Advertisement

Mind Game; ಪಾಶ್ಚಿಮಾತ್ಯ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ ಜೈಶಂಕರ್

10:17 AM May 15, 2024 | Team Udayavani |

ಕೋಲ್ಕತಾ: ಪಾಶ್ಚಿಮಾತ್ಯ ಮಾಧ್ಯಮಗಳಲ್ಲಿ ಭಾರತದಲ್ಲಿನ ಚುನಾವಣ ಸಮೀಕ್ಷೆಗಳ ‘ಋಣಾತ್ಮಕ’ ಪ್ರಸಾರದ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಮಂಗಳವಾರ ಕಿಡಿ ಕಾರಿದ್ದಾರೆ.

Advertisement

ಕೋಲ್ಕತಾದಲ್ಲಿ ಅವರ ಪುಸ್ತಕ ‘ವೈ ಭಾರತ್ ಮ್ಯಾಟರ್ಸ್’ ಬಂಗಾಳಿ ಆವೃತ್ತಿಯ ಬಿಡುಗಡೆಯ ನಂತರ ಸಂವಾದವನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್,’ಹಳೆಯ ಅಭ್ಯಾಸಗಳು ಕಠಿನವಾಗಿ ಅಂತ್ಯವಾಗುತ್ತದೆ. ಅವರು ಕಳೆದ 200 ವರ್ಷಗಳಿಂದ ಪ್ರಪಂಚದ ಮೇಲೆ ಪ್ರಭಾವ ಬೀರಿದ್ದಾರೆ, ಆದ್ದರಿಂದ ಅವರು ತಮ್ಮ ಹಳೆಯ ಚಾಳಿಯನ್ನು ಬಿಡಲು ಸಾಧ್ಯವಾಗುತ್ತಿಲ್ಲ’ ಎಂದರು.

ಮತದಾನದ ಫಲಿತಾಂಶಗಳನ್ನು ನಿರ್ಧರಿಸಲು ನ್ಯಾಯಾಲಯದ ಮೊರೆ ಹೋಗಬೇಕಾದ ದೇಶಗಳು ಚುನಾವಣೆಗಳನ್ನು ನಡೆಸುವ ಬಗ್ಗೆ ಗಮನ ನೀಡುವುದನ್ನು ನಿಲ್ಲಿಸಬೇಕು ಎಂದು ಜೈಶಂಕರ್ ತಿರುಗೇಟು ನೀಡಿದ್ದಾರೆ.

“ಪಾಶ್ಚಿಮಾತ್ಯ ದೇಶಗಳು ನಮ್ಮ ಮೇಲೆ ಪ್ರಭಾವ ಬೀರಲು ಬಯಸುತ್ತಾರೆ ಏಕೆಂದರೆ ಈ ಅನೇಕ ದೇಶಗಳು ಕಳೆದ 70-80 ವರ್ಷಗಳಿಂದ ಈ ಪ್ರಪಂಚದ ಮೇಲೆ ಪ್ರಭಾವ ಬೀರುತ್ತಿದ್ದೇವೆ ಎಂದು ಭಾವಿಸುತ್ತಿದ್ದಾರೆ. ಕಳೆದ 200 ವರ್ಷಗಳಿಂದ ಪ್ರಪಂಚದ ಮೇಲೆ ಪ್ರಭಾವ ಬೀರಿವೆ ಎಂದು ಭಾವಿಸಿದ್ದಾರೆ.ಆ ಹಳೆಯ ಅಭ್ಯಾಸಗಳನ್ನು ಅಷ್ಟು ಸುಲಭವಾಗಿ ಹೇಗೆ ಬಿಟ್ಟುಬಿಡುತ್ತಾರೆ ಎಂದು ನೀವು ನಿರೀಕ್ಷಿಸುತ್ತೀರಿ?” ಎಂದು ಕಿಡಿ ಕಾರಿದರು.

”ರಾಷ್ಟ್ರವನ್ನು ನಿಯಂತ್ರಿಸಲು ನಿರ್ದಿಷ್ಟ ವರ್ಗದ ಜನರ, ಪಾಶ್ಚಿಮಾತ್ಯ ಮಾಧ್ಯಮದ ಬಯಕೆಯನ್ನು ಭಾರತೀಯ ಮತದಾರರು ಬಯಸುವುದಿಲ್ಲ. ಹಾಗಾಗಿ ಅವರು ಇದರಿಂದ ವಿಚಲಿತರಾಗಿ ಮಾಧ್ಯಮಗಳಲ್ಲಿ ನಕಾರಾತ್ಮಕ ಚಿತ್ರಣ ನೀಡುತ್ತಾರೆ. ಅವರ ಗ್ರಹಿಕೆಯಂತೆ ಅವರ ಆದರ್ಶಕ್ಕೆ ಅನುಗುಣವಾಗಿ ಭಾರತವು ನಿಜವಾಗಿಯೂ ಏನಾಗಿರಬೇಕು ಎನ್ನುವ ಅಗತ್ಯತೆ ಇಲ್ಲ” ಎಂದರು.

Advertisement

“ಪಾಶ್ಚಿಮಾತ್ಯ ದೇಶಗಳು ಅವರದ್ದೇ ಆದ ಸಿದ್ಧಾಂತ ಮತ್ತು ಜೀವನ ವಿಧಾನವನ್ನು ಬಯಸುವುದರಿಂದ ಈ ದೇಶವನ್ನು ಆಳಬೇಕೆಂದು ಅವರು ಬಯಸುತ್ತಾರೆ. ಭಾರತೀಯ ಜನಸಂಖ್ಯೆಯು ವಿಭಿನ್ನವಾಗಿ ಭಾವಿಸಿದಾಗ ಅವರು ವಿಚಲಿತರಾಗುತ್ತಾರೆ” ಎಂದು ಜೈಶಂಕರ್ ಹೇಳಿರುವುದಾಗಿ ANI ವರದಿ ಮಾಡಿದೆ.

”ಪಾಶ್ಚಿಮಾತ್ಯ ಮಾಧ್ಯಮಗಳು, ಇಲ್ಲಿನ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳನ್ನು ಬಹಿರಂಗವಾಗಿ ಅನುಮೋದಿಸಿವೆ. ಆದರೆ ಜನರು ತಮ್ಮ ಆದ್ಯತೆಯನ್ನು ಮರೆಮಾಡುವುದಿಲ್ಲ. ಅವರು ಬಹಳ ಬುದ್ಧಿವಂತರು,  ಬಹಳಷ್ಟು ಅನುಭವಿ ಮತ್ತು ಚತುರರು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next