Advertisement
ಕಾಲೇಜಿಗೆ ಹೋಗುತ್ತ ಒಂದಷ್ಟು ಸಂಪಾದನೆ ಮಾಡಬಯಸುವವರು ತಂತ್ರಜ್ಞಾನದ ಮೊರೆ ಹೋಗಬಹುದು. ಈ ತಂತ್ರಜ್ಞಾನ ಸಂಪಾದನೆಗೆ ಅನೇಕ ಅವಕಾಶಗಳನ್ನು ಒದಗಿಸುತ್ತಿವೆ. ಇವುಗಳಲ್ಲಿ ಒಂದು ಯೂಟ್ಯೂಬ್. ಯೂಟ್ಯೂಬ್‌ನಲ್ಲಿ ಸ್ವಂತ ಚಾನೆಲ್ ಆರಂಭಿಸಿ ನಿರಂತರವಾಗಿ ನಿಮಗೆ ತಿಳಿದಿರುವ ವಿಷಯಗಳ ಕುರಿತು ಮಾಹಿತಿ ಹಂಚಿಕೊಂಡು ಹಣ ಗಳಿಸಬಹುದು. ಈ ಮೂಲಕ ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಹಣ ಸಂಪಾದಿಸುವ ದಾರಿಯನ್ನು ಕಂಡುಕೊಳ್ಳಬಹುದು.
ಪ್ರತಿಯೊಬ್ಬರಲ್ಲೂ ಇಂದು ಸ್ಮಾರ್ಟ್ ಫೋನ್ ಇದೆ. ಸ್ಮಾರ್ಟ್ ಫೋನಿನಲ್ಲಿ ಗೂಗಲ್ ಅಕೌಂಟ್ ಮೂಲಕ ಯೂಟ್ಯೂಬ್ ಚಾನಲ್ ಅನ್ನು ಕ್ರಿಯೇಟ್ ಮಾಡಬಹುದು. ನಿಮಗೆ ತಿಳಿದಿರುವಂತಹ ಮತ್ತು ನೀವು ಕೌಶಲ ಹೊಂದಿರುವಂತಹ ವಿಷಯಗಳನ್ನು ಆಯ್ಕೆ ಮಾಡಿ ನಿಮ್ಮ ಯೂಟ್ಯೂಬ್ ಮೂಲಕ ಜನರಿಗೆ ಪ್ರಚುರ ಪಡಿಸಬಹುದು. ನೀವು ಕೊಡುವ ಕಂಟೆಂಟ್ ಗುಣಮಟ್ಟದ್ದಾಗಿದ್ದರೆ ಜನರು ನಿಮ್ಮ ಯೂಟ್ಯೂಬ್ ಚಾನಲ್ ಅನ್ನು ಅನುಸರಿಸುತ್ತಾರೆ. ವಿಷಯದ ಆಯ್ಕೆ
ಯೂಟ್ಯೂಬ್ ನಲ್ಲಿ ಅನೇಕ ವಿಧದ ವೀಕ್ಷಕರು ಇದ್ದಾರೆ. ತಮಗೆ ಗೊತ್ತಿರದ ವಿಷಯಗಳ ಮೇಲೆ ಅವರು ನಿತ್ಯ ಯೂಟ್ಯೂಬ್‌ನಲ್ಲಿ ಮಾಹಿತಿ ಸಂಗ್ರಹಿಸುತ್ತಾ ಇರುತ್ತಾರೆ. ಹೀಗಾಗಿ ಜನರಿಗೆ ಮಾಹಿತಿ ನೀಡುವಂಥ ವಿಷಯಗಳನ್ನು ಆಯ್ಕೆ ಮಾಡಿಕೊಂಡು ವೀಡಿಯೋಗಳನ್ನು ತಯಾರಿಸಿ ನಿಮ್ಮ ಚಾನೆಲ್‌ನಲ್ಲಿ ಹಂಚಿಕೊಳ್ಳಬಹುದು.
Related Articles
ನೀವು ಯಾವೊಂದು ಸಿನೆಮಾವನ್ನು ಕೂಡ ತಪ್ಪದೆ ವೀಕ್ಷಿಸುತ್ತಿದ್ದೀರಿ ಮತ್ತು ವಿಮರ್ಶೆ ಮಾಡುವ ಕೌಶಲ ನೀವು ಹೊಂದಿರುವುದಾದರೆ ಮನೆಯಲ್ಲೇ ಕುಳಿತು ನೀವು ನೋಡಿಸ ಹೊಸ ಸಿನೆಮಾವನ್ನು ವಿಮರ್ಶೆ ಮಾಡಿ ಹಣ ಗಳಿಸಬಹುದು.
Advertisement
ತಂತ್ರಜ್ಞಾನ ಮಾಹಿತಿನೀವು ತಂತ್ರಜ್ಞಾನದ ಬಗ್ಗೆ ಎಕ್ಸ್‌ಪರ್ಟ್ ಆಗಿದ್ದರೆ ನೀವು ಮನೆಯಲ್ಲೇ ಕುಳಿತು ತಂತ್ರಜ್ಞಾನದ ಬಗ್ಗೆ ಜನರಿಗೆ ನಿಮ್ಮ ಚಾನಲ್ ಮೂಲಕ ಸಂಕ್ಷಿಪ್ತವಾಗಿ ವಿವರಣೆ ನೀಡಬಹುದು. ಹೀಗೆ ಹತ್ತಾರು ವಿಷಯದ ಮೇಲೆ ನಿಮ್ಮಲ್ಲಿ ಅಡಗಿಕೊಂಡಿರುವ ಕೌಶಲವನ್ನು ಪರಿಗಣಿಸಿ ಯೂಟ್ಯೂಬ್‌ನಲ್ಲಿ ಹಣ ಗಳಿಸಬಹುದು. ಹಣ ಗಳಿಕೆ ಹೇಗೆ
ನೀವು ಹಾಕುವ ವಿಡಿಯೋಗಳಿಗೆ ತುಂಬಾ ಪ್ರಮಾಣದ ವೀಕ್ಷಕರು ಸಬ್‌ಸ್ಕ್ರಬರ್ ಇದ್ದರೆ ಜಾಹೀರಾತುಗಳ ಜತೆ ಕೈಜೋಡಿಸಬಹುದು. ವಿಡಿಯೋಗಳಿಗೆ ಬರುವ ಜಾಹೀರಾತಿನ ಆಧಾರದ ಮೇಲೆ ಡಾಲರ್ ರೂಪದಲ್ಲಿ ಹಣ ಸಿಗುತ್ತದೆ. ಪೂರ್ವ ಸಿದ್ಧತೆ ಮುಖ್ಯ
ಯೂಟ್ಯೂಬ್ ಅಕೌಂಟ್ ಕ್ರಿಯೇಟ್ ಮಾಡುವುದು ಕಷ್ಟದ ಕೆಲಸವಲ್ಲ. ಆದರೆ ಜನರಿಗೆ ನಿಮ್ಮ ಚಾನಲ್ ಸ್ವೀಕರಿಸಬೇಕಾದರೆ ನೀವು ಕೆಲವೊಂದು ಪೂರ್ವ ಸಿದ್ಧತೆ ಮಾಡಬೇಕಾಗುತ್ತದೆ. · ನೀವು ಜನರೆದುರು ಪ್ರಸ್ತುತ ಪಡಿಸುವ ವಿಷಯ ಹೊಸದಾಗಿರಬೇಕು.
· ಜನರಿಗೆ ಅದು ಉಪಯುಕ್ತವಾಗಿರಬೇಕು
· ವಿಷಯ ಸಂಗ್ರಹಣೆ ಮತ್ತು ತಾಂತ್ರಿಕ ಕೆಲಸಗಳು ಅಚ್ಚುಕಟ್ಟಾಗಿರಬೇಕು.
· ಜನರೊಂದಿಗೆ ನಿತ್ಯ ಸಂಪರ್ಕವಿರಬೇಕು.
· ಅನೇಕ ಜನರ ಸಂಪರ್ಕವಿರಬೇಕು.
· ಕಾಪಿ ರೈಟ್ಸ್ ಮತ್ತು ವಿವಾದಾತ್ಮಕ ವಿಷಯಗಳ ಬಗ್ಗೆ ಎಚ್ಚರ ಅಗತ್ಯ. ವಿಶ್ವ