ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿ, ದಿಲ್ಲಿ, ಹಿಮಾಚಲ ಪ್ರದೇಶ, ಪಂಜಾಬ್, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಸೇರಿ ದಂತೆ ಉತ್ತರ ಭಾರತದ ಹಲವು ರಾಜ್ಯಗಳು ಹಾಗೂ ಇತರ 9 ದೇಶಗಳಲ್ಲಿ ಮಂಗಳವಾರ ರಾತ್ರಿ 10.20ರ ವೇಳೆ ಏಕಕಾಲಕ್ಕೆ ಭೂಕಂಪ ಸಂಭವಿಸಿದೆ.
ಅಫ್ಘಾನಿಸ್ಥಾನದ ಕಾಲಫ್ಘಾನ್‌ನಲ್ಲಿ 6.5 ತೀವ್ರತೆಯಲ್ಲಿ ಭೂಮಿ ಕಂಪಿಸಿದ್ದು, ಇದರ ಪ್ರಭಾವವು ಭಾರತ, ತುರ್ಕ್‌ಮೆನಿಸ್ಥಾನ, ಕಜಕಿಸ್ಥಾನ, ಪಾಕಿಸ್ಥಾನ, ತಜಕಿಸ್ಥಾನ, ಉಜ್ಬೇ ಕಿಸ್ಥಾನ, ಚೀನ ಮತ್ತು ಕಿರ್ಗಿಸ್ಥಾನದಲ್ಲೂ ಕಾಣಿಸಿ ಕೊಂಡಿದೆ.
ಸಾವು-ನೋವಿನ ವಿವರಗಳು ಲಭ್ಯ ವಾಗಿಲ್ಲ. ಆದರೆ ದಿಲ್ಲಿ, ಜಮ್ಮು, ಡೆಹ್ರಾಡೂನ್, ಲಡಾಖ್, ನೋಯ್ಡಾ, ಜಲಂಧರ್‌ನಲ್ಲಿ ಕೆಲವು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ್ದು, ಜನರೆಲ್ಲರೂ ಭಯ ಭೀತ ರಾಗಿ ಮನೆಗಳಿಂದ ಹೊರಗೋಡಿ ಬಂದಿದ್ದಾರೆ.