Advertisement
ಕ್ರಿಶ್ಚಿಯನ್ನರು ಮತ್ತು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಮೂರು ಬಾಂಬ್‌ಗಳನ್ನು 21 ಏಪ್ರಿಲ್ 2019ರಂದು ಎಸೆಯಲಾಗಿತ್ತು. ಈ ದುರ್ಘಟನೆಯಲ್ಲಿ ಅಮಾಯಕರು ಬಲಿಯಾಗಿದ್ದರು. ಚರ್ಚ್‌ಗಳಲ್ಲಿ ಪ್ರಾರ್ಥನೆಯಲ್ಲಿ ನಿರತರಾಗಿ ದ್ದವರ ಮೇಲೆ ಮತ್ತು ವಿಲಾಸಿ ಹೊಟೇಲ್‌ಗಳಲ್ಲಿ ತಂಗಿದ್ದವರನ್ನು ಗುರಿಯಾಗಿರಿಸಿ ಬಾಂಬ್ ಸ್ಫೋಟಿಸಲಾಗಿತ್ತು. 2009ರ ವರೆಗೆ ಆ ರಾಷ್ಟ್ರದಲ್ಲಿ ಹಿಂಸಾಕೃತ್ಯಗಳಿಗೆ ಕಾರಣವಾಗುತ್ತಿದ್ದ ಎಲ್‌ಟಿಟಿಇ ಉಗ್ರ ಸಂಘಟನೆಯನ್ನು ಮಟ್ಟಹಾಕಿದ ಬಳಿಕ ಇಂಥ ಘಟನೆಗಳು ನಡೆದಿರಲಿಲ್ಲ.
ರಾಜಕೀಯ ಕಾರಣಕ್ಕೆ ದೇಶದಲ್ಲಿ ಹಿಂಸಾಚಾರ ಹೆಚ್ಚಾಗುತ್ತಿದ್ದರೆ ಅತ್ತ ನಂಬಿಕೆ ಮತ್ತು ಸಾಮರಸ್ಯವನ್ನು ಪುನರ್ ಸ್ಥಾಪಿಸಲು ಶ್ರಮಿಸುತ್ತಿದ್ದ ನಾಗರಿಕ ಸಮಾಜವು ಈಗ ಹೆಣಗಾಡುತ್ತಿದೆ. ಈ ಮಧ್ಯದಲ್ಲಿ ಕೊರೊನಾ ಸಂಕಟವೂ ದೇಶವನ್ನು ಕಾಡುತ್ತಿದೆ. 2019ರ ಎಪ್ರಿಲ್ 21ರಂದು ನಡೆದ ಘಟನೆಯನ್ನು ಜನರು ಮರೆಯಲು ಪ್ರಯತ್ನಿಸುತ್ತಿದ್ದಾರೆ. ದಾಳಿ ಬಳಿಕ ಅಲ್ಲಿನ ಒಟ್ಟಾರೆ ಚಿತ್ರಣವೇ ಬದಲಾಗಿದೆ.