Advertisement

ಭೂಕಂಪನ ಸುಳ್ಳು ಸುದ್ದಿ: ಕೊಡಗು ಜಿಲ್ಲಾಡಳಿತ

11:14 PM May 24, 2019 | mahesh |

ಮಡಿಕೇರಿ: ಕೊಡಗು ಜಿಲ್ಲೆಯ ಕೆಲವು ಕಡೆಗಳಲ್ಲಿ ಲಘು ಭೂಕಂಪನ ಸಂಭವಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿದ್ದು, ಕೊಡಗು ಜಿಲ್ಲಾಡಳಿತ ಇದನ್ನು ದಾಖಲೆ ಸಹಿತ ತಳ್ಳಿಹಾಕಿದೆ.

Advertisement

ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರವನ್ನು ಸಂಪರ್ಕಿಸಿ ಈ ಕುರಿತು ಸ್ಪಷ್ಟನೆ ಬಯಸಿತ್ತು. ಸ್ಪಷ್ಟನೆ ನೀಡಿರುವ ಬೆಂಗಳೂರಿನಲ್ಲಿರುವ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕರಾದ ಶ್ರೀನಿವಾಸ್‌ ರೆಡ್ಡಿ, ಲಘು ಭೂಕಂಪನ ಸಂಭವಿಸಿರುವ ಬಗ್ಗೆ ರಾಜ್ಯದ 14 ಭೂಕಂಪನ ಮಾಪಕ ಕೇಂದ್ರಗಳಲ್ಲಿ ಯಾವುದೇ ಅಂಕಿ ಅಂಶಗಳು ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

ಹಾರಂಗಿ ಜಲಾಶಯದಲ್ಲಿರುವ ಮಾಪಕದಲ್ಲೂ ಈ ಬಗ್ಗೆ ಅಂಕಿ ಅಂಶಗಳು ದಾಖಲಾಗಿಲ್ಲ. ಜಿಲ್ಲೆಯ ಪ್ರತಿ ಗ್ರಾಮದ ಹವಾಮಾನವನ್ನು ಗಮನಿಸಲಾಗುತ್ತಿದ್ದು, ಈ ಬಗ್ಗೆ ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದ್ದಾರೆ. ಸಿದ್ದಾಪುರ ಸಮೀಪದ ನೆಲ್ಯಹುದಿ ಕೇರಿ ವಿಭಾಗದಲ್ಲಿ ಗುರುವಾರ ಸಂಜೆ ಗುಡುಗಿನ ಶಬ್ದದೊಂದಿಗೆ ಲಘ ಭೂ ಕಂಪನವಾಗಿದೆ ಎನ್ನುವ ಊಹಾಪೋಹ ಸಾಮಾಜಿಕ ಜಾಲ ತಾಣಗಳಲ್ಲಿ ಹರಡಿ ಒಂದಷ್ಟು ಆತಂಕವನ್ನು ಹುಟ್ಟು ಹಾಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next