Advertisement

ಭೂಮಿಯ ಪರಿಭ್ರಮಣೆಯಲ್ಲಿ ವ್ಯತ್ಯಾಸ

10:42 AM Aug 01, 2022 | Team Udayavani |

ವಾಷಿಂಗ್ಟನ್‌: ದಿನಕ್ಕೆಷ್ಟು ಗಂಟೆ ಎಂದು ಕೇಳಿದರೆ ಇಪ್ಪತ್ತನಾಲ್ಕು ಎಂದು ತಡವಿಲ್ಲದೆ ಉತ್ತರಿಸುತ್ತೇವೆ. ಅಲ್ಲವೇ? ತನ್ನಷ್ಟಕ್ಕೆ ತಾನೇ ಒಂದು ಪೂರ್ತಿ ಸುತ್ತು ಹಾಕುವುದಕ್ಕೆ 24 ಗಂಟೆಗಳು ಎಂದರ್ಥ.

Advertisement

ಆದರೆ, ಜು. 29ರಂದು ಭೂಮಿಯು 1.59 ಮಿಲಿ ಸೆಕೆಂಡ್‌ಗಳಷ್ಟು ಮುಂಚಿತವಾಗಿಯೇ ತನ್ನ ಪರಿಭ್ರಮಣೆಯನ್ನು ಮುಗಿಸಿದೆ! ಹಾಗಂತ, ಭೂಮಿಗೆ ಇಷ್ಟು ವೇಗವಾಗಿ ಪರಿಭ್ರಮಣ ನಡೆಸಿದ್ದು ಇದೇ ಮೊದಲೇನಲ್ಲ.

ವಿಜ್ಞಾನಿಗಳ ಪ್ರಕಾರ, 1960ರ ನಂತರ ಭೂಮಿಯ ಪರಿಭ್ರಮಣೆಯ ವೇಗ ಹೆಚ್ಚಾಗಿದೆ. 1960ರ ಜು. 19ರಂದು ಭೂಮಿ, ಸೂರ್ಯನನ್ನು 1.47 ಸೆಕೆಂಡ್‌ಗಳಷ್ಟು ಮೊದಲೇ ಸುತ್ತಿ ಬಂದಿತ್ತು.

ಕಾರಣವೇನು?
ಭೂಮಿಯ ಪರಿಭ್ರಮಣೆಯ ವೇಗ ಏಕೆ ಹೀಗೆ ಹೆಚ್ಚಾಗುತ್ತಿದೆ ಎಂಬುದಕ್ಕೆ ನಿಖರ ಕಾರಣಗಳು ಏನು ಎಂಬುದು ತಿಳಿದುಬಂದಿಲ್ಲ. ಜಾಗತಿಕ ಹವಾಮಾನ ಬದಲಾವಣೆ, ಭೂಮಿಯ ಒಳ ಮತ್ತು ಹೊರ ಪದರಗಳಲ್ಲಿ ಆಗುತ್ತಿರುವ ಬದಲಾವಣೆಗಳೇ ಕಾರಣವಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇನ್ನೂ ಕೆಲವು ಸಂಶೋಧಕರು, ಭೂಮಿಯ ಧ್ರುವಗಳಲ್ಲಿ ಆಗುತ್ತಿರುವ ಪಲ್ಲಟವೇ ಇದಕ್ಕೆ ಕಾರಣವಿರಬಹುದು ಎಂದು ಹೇಳಿದ್ದಾರೆ.

ಏರುಪೇರಾದರೆ ಸಮಸ್ಯೆ ಖಂಡಿತ!
ಭೂಮಿಯ ಪರಿಭ್ರಮಣೆಯ ವೇಗ ಹೆಚ್ಚುತ್ತಿರುವುದಿಂದ ಬೇರೆಯದ್ದೇ ಸಮಸ್ಯೆಗಳು ಉಂಟಾಗುತ್ತವೆ ಎಂದು ತಜ್ಞರು ಅಂದಾಜಿಸಿದ್ದಾರೆ. ಹೀಗೆ, ಕೆಲವು ಮಿಲಿಸೆಕೆಂಡ್‌ಗಳಷ್ಟು ಮುನ್ನವೇ ಭೂಮಿ ತನ್ನನ್ನು ತಾನು ಸುತ್ತು ಹಾಕುವುದು ಮುಂದುವರಿದರೆ, ಸಮಯದ ಲೆಕ್ಕಾಚಾರದಲ್ಲಿ ರೂಪಿಸಲಾಗಿರುವ ತಂತ್ರಜ್ಞಾನದಲ್ಲಿ (ಉದಾಹರಣೆಗೆ ಕಂಪ್ಯೂಟರ್‌ ಟೈಮಿಂಗ್‌), ಶೆಡ್ಯೂಲಿಂಗ್‌ ಸೇವೆಗಳಲ್ಲಿ ವ್ಯತ್ಯಯವಾಗುತ್ತದೆ. ಅಂದರೆ, ಡಿಜಿಟಲ್‌ ಕ್ಲಾಕ್‌ನಲ್ಲಿ ದಿನದ 24 ಗಂಟೆ ಮುಗಿಯುವಾಗ 23 ಗಂಟೆ 59 ನಿಮಿಷ 58 ಸೆಕೆಂಡ್‌ (23:59:58), ಆನಂತರ 23:59:59, ತದನಂತರ 00:00:00 (ಮಧ್ಯರಾತ್ರಿ 12 ಗಂಟೆ) 00:00:01 ಎಂದು ತೋರಿಸುವಂತೆ ಕೋಡಿಂಗ್‌ ಮಾಡಲಾಗಿರುತ್ತದೆ.

Advertisement

ಭೂಮಿಯ ವೇಗ ಸರಾಸರಿ 1 ಸೆಕೆಂಡ್‌ನ‌ಷ್ಟು ಹೆಚ್ಚಾಗಿರುವುದರಿಂದ ದಿನದ ಲೆಕ್ಕಾಚಾರದಲ್ಲಿ ಒಂದು ಸೆಕೆಂಡ್‌ ಕಡಿಮೆ ಮಾಡಬೇಕಾಗುತ್ತದೆ. ಆಗ, ಕಂಪ್ಯೂಟರ್‌ ಹಾಗೂ ಇನ್ನಿತರ ಡಿಜಿಟಲ್‌ ಸಾಧನಗಳಲ್ಲಿ ಅಳವಡಿಸಲಾಗಿರುವ ಸಮಯದ ಎಣಿಕೆ ವ್ಯವಸ್ಥೆಯನ್ನು 23:59:58ರಿಂದ ನೇರವಾಗಿ 00:00:00 (ಮಧ್ಯರಾತ್ರಿ 11:58ರಿಂದ ನೇರವಾಗಿ 12 ಗಂಟೆಗೆ) ಜಂಪ್‌ ಆಗುವಂತೆ ಮಾಡಬೇಕಾಗುತ್ತದೆ.

ಆದರೆ, ಇಷ್ಟು ಮಾಡಿದರೆ ಸಮಯ ಎಣಿಕೆ ಸಮಸ್ಯೆಯೇನೋ ಸರಿಹೋದೀತು ಆದರೆ, ಸಮಯದ ಎಣಿಕೆ ಆಧಾರ ಮೇಲೆ ಕಾರ್ಯನಿರ್ವಹಿಸುವ ‌ ಸಾಫ್ಟ್ ವೇರ್‌ ಗಳು ಉಳ್ಳ ಸಾಮಗ್ರಿಗಳು ಸರಿಯಾಗಿ ಕೆಲಸ ಮಾಡದಂತಾಗಬಹುದು. ಕಂಪ್ಯೂಟರೀಕೃತ ಅಥವಾ ಡಿಜಿಟಲ್‌ ವ್ಯವಸ್ಥೆಗಳಂತೂ ಸಂಪೂರ್ಣ ಕ್ರಾಷ್‌ ಆಗಿಬಿಡುವ ಅಪಾಯವಿರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next