Advertisement

ಮನೆಯಲ್ಲೇ ಕುಳಿತು ಚಿಕಿತ್ಸೆ ಪಡೆಯಿರಿ

04:25 PM Sep 08, 2020 | Suhan S |

ಕೋಲಾರ: ಜನತೆ ಸಾಮಾನ್ಯ ಕೆಮ್ಮು, ನೆಗಡಿ, ಜ್ವರ ಮತ್ತಿತರೆ ಸಮಸ್ಯೆಗಳಿಗೆ ಆಸ್ಪತ್ರೆಗಳಿಗೆ ಅಲೆಯುವುದನ್ನು ತಪ್ಪಿಸಲು ಮನೆಯಲ್ಲೇ ಕುಳಿತು ವೈದ್ಯರಿಂದ ಚಿಕಿತ್ಸೆ ಪಡೆಯಲು ಇ-ಸಂಜೀವಿನಿ ಹೊರ ರೋಗಿಗಳ ಸೇವೆ ಆರಂಭಿಸಿದೆ ಎಂದು ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್‌.ಎನ್‌. ವಿಜಯಕುಮಾರ್‌ ತಿಳಿಸಿದರು.

Advertisement

ತಮ್ಮ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ದೇಶಾದ್ಯಂತ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿ ತುರ್ತು ಆರೋಗ್ಯ ಸಮಸ್ಯೆಗಳಿಗೆ ರೋಗಿಗಳು ಆಸ್ಪತ್ರೆಗಳಿಗೆ ಭೇಟಿ ನೀಡುವುದು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ಆರೋಗ್ಯ ಸೇವೆ ಒದಗಿಸುವ ಸಲುವಾಗಿ ಕೇಂದ್ರ ಸರ್ಕಾರ ಇ-ಸಂಜೀವಿನಿ ಒಪಿಡಿಯನ್ನು ಕಾರ್ಯರೂಪಕ್ಕೆ ತಂದಿದೆ ಎಂದು ಹೇಳಿದರು. ವಿಡಿಯೋ ಮೂಲಕ ಸೇವೆ: ಕೇಂದ್ರದ ಆರೋಗ್ಯ ಸಚಿವಾಲಯ ರಾಷ್ಟ್ರೀಯ ಟೆಲಿ ಸಮಾಲೋಚನಾ ಸೇವೆ ಆ್ಯಪ್‌ ಸಿದ್ಧಪಡಿಸಿದ್ದು. ಮೊಬೈಲ್‌ನ ಪ್ಲೇ ಸ್ಟೋರ್‌ ಅಥವಾ ಗೂಗಲ್‌ನಲ್ಲಿ ಇ-ಸಂಜೀವಿನಿ ಒಪಿಡಿ ಎಂದು ನಮೂದಿಸಿದರೆ ಮುಖಪುಟ ತೆರೆದುಕೊಳ್ಳುತ್ತದೆ. ರೋಗಿಯ ರಿಜಿಸ್ಟ್ರೇಷನ್‌ನಲ್ಲಿ ಮೊಬೈಲ್‌ ಸಂಖ್ಯೆ ನಮೂದಿಸಿದರೆ ಒಪಿಡಿ ಸಂಖ್ಯೆ (ಟೋಕನ್‌) ಬರುತ್ತದೆ. ಇದನ್ನು ನಮೂದಿಸಿದರೆ ರಿಜಿಷ್ಟ್ರೇಷನ್‌ ಅಪ್ಲಿಕೇಷನ್‌ ತೆರೆದುಕೊಳ್ಳುತ್ತದೆ ಎಂದು ತಿಳಿಸಿದರು.

ವಿಡಿಯೋ ಕಾಲ್‌ ಮೂಲಕ ಸಂಪರ್ಕಿಸಿ: ಇದರಲ್ಲಿ ರೋಗಿಯ ಹೆಸರು, ಲಿಂಗ, ವಯಸ್ಸು ಹಾಗೂ ವಿಳಾಸ ನಮೂದಿಸಿ ಲಾಗಿನ್‌ ಆದರೆ, ಟೋಕನ್‌ ನಂಬರ್‌ ದೊರೆಯುತ್ತದೆ. ಟೋಕನ್‌ ನಂಬರ್‌ ನೀಡಿ ವೈದ್ಯರನ್ನು ವಿಡಿಯೋ ಕಾಲ್‌ ಮೂಲಕ ಸಂಪರ್ಕಿಸಿದರೆ ಕಾಯಿಲೆ ಕುರಿತು ವಿಚಾರಣೆ ನಡೆಸಿ ಸೂಕ್ತ ಚಿಕಿತ್ಸೆ ಬರೆದುಕೊಡುತ್ತಾರೆ ಎಂದು ವಿವರಿಸಿದರು. ಜಿಲ್ಲೆಯಲ್ಲಿ 190 ಆರೋಗ್ಯ ಉಪ ಕೇಂದ್ರಗಳಿದ್ದು, ಎಲ್ಲಾ ಕೇಂದ್ರಗಳ ಒಪಿಡಿಗಳಿಗೆ ಬಿಎಸ್ಸಿ ನರ್ಸಿಂಗ್‌ ಮುಗಿಸಿರುವ ಮಧ್ಯಮ ಹಂತದ ಆರೋಗ್ಯ ಸೇವಾಕರ್ತರನ್ನು ಸರ್ಕಾರ ನಿಯೋಜಿಸಿದೆ. ಈ ಆರೋಗ್ಯ ಸೇವಾಕರ್ತರು ಕೋವಿಡ್ ನಿರ್ವಹಣೆಯಲ್ಲಿ ತರಬೇತಿ ಪಡೆದಿರುವುದರಿಂದ ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆಗೆ ಹೆಚ್ಚು ಅನುಕೂಲ ಆಗಲಿದೆ ಎಂದು ನುಡಿದರು.

ಇ-ಸಂಜೀವಿನಿ ಒಪಿಡಿ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಸಿ.ವಿ.ನಾರಾಯಣಸ್ವಾಮಿ ಮಾತನಾಡಿ, ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳ 48 ತಜ್ಞ ವೈದ್ಯರು ಇ ಸಂಜೀವಿನಿ ಒಪಿಡಿಗೆ ನೋಂದಣಿ ಮಾಡಿಸಿಕೊಂಡಿದ್ದು, ಬೆಳಗ್ಗೆ 9ರಿಂದ ಸಂಜೆ 4.30ರವರೆಗೆ ಕಾರ್ಯನಿರ್ವ  ಹಿಸುತ್ತಾರೆ ಎಂದು ಹೇಳಿದರು. ವೈದ್ಯರು ಸೂಚಿಸುವ ಔಷಧವನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲವೇ ಹೊರಗಡೆಯಿಂದ ತರಿಸಿಕೊಳ್ಳಬಹುದು ಎಂದು ವಿವರಿಸಿದರು.

ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ? :  “ಇ-ಸಂಜೀವಿನಿ ಒಪಿಡಿ’ ಆ್ಯಪ್‌ ಅನ್ನು ಮೊಬೈಲ್‌ನ ಪ್ಲೇ ಸ್ಟೋರ್‌ ಅಥವಾ ಗೂಗಲ್‌ನಲ್ಲಿ ನಮೂದಿಸಿದರೆ ಮುಖಪುಟ ತೆರೆದುಕೊಳ್ಳುತ್ತದೆ. ರೋಗಿಯ ರಿಜಿಸ್ಟ್ರೇಷನ್‌ನಲ್ಲಿ ಮೊಬೈಲ್‌ ಸಂಖ್ಯೆ ನಮೂದಿಸಿದರೆ ಒಪಿಡಿ ಸಂಖ್ಯೆ (ಟೋಕನ್‌) ಬರುತ್ತದೆ. ಇದನ್ನು ನಮೂದಿಸಿದರೆ ರಿಜಿಷ್ಟ್ರೇಷನ್‌ ಅಪ್ಲಿಕೇಷನ್‌ ತೆರೆದುಕೊಳ್ಳುತ್ತದೆ. ಇದರಲ್ಲಿ ರೋಗಿಯ ಹೆಸರು, ಲಿಂಗ, ವಯಸ್ಸು ಹಾಗೂ ವಿಳಾಸ ನಮೂದಿಸಿ ಲಾಗಿನ್‌ ಆದರೆ, ಟೋಕನ್‌ ನಂಬರ್‌ ದೊರೆಯುತ್ತದೆ. ಟೋಕನ್‌ ನಂಬರ್‌ ನೀಡಿ ವೈದ್ಯರನ್ನು ವಿಡಿಯೋ ಕಾಲ್‌ ಮೂಲಕ ಸಂಪರ್ಕಿಸಿ, ಸೂಕ್ತ ಚಿಕಿತ್ಸಾ ಮಾಹಿತಿ ಪಡೆಯಿರಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next