ಕಾಬೂಲ್: ಅಫ್ಘಾನಿಸ್ಥಾನದಲ್ಲಿ ಗುರುವಾರ ಭೂಕಂಪನ ಉಂಟಾಗಿದೆ. ರಿಕ್ಟರ್‌ಮಾಪಕದಲ್ಲಿ ಅದರ ಪ್ರಮಾಣ 5.9 ಎಂದು ದಾಖಲಾಗಿದೆ. ಅದರಿಂದಾಗಿ ಭಾರತದ ರಾಜಧಾನಿ ಹೊಸದಿಲ್ಲಿ, ಸುತ್ತಮುತ್ತ ಕಂಪನದ ಅನು ಭವವಾಗಿದೆ.
ಕಂಪನದ ಅನುಭವದಿಂದಾಗಿ ಭಾರತದಲ್ಲಿ ಹಾನಿ ಉಂಟಾಗಿಲ್ಲ. ಅಫ್ಘಾನಿಸ್ಥಾನದ ಹಿಂದೂಕುಶ್ ಪ್ರಾಂತದಲ್ಲಿ ಗುರುವಾರ 7.55ರ ಸುಮಾರಿಗೆ ಭೂಕಂಪನ ಸಂಭವಿಸಿದ್ದು, ಕಂಪನದ ಕೇಂದ್ರಬಿಂದು ದ. ಫೈಜಾಬಾದ್‌ನಿಂದ 79 ಕಿ.ಮೀ. ದೂರದಲ್ಲಿ 200 ಕಿ.ಮೀ. ಆಳದಲ್ಲಿ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಿಲ್ಲಿ ಯಲ್ಲಿ ವಾರದಲ್ಲಿ 2ನೇ ಬಾರಿಗೆ ಕಂಪನದ ಅನುಭವ ವಾಗಿದ್ದು, ಜ. 1ರಂದು ಹರಿಯಾಣದಲ್ಲಿ 3.8ರ ತೀವ್ರತೆಯಲ್ಲಿ ಭೂಕಂಪ ಸಂಭವಿಸಿದಾಗಲೂ ದಿಲ್ಲಿ, ಅದರ ಸುತ್ತ ಮುತ್ತ ಕಂಪನದ ಅನುಭವವಾಗಿತ್ತು.