ಚೆನ್ನೈ: ಎಲೆಕ್ಟ್ರಾನಿಕ್ ಸ್ಕೂಟರ್ ಸ್ಫೋಟಗೊಂಡು ಅಪ್ಪ-ಮಗಳು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದಿದೆ.
ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ ಮುರಾಯಿ ವರ್ಮಾ(49) ಅವರು ಘಟನೆಗೆ ಎರಡು ದಿನಗಳ ಹಿಂದಷ್ಟೇ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ದರು.
ಶುಕ್ರವಾರದಂದು ಅವರು ಮಗಳು ಮೋಹನಾ ಪ್ರೀತಿಯೊಂದಿಗೆ ಸ್ಕೂಟರ್ನ್ನು ಮನೆಯ ಹೊರಾಂಗಣದಲ್ಲಿ ಚಾರ್ಜಿಗೆ ಹಾಕಿದ್ದಾರೆ. ನಂತರ ಮನೆಯೊಳಗೆ ಹೋಗಿದ್ದ ಅಪ್ಪ-ಮಗಳು, ಸ್ವಲ್ಪ ಸಮಯ ಬಿಟ್ಟು ಸ್ಕೂಟರ್ನತ್ತ ಬಂದಿದ್ದಾರೆ.
ಆಗ ಇದ್ದಕ್ಕಿದ್ದಂತೆ ಸ್ಕೂಟರ್ ಸ್ಫೋಟಗೊಂಡಿದೆ. ಅದರಿಂದಾಗಿ ಹೊತ್ತಿಕೊಂಡ ಬೆಂಕಿಯು ಪಕ್ಕದಲ್ಲಿದ್ದ ಎರಡು ಬೇರೆ ಗಾಡಿಗಳಿಗೆ ಹತ್ತಿ ಉರಿದಿದೆ. ಮುರಾಯಿ ಅವರ ಮನೆಗೂ ಬೆಂಕಿ ತಗುಲಿದ್ದು, ಅಪ್ಪ ಮಗಳಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ. ಸ್ಕೂಟರ್ನ ಬ್ಯಾಟರಿಯು ಓವರ್ ಚಾರ್ಜ್ ಆದ ಹಿನ್ನೆಲೆ ಸ್ಫೋಟಗೊಂಡಿರುವುದಾಗಿ ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.