Advertisement

ಮಂಗಳೂರು: ಮೇರಿಹಿಲ್ ಪರಿಸರದಲ್ಲಿ ಭೂ ಕಂಪಿಸಿದ ಅನುಭವ; ಕೆಲ ಕಾಲ ಆತಂಕ

03:18 PM Aug 03, 2022 | Team Udayavani |

ಮಂಗಳೂರು: ನಗರದ ಮೇರಿಹಿಲ್ ಪರಿಸರದಲ್ಲಿ ಬುಧವಾರ ಭೂಮಿ ಕಂಪಿಸಿದ ಅನುಭವವಾಗಿದೆ.

Advertisement

ಮೇರಿಹಿಲ್ ಪರಿಸರದಲ್ಲಿ ಬುಧವಾರ ಬೆಳಗ್ಗೆ 10.15ರ ವೇಳೆ ಭೂಮಿ ಕಂಪಿಸಿದೆ ಎನ್ನಲಾಗಿದ್ದು, ಶಾಲಾ ವಿದ್ಯಾರ್ಥಿಗಳು ಹಾಗೂ ವಸತಿ ಸಮುಚ್ಚಯದ ನಿವಾಸಿಗಳು ಹೊರಗೆ ಓಡಿ ಬಂದಿದ್ದಾರೆ.

ಭೂಮಿ ಕಂಪಿಸಿದ ಅನುಭವದ ಬಳಿಕ ಶಾಲಾ ವಿದ್ಯಾರ್ಥಿಗಳನ್ನು ಶಿಕ್ಷಕರು ಸುರಕ್ಷತೆ ದೃಷ್ಟಿಯಿಂದ ಹೊರಗೆ ಕಳಿಸಿದ್ದಾರೆ. ಕೆಲ ಸಮಯದ ಬಳಿಕ ಎಂದಿನಂತೆ ಪಠ್ಯ ಚಟುವಟಿಕೆಗಳು ಆರಂಭವಾಗಿದೆ.

ಕೆಲವರಿಗೆ ಮಾತ್ರ ಭೂ ಕಂಪಿಸಿದ ಅನುಭವವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.

ಕೆಲ ದಿನಗಳ ಹಿಂದೆ ಸುಳ್ಯ, ಮಡಿಕೇರಿ ಭಾಗದಲ್ಲಿ ಹಲವು ಬಾರಿ ಭೂಮಿ ಕಂಪಿಸಿತ್ತು. ಇದೀಗ ಮೇರಿಹಿಲ್‌ ಭಾಗದಲ್ಲೂ ಭೂ ಕಂಪನದ ಅನುಭವವಾಗಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next