ಹೊಸದಿಲ್ಲಿ: ಜ. 26ರಿಂದ ಮುಂದಿನ ಎರಡು ತಿಂಗಳ ಕಾಲ ದೇಶದ ಪ್ರತೀ ಮನೆ ಮನೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪತ್ರ ತಲುಪಲಿದೆ. ಭಾರತ್ ಜೋಡೊ ಯಾತ್ರೆಯ ಪೂರಕವಾಗಿ “ಆಪ್ಕಾ ಆಪ್ನಾ’ ಪತ್ರವನ್ನು ದೇಶದ ಜನರಿಗೆ ರಾಹುಲ್ ಗಾಂಧಿ ಬರೆದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಯಾತ್ರೆಯಲ್ಲಿ ಲಕ್ಷಾಂತರ ಮಂದಿ ನನ್ನ ಜತೆ ನಡೆದಿದ್ದಾರೆ. ದೇಶದ ಪ್ರತಿಯೊಬ್ಬ ನಾಗರಿಕ ನನ್ನ ಮೇಲೆ ತೋರಿರುವ ಪ್ರೀತಿ, ವಿಶ್ವಾಸಕ್ಕೆ ಆಭಾರಿ ಯಾಗಿದ್ದೇನೆ,’ ಎಂದಿದ್ದಾರೆ.
“500 ರೂ.ಗೆ ಎಲ್‌ಪಿಜಿ ಸಿಲಿಂಡರ್, ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ, ಯುವಕರಿಗೆ ಉದ್ಯೋಗ, ಉದ್ಯಮಿಗಳು ಮತ್ತು ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಬೇಕಾದ ವಾತಾ ವರಣ ಸೃಷ್ಟಿ, ಕೈಗೆಟುಕುವ ಬೆಲೆಯಲ್ಲಿ ಪೆಟ್ರೋಲ್, ಡೀಸೆಲ್, ರೂಪಾಯಿ ಮೌಲ್ಯ ಚೇತರಿಕೆ ಮೂಲಕ ದೇಶದ ಪ್ರತಿಯೊಬ್ಬರಿಗೂ ಆರ್ಥಿಕ ಸಮೃದ್ಧತೆ ತರಲು ನಿಶ್ಚಯಿಸಿದ್ದೇನೆ,’ ಎಂದು ಬರೆದಿದ್ದಾರೆ.