ಜೋಲ್ ಮಾತ್ರೆ ಸೇವಿಸಿ ಆನೆಕಾಲು ರೋಗದಿಂದ ತಪ್ಪಿಸಿಕೊಳ್ಳಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ವಿಜಯಾ ಕೆ. ಹೇಳಿದರು.
Advertisement
ನಗರದ ಸಿಯಾತಲಾಬ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆನೆಕಾಲು ರೋಗದ ಕುರಿತು ಹಮ್ಮಿಕೊಂಡ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಮನೆ ಮನೆಗೆ ಭೇಟಿ ನೀಡುತ್ತಾರೆ. ಭೇಟಿ ನೀಡಿದ ಸಮಯದಲ್ಲಿ ಸಾರ್ವಜನಿಕರು ನಮ್ಮ ಇಲಾಖೆಯೊಂದಿಗೆ ಕೈ ಜೋಡಿಸಿ ಆನೆಕಾಲು ರೋಗದಿಂದ ತುತ್ತಾಗುವುದನ್ನು ತಪ್ಪಿಸಿಕೊಳ್ಳಿ ಎಂದು ಮನವಿ ಮಾಡಿದರು.
ರೂಪುರೇಷೆಗಳನ್ನು ವಿವರಿಸಿ, 2 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳಿಗೆ, ಗರ್ಭಿಣಿಯರಿಗೆ ಹಾಗೂ ತೀವ್ರತರವಾದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಡಿಇಸಿ ಮಾತ್ರೆಗಳನ್ನು ವಿತರಿಸಬಾರದು. ಆರೋಗ್ಯವಂತರಾಗಿರುವ 2ರಿಂದ 5 ವರ್ಷದವರಿಗೆ ಒಂದು ಮಾತ್ರೆ, 6ರಿಂದ 14 ವರ್ಷದವರಿಗೆ ಎರಡು ಮಾತ್ರೆ, ಹಾಗೂ 15 ವರ್ಷದಿಂದ ಮೇಲ್ಪಟ್ಟವರಿಗೆ ಮೂರು ಮಾತ್ರೆ ನೀಡಬೇಕು. ಇದರ ಜತೆಗೆ ಒಂದು ಅಲ್ಬೆಂಡ್‌ಜೋಲ್ ಮಾತ್ರೆ ಚೀಪಿಸಬೇಕೆಂದು ತಿಳಿಸಿದರು. ಕೀಟ ಜನ್ಯ ಶಾಸ್ತ್ರಜ್ಞೆ ರೇಖಾ ಮಾತನಾಡಿ, ಕಳೆದ 14 ಸುತ್ತುಗಳು ಮುಗಿದರೂ ಆನೆಕಾಲು ರೋಗದ ಪ್ರಕರಣಗಳು ಕಂಡುಬರುತ್ತಿವೆ. ಇದನ್ನು ತಡೆಗಟ್ಟಬೇಕಾದರೆ ಈ ಅಭಿಯಾನ ಯಶಸ್ವಿಯಾಗಬೇಕು ಎಂದರು.
Related Articles
Advertisement