ಶಿಮ್ಲಾ: ಉತ್ತರಖಂಡದ ಜೋಶಿಮಠದಲ್ಲಿ ಭೂಕುಸಿತ ಉಂಟಾಗಿರುವ ಭೀತಿಯ ನಡುವೆಯೇ, ಇತ್ತ ಹಿಮಾಚಲ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ್ದು, ಜನರಲ್ಲಿ ಆತಂಕ ಹುಟ್ಟಿಸಿದೆ.
ಶನಿವಾರ (ಜ.14 ರಂದು) ಮುಂಜಾನೆ ಹಿಮಾಚಲ ಪ್ರದೇಶದಲ್ಲಿ ಭೂಕಂಪರ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಹೇಳಿದೆ.
ಇದನ್ನೂ ಓದಿ: “ನಿಮ್ಮನ್ನು ಗುಂಡಿಕ್ಕಿ ಕೊಲ್ಲಲು ಭಯೋತ್ಪಾದಕನನ್ನು ಕಳುಹಿಸುತ್ತೇವೆ”: ರಾಜ್ಯಪಾಲರ ವಿರುದ್ಧ ಗುಡುಗಿದ ಡಿಎಂಕೆ ನಾಯಕ
ಬೆಳಗ್ಗೆ 5.17ಕ್ಕೆ ಭೂಕಂಪ ಸಂಭವಿಸಿದ್ದು, 5 ಕಿ.ಮೀ. ಆಳದಲ್ಲಿ ಕಂಪನ ಉಂಟಾಗಿದೆ. ಧರ್ಮಶಾಲಾದಿಂದ 22 ಕಿಮೀ ಪೂರ್ವದಲ್ಲಿ ಭೂಕಂಪ ಸಂಭವಿಸಿದೆ. ಸದ್ಯ ಭೂಕಂಪ ಪ್ರದೇಶದಲ್ಲಿ ಯಾವುದೇ ಪ್ರಾಣಾಪಾಯ ಹಾಗೂ ನಷ್ಟ ಉಂಟಾಗಿಲ್ಲ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಹೇಳಿದೆ.