಕೆ ಒಂದರಿಂದಲೇ ರೈತರು ಆರ್ಥಿಕವಾಗಿ ಪ್ರವರ್ಧಮಾನಕ್ಕೆ ಬರಲು ಸಾಧ್ಯವಿಲ್ಲ. ಅದಕ್ಕೆ ಪೂರಕವಾಗಿ ಹೈನುಗಾರಿಕೆ, ಕುಕ್ಕುಟೋದ್ಯಮ, ಮೇಕೆ, ಕುರಿ ಸಾಕಣೆಯಂತಹ ಉಪಕಸುಬುಗಳನ್ನು ಅವಲಂಬಿಸಿದರೆ ಪ್ರಗತಿ ಕಾಣಬಹುದು ಎಂದರು.
Related Articles
Advertisement
ಸೌಲಭ್ಯ ಪಡೆಯಿತಿ: ರೈತರನ್ನು ಹೈನುಗಾರಿಕೆಯತ್ತ ಸೆಳೆಯಲು ಸರ್ಕಾರ ಪಶುಭಾಗ್ಯ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ರೈತರಿಗೆ ಹಸು, ಕುರಿಗಳನ್ನು ನೀಡಲಾಗುತ್ತಿದೆ, ಜಾನುವಾರುಗಳಿಗೆ ಮೇವು ಕತ್ತರಿಸಲು ಅನುಕೂಲವಾಗುವಂತೆ ಮೇವು ಕತ್ತರಿಸುವ ಯಂತ್ರವನ್ನೂ ವಿತರಿಸಲಾಗುತ್ತಿದೆ. ಜೊತೆಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದು ಪ್ರತಿಯೊಬ್ಬರೂ ಆರ್ಥಿಕವಾಗಿ ಪ್ರಗತಿ ಸಾಧಿಸುವಂತೆ ತಿಳಿಸಿದರು.
ಪಶು ಆಹಾರ ವಿತರಣೆ: ಸರ್ಕಾರದಿಂದ ಸೌಲಭ್ಯ ಸಿಗಲಿಲ್ಲವೆಂದು ರೈತರು ಹತಾಶರಾಗುವುದು ಬೇಡ, ಮುಂದಿನ ವರ್ಷಗಳಲ್ಲಿ ಸೌಲಭ್ಯ ಸಿಗದ ಫಲಾನುಭವಿಗಳಿಗೆ ಸೌಲಭ್ಯ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಪಶು ಆಹಾರವನ್ನು ಶಾಸಕ ಡಾ ಕೆ,ಅನ್ನದಾನಿ ವಿತರಿಸಿದರು. ಪುರಸಭೆ ಸದಸ್ಯ ಸಿದ್ದರಾಜು, ಡಾ.ವಿವೇಕಾನಂದ ಇತರರಿದ್ದರು.