ವಿಜಯಪುರ : ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ದೀಪಾವಳಿ ಮುನ್ನಾ ದಿನವಾದ ಬುಧವಾರ ರಾತ್ರಿ ಮತ್ತೆ ಭೂಮಿ ಕಂಪಿಸಿದೆ. ಇದರಿಂದಾಗಿ ಜನರು ಭಯದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಬುಧವಾರ ರಾತ್ರಿ 8.26 ಕ್ಕೆ ಭೂಕಂಪನದ ಅನುಭವ ಆಗಿದೆ.
ಕಳ್ಳಕವಟಗಿ, ಘೋಣಸಗಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ, ಹುಬನೂರ, ಟಕ್ಕಳಕಿ, ಗ್ರಾಮಳ ಸುತ್ತಲಿನ ಪರಿಸರದಲ್ಲಿ ಭೂಕಂಪನ ಆಗಿದೆ.
ಭೂಮಿಯ ಆಳದಿಂದ ಭಾರಿ ಸದ್ದಿನೊಂದಿಗೆ ಭೂಮಿ ಕಂಪಿಸಿದ್ದು, ಮನೆಯಲ್ಲಿ ವಸ್ತುಗಳು ಅಲುಗಾಡಿ ಕೆಳಗೆ ಬಿದ್ದಿವೆ. ಇದರಿಂದ ಭಯಗೊಂಡ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಈಚೆಗೆ ಈ ಪರಿಸರದಲ್ಲಿ ಭೂಕಂಪನ ಸಾಮಾನ್ಯವಾಗಿದ್ದು, ಜನರು ಭಯದಲ್ಲೇ ಬದುಕುವಂತಾಗಿದೆ.
ದೀಪಾವಳಿ ಹಬ್ಬದ ಮುನ್ನಾ ದಿನವೂ ಭೂಮಿ ಕಂಪಿಸಿದ್ದು, ಜನರ ಹಬ್ಬದ ಸಂಭ್ರಮವನ್ನು ಕಿತ್ತುಕೊಂಡಿದೆ. ಜನರು ಭೂಕಂಪದ ಭೀತಿಯಲ್ಲಿ ನೆಮ್ಮದಿ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ : ಶಿಕ್ಷಕರ ನೇಮಕಾತಿಗೆ ಸಿಇಟಿ ಪರೀಕ್ಷೆ: ಸಚಿವ ನಾಗೇಶ್