Advertisement

ಪರಿಸರ ಸ್ನೇಹಿ ಮಸೀದಿ, 300 ಬೆಡ್‌ಗಳ ಆಸ್ಪತ್ರೆ…

01:17 AM Dec 21, 2020 | mahesh |

ಅಯೋಧ್ಯೆಯ 5 ಎಕ್ರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಮಸೀದಿ ಮತ್ತು ಇತರೆ ಸಂಕೀರ್ಣಗಳಿಗೆ ಸಂಬಂಧಿಸಿದ ನೀಲನಕ್ಷೆಯನ್ನು ಉತ್ತರಪ್ರದೇಶ ಸುನ್ನಿ ಕೇಂದ್ರ ವಕ್ಫ್ ಮಂಡಳಿ ಬಿಡುಗಡೆ ಮಾಡಿದೆ. ಫೈಜಾಬಾದ್‌ ಪಂಚಾಯತ್‌ನ ಅನುಮತಿ ದೊರೆತ ಕೂಡಲೇ ಕಾಮಗಾರಿ ಆರಂಭವಾಗಲಿದೆ ಎಂದು ಮಂಡಳಿ ಹೇಳಿದೆ. ಮಸೀದಿ ಹೇಗಿರಲಿದೆ ಎಂಬ ಮಾಹಿತಿ ಇಲ್ಲಿದೆ…

Advertisement

ಸಂಕೀರ್ಣದಲ್ಲಿ ಏನಿರುತ್ತದೆ?
ಆಯತಾಕಾರದ ಸಂಕೀರ್ಣದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಸಮುದಾಯ ಅಡುಗೆ ಮನೆ ಮತ್ತು ಮ್ಯೂಸಿಯಂ ಇರುತ್ತದೆ. ಇವುಗಳಿಂದ ಕೆಲವೇ ಮೀಟರ್‌ ದೂರದಲ್ಲಿ ಮಸೀದಿಯಿ ರುತ್ತದೆ. ಮಸೀದಿ ಮತ್ತು ಸಂಕೀರ್ಣದ ಮಧ್ಯೆ ಶತಮಾನಗಳಷ್ಟು ಹಳೆಯ ಸೂಫಿ ಮಸೀದಿಯಿರುತ್ತದೆ.

ಪರಿಸರ ಸ್ನೇಹಿ
ಹವಾಮಾನ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಇಡೀ ರಚನೆಯನ್ನು ಪರಿಸರ ಸ್ನೇಹಿಯಾಗಿಸಲು ತೀರ್ಮಾನಿಸ ಲಾಗಿದೆ. ಅದರಂತೆ, ಮಸೀದಿಗೆ ವಿದ್ಯುತ್ಛಕ್ತಿ ಸಂಪರ್ಕವನ್ನೇ ನೀಡದೇ, ಸೌರ ಫ‌ಲಕಗಳ ಮೂಲಕ ಸೌರಶಕ್ತಿಯನ್ನೇ ಸಂಪೂರ್ಣ ವಾಗಿ ಬಳಸಿಕೊಳ್ಳಲಾಗುತ್ತದೆ. ಅಮೆಜಾನ್‌ ಮಳೆಕಾಡು, ಭಾರತದ ವಿವಿಧ ಭೌಗೋಳಿಕ ಪ್ರದೇಶಗಳು ಸೇರಿದಂತೆ ವಿಶ್ವದ ಮೂಲೆ ಮೂಲೆಗಳಿಂದ ವಿಭಿನ್ನ ಸಸ್ಯಗಳನ್ನು ತಂದು ನೆಡಲಾಗುತ್ತದೆ.

ಮಸೀದಿಗಿಂತ 6 ಪಟ್ಟು ದೊಡ್ಡ ಆಸ್ಪತ್ರೆ
ಮಸೀದಿಯು ಗೋಳಾಕಾರದಲ್ಲಿದ್ದು, ಏಕಕಾಲಕ್ಕೆ 2,000 ಮಂದಿ ನಮಾಜ್‌ ಮಾಡಲು ಸಾಧ್ಯ. ಇದು ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿಗಿಂತ 4 ಪಟ್ಟು ದೊಡ್ಡದಾಗಿರುತ್ತದೆ. 300 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಸಂಕೀರ್ಣವು ಮಸೀದಿಗಿಂತ 6 ಪಟ್ಟು ಬೃಹತ್ತಾಗಿರಲಿದೆ. 3,500 ಚದರ ಮೀಟರ್‌ ಪ್ರದೇಶದಲ್ಲಿ ಮಸೀದಿ ನಿರ್ಮಾಣವಾದರೆ, 24,150 ಚ.ಮೀ. ಪ್ರದೇಶದಲ್ಲಿ ಆಸ್ಪತ್ರೆ ಮತ್ತು ಇತರ ಕಟ್ಟಡಗಳು ತಲೆಎತ್ತಲಿವೆ.

ಶಿಲಾನ್ಯಾಸಕ್ಕಾಗಿ ಅದ್ದೂರಿ ಕಾರ್ಯಕ್ರಮ ನಡೆಸಲಾಗುವುದಿಲ್ಲ. ಮಸೀದಿಗೆ ಇನ್ನೂ ಯಾವುದೇ ಹೆಸರು ಅಂತಿಮಗೊಂಡಿಲ್ಲ. ಆದರೆ, ಬಾಬರ್‌ ಆಗಲೀ, ಬೇರೆ ಯಾವುದೇ ದೊರೆ ಅಥವಾ ರಾಜನ ಹೆಸರು ಇಡುವುದು ಬೇಡ ಎಂದು ನಿರ್ಧರಿಸಲಾಗಿದೆ.
ಉತ್ತರಪ್ರದೇಶ ಸುನ್ನಿ ಕೇಂದ್ರ ವಕ್ಫ್ ಮಂಡಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next