ಹೊಸದಿಲ್ಲಿ: ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಆರ್ಥಿಕ ಕುಸಿತದಿಂದಾಗಿ ನಾನಾ ದೇಶಗಳ ಸ್ಟಾರ್ಟ್‌ಅಪ್ ಕ್ಷೇತ್ರದ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.
Advertisement
ಆ ವಿಚಾರದಲ್ಲಿ ಭಾರತಕ್ಕಿಂತ ಅಮೆರಿಕದಲ್ಲೇ ಹೆಚ್ಚು ಉದ್ಯೋಗ ನಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸುಮಾರು 22 ಸಾವಿರ ನೌಕರರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದರೆ, ಭಾರತದಲ್ಲಿ 12 ಸಾವಿರ ನೌಕರರು ನಿರುದ್ಯೋಗಿಗಳಾಗಿದ್ದಾರೆ.
ಸತತ ಎರಡು ವರ್ಷಗಳ ಕಾಲ ಕೊರೊನಾ ಸಾಂಕ್ರಾಮಿಕದಿಂದ ದುಸ್ತರವಾಗಿದ್ದ ಸ್ಟಾರ್ಟಪ್ ಕ್ಷೇತ್ರಗಳು, ಆನಂತರ ಉಂಟಾಗಿರುವ ವಿಶ್ವ ಆರ್ಥಿಕ ಹಿನ್ನಡೆಯಿಂದಾಗಿ ಮತ್ತಷ್ಟು ನಷ್ಟಕ್ಕೊಳಗಾಗಿವೆ.