Advertisement

ಸ್ಯಾನಿಟೈಸರ್‌ ಸೇವನೆ ಒಳ್ಳೆಯದಲ್ಲ

12:55 PM Apr 21, 2020 | Suhan S |

ಧಾರವಾಡ: ಕೋವಿಡ್ 19 ಸೋಂಕು ಹರಡುವುದನ್ನು ತಡೆಯಲು ಹ್ಯಾಂಡ್‌ ಸ್ಯಾನಿಟೈಸರ್‌ ಅನ್ನು ಬಳಸಲಾಗುತ್ತಿದ್ದು, ಆದರೆ ಕೆಲವರು ಇದನ್ನು ಮದ್ಯದ ಬದಲಾಗಿ ಸೇವಿಸುತ್ತಿರುವುದು ವರದಿಯಾಗಿದೆ.

Advertisement

ಹ್ಯಾಂಡ್‌ ಸ್ಯಾನಿಟೈಸರ್‌ನ್ನು ಈಥೆನಾಲ್‌, ಐಸೊಪ್ರೊಪೈಲ್‌ ಅಲ್ಕೋಹಾಲ್‌ ಹಾಗೂ ಇತರೆ ರಾಸಾಯನಿಕಗಳ ಮಿಶ್ರಣದೊಂದಿಗೆ ತಯಾರಿಸಿದ್ದು, ಇದು ಬಾಹ್ಯ ಉಪಯೋಗಕ್ಕೆ ಮಾತ್ರ ಸೀಮಿತವಾಗಿದೆ. ಸೇವನೆಗೆ ಯೋಗ್ಯವಾಗಿರಲ್ಲ. ಇದನ್ನು ಸೇವಿಸಿದಲ್ಲಿ ಬಹು ಅಂಗಾಂಗಗಳ ವೈಫಲ್ಯ ಮತ್ತು ಮಾರಣಾಂತಿಕ ಆಗಿರುವುದರಿಂದ ಸಾರ್ವಜನಿಕರು ಇದನ್ನು ಬಾಹ್ಯವಾಗಿ ಮಾತ್ರ ಉಪಯೋಗಿಸಬೇಕು. ಯಾವುದೇ ಕಾರಣಕ್ಕೂ ಸೇವಿಸಬಾರದು. ಔಷಧ ವ್ಯಾಪಾರಿಗಳು ಇದನ್ನು ಗ್ರಾಹಕರಿಗೆ ಜಾಗರೂಕತೆಯಿಂದ ಮಾರಬೇಕು. ಬಿಲ್‌ಗ‌ಳಲ್ಲಿ ಗ್ರಾಹಕರ ಹೆಸರು ಮತ್ತು ಮೊಬೈಲ್‌ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕೆಂದು ಜಿಲ್ಲೆಯ ಎಲ್ಲಾ ಔಷಧ ವ್ಯಾಪಾರಸ್ಥರಿಗೆ ಈಗಾಗಲೇಸೂಚಿಸಲಾಗಿರುತ್ತದೆ. ಕೆಲ ಕಂಪನಿಯ ಸ್ಯಾನಿಟೈಸರ್‌ ಅನ್ನು ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಮಾರದಂತೆ ಸೂಚಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

ಸ್ಯಾನಿಟೈಸರ್‌ ಸ್ವರೂಪ ಬದಲಾವಣೆ: ಉಗಾರ ಸಕ್ಕರೆ ಕಾರ್ಖಾನೆಯ ಸ್ಯಾನಿಟೈಸರ್‌, ಪ್ಯಾಕಿಂಗ್‌ ಸ್ವರೂಪ ಮತ್ತು ಬಣ್ಣ ಬದಲಾಯಿಸಲು ಡಿಸಿ ದೀಪಾ ಚೋಳನ್‌ ಅವರು ನಿರ್ದೇಶಿಸಿದ ಹಿನ್ನೆಲೆಯಲ್ಲಿ ಔಷಧ ನಿಯಂತ್ರಣ ಇಲಾಖೆ ಉಪ ಔಷಧ ನಿಯಂತ್ರಕ ಮಲ್ಲಿಕಾರ್ಜುನಕೆ.ಎಸ್‌. ಹಾಗೂ ಸಹಾಯಕ ಔಷಧ ನಿಯಂತ್ರಕ ಅಜಯ್‌ ಮುದಗಲ್‌ ಕೃಷ್ಣಪ್ಪ ಅವರು ತಯಾರಿಕಾ ಸಂಸ್ಥೆಯನ್ನು ಸಂಪರ್ಕಿಸಿ ಹ್ಯಾಂಡ್‌ ಸ್ಯಾನಿಟೈಸರ್‌ನ ಬಣ್ಣ, ಜಿಗುಟುತನ ಮತ್ತು ಪ್ಯಾಕಿಂಗ್‌ ಬದಲಾಯಿಸಲು ಕ್ರಮ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next