Advertisement
ಎ. 14ರಂದು ಕನ್ನಡ ವೆಲ್ಫೆàರ್ ಸೊಸೈಟಿ ಘಾಟ್‌ಕೋಪರ್ ವತಿಯಿಂದ ಘಾಟ್‌ಕೋಪರ್ ಪೂರ್ವದಲ್ಲಿರುವ ಸಂಘದ ಮಹೇಶ್ ಶೆಟ್ಟಿ ಅಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ ಯುಗಾದಿ ಹಬ್ಬದ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕನ್ನಡ ವೆಲ್ಫೆàರ್ ಸೊಸೈಟಿ ಘಾಟ್‌ಕೋಪರ್ ಕಳೆದ ಹಲವಾರು ವರ್ಷಗಳಿಂದ ಕಲೆ, ಸಂಸ್ಕೃತಿ, ನಾಡಿನ ಸಂಪ್ರದಾಯ, ಆಚಾರ, ವಿಚಾರಗಳನ್ನು ಉಳಿಸಿ- ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ವೆಲ್ಫೆàರ್ ಸೊಸೈಟಿ ಘಾಟ್‌ಕೋಪರ್ ಇದರ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆ ಮಾತನಾಡಿ, ಯುಗಾದಿ ಹಬ್ಬವು ವಸಂತ ಋತುವಿನಲ್ಲಿ ಬರುವ ಬಹಳ ವಿಶೇಷ ಹಬ್ಬವಾಗಿದೆ. ಮನಸ್ಸಿಗೆ ಬಹಳಷ್ಟು ಮುದ ನೀಡುವ ಹಬ್ಬ ಇದಾಗಿದೆ. ಈ ಸಂದರ್ಭದಲ್ಲಿ ಮರಗಿಡಗಳು ಹೂ ಬಿಟ್ಟು, ಹಚ್ಚಹಸುರಾಗಿ ಕಂಗೊಳಿಸುವುದನ್ನು ನೋಡುವುದೇ ಸಂಭ್ರಮ. ನಮ್ಮ ಹಿರಿಯರು ಬಹಳ ಸಂಪ್ರ ದಾಯಬದ್ಧವಾಗಿ ಯುಗಾದಿ ಹಬ್ಬವನ್ನು ಆಚರಿಸುವುದನ್ನು ಕಾಣಬಹುದು. ಬೇವು- ಬೆಲ್ಲವನ್ನು ನೀಡಿ, ನಾವೆಲ್ಲರೂ ಕಷ್ಟ, ಸುಖಗಳನ್ನು ಸಮಾನವಾಗಿ ಹಂಚಿಕೊಳ್ಳುವ ಉತ್ತಮ ಸಂದೇಶ ಈ ಯುಗಾದಿ ಹಬ್ಬದ ಆಚರಣೆಯಲ್ಲಿ ಅಡಗಿದೆ. ಕೊರೊನಾ ಮಹಾಮಾರಿಯ ಕಠಿನ ವಾತಾವರಣದ ಮಧ್ಯೆಯೂ ಈ ನಮ್ಮ ಸಂಘದ ಸದಸ್ಯರೆಲ್ಲರೂ ಸೇರಿ ಯುಗಾದಿ ಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿದ್ದಾರೆ ಎನ್ನಲು ಸಂತೋಷವಾಗುತ್ತಿದೆ. ಈ ಕಾರ್ಯ ಕ್ರಮವನ್ನು ಆಯೋಜಿಸುವಲ್ಲಿ ಮಹೇಶ್ ಶೆಟ್ಟಿ ಅವರ ಸಹಕಾರ ಅವಿಸ್ಮರಣೀಯ. ಇಂತಹ ದಾನಿಗಳ ಪ್ರೋತ್ಸಾಹದಿಂದ ನಮ್ಮ ಸಂಸ್ಥೆಯ ಎಲ್ಲ ಕಾರ್ಯಕ್ರಮಗಳನ್ನು ಉತ್ಸಾಹದಿಂದ ಆಚರಿಸಲು ಸಾಧ್ಯವಾಗುತ್ತಿದೆ. ಅವರ ಸಹಕಾರ ನಿರಂತರವಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.
Related Articles
ಕೋಶಾಧಿಕಾರಿ ತಿಮ್ಮ ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ಎನ್. ಶೆಟ್ಟಿ, ಕೃಷ್ಣ ಶೆಟ್ಟಿ, ಮಲ್ಲಿಕಾ ಶೆಟ್ಟಿ, ಶಂಕರ ಶೆಟ್ಟಿ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಮಾಜಿ ಅಧ್ಯಕ್ಷ ನಾರಾಯಣ ಶೆಟ್ಟಿ ನಂದಳಿಕೆ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
Advertisement