Advertisement

ರೈತರಿಗೆ ಇ-ಪಾವತಿ ವ್ಯವಸ್ಥೆ ಪರಿಶೀಲನೆ

01:44 PM Dec 06, 2021 | Team Udayavani |

ಕೋಲಾರ: ನಗರದ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಗೆ ರೇಷ್ಮೆ ಆಯುಕ್ತ ಪೆದ್ದಪ್ಪಯ್ಯ ಭೇಟಿ ನೀಡಿ ಇತ್ತೀಚೆಗೆ ಆರಂಭಿಸಿರುವ ಇ ಪಾವತಿ ವ್ಯವಸ್ಥೆ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಿದರು.

Advertisement

ತಾಲೂಕಿನ ಕ್ಯಾಲನೂರು ರೇಷ್ಮೆ ಗೂಡು ಮಾರುಕಟ್ಟೆಗೆ ಭೇಟಿ ನೀಡಿದ ನಂತರ ಕೋಲಾರಗೂಡು ಮಾರುಕಟ್ಟೆಗೆ ಬಂದ ಆಯುಕ್ತಪೆದ್ದಪ್ಪಯ್ಯ ಮಾರುಕಟ್ಟೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಸಣ್ಣ ರೀಲರ್ಗೆ ತೊಂದರೆ: ರೀಲರ್ಗಳ ಪರವಾಗಿ ಮಾತನಾಡಿದ ಸಾಬೀರ್‌ ಪಾಷ್‌, ಇ-ಪಾವತಿ ವ್ಯವಸ್ಥೆಯಿಂದ ಸಣ್ಣ ಸಣ್ಣ ರೀಲರ್ಗೆ ತೊಂದರೆಯಾಗಿದೆ. ಪ್ರಸ್ತುತ ಗೂಡು ಕಡಿಮೆ ಬರುತ್ತಿದೆ. 100 ಲಾಟ್‌ ಬಂದರೆ 100 ರೀಲರ್ಇದ್ದರೆ ವಹಿವಾಟು ಸಾಗುತ್ತದೆ. ಇಲ್ಲದಿದ್ದರೆ ಗೂಡು ಇಲ್ಲೇ ಉಳಿಯುತ್ತದೆ. ಸಣ್ಣ ಸಣ್ಣರೀಲರ್ ಮುಂಗಡ ಹಣ ಪಾವತಿಸುವಸಾಮರ್ಥ್ಯ ಹೊಂದಿರುವುದರಿಲ್ಲ. ಈವ್ಯವಸ್ಥೆಯಿಂದ ರೇಷ್ಮೆ ಉದ್ದಿಮೆಗೆ ಹಿನ್ನಡೆ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಹೆಚ್ಚುವರಿ ಆ ದಿನವೇ ಪಾವತಿಸಿ: ಇ-ಪಾವತಿವ್ಯವಸ್ಥೆಯಡಿ ತೂಕದ ಯಂತ್ರಕ್ಕೆ 11 ಕೇಜಿನಿಗದಿಪಡಿಸಲಾಗಿದೆ. ಇದಕ್ಕಿಂತ ಕಡಿಮೆ ಇದ್ದರೆತೆಗೆದುಕೊಳ್ಳುವುದಿಲ್ಲ. ತೂಕ ಎಷ್ಟಿದೆಯೋ ಅಷ್ಟುಮಾತ್ರ ಹಣ ಕಟಾವಣೆ ಆಗಬೇಕು, ಹಣ ಕಡಿಮೆಇದ್ದರೂ ತೂಕ ಮಾಡಬೇಕು, ತೂಕ ಮುಗಿದ ನಂತರ ಉಳಿಕೆ ಹಣ ಅಂದೇ ರೀಲರ್ಪಾವತಿಸಲು ಅನು ಕೂಲವಾಗುವಂತೆ ಸಾಫ್ಟ್‌ ವೇರ್‌ನಲ್ಲಿ ಬದಲಾವಣೆ ಮಾಡಬೇಕು. ಗೂಡು ಖರೀದಿ ನಂತರ ಖಾತೆಯಲ್ಲಿ ಉಳಿಯುವಹೆಚ್ಚುವರಿ ಹಣವನ್ನು ಆ ದಿನವೇ ವಾಪಸ್‌ಮಾಡಬೇಕು ಎಂದು ರೀಲರ್ ಸಾಬೀರ್‌ ಪಾಷ ಒತ್ತಾಯಿಸಿದರು.

ನಗದು ವ್ಯವಸ್ಥೆ ಸಾಧ್ಯವಿಲ್ಲ: ಇ-ಪಾವತಿ ವ್ಯವಸ್ಥೆಯಿಂದ ಸಣ್ಣ ರೀಲರ್ಗೆ ತುಂಬಾತೊಂದರೆಯಾಗಿದೆ, ಹೀಗಾಗಿ ನಗದು ಪಾವತಿ ವ್ಯವಸ್ಥೆ ಕಲ್ಪಿಸಬೇಕು ಎಂದು ಕೆಲ ರೀಲರ್ಗಳುಒತ್ತಾಯಿಸಿದಾಗ ಪ್ರತಿಕ್ರಿಯಿಸಿದ ರೇಷ್ಮೆ ಇಲಾಖೆ ಜಂಟಿ ನಿರ್ದೇಶಕ ಬೈರಪ್ಪ, ಗೂಡುಮಾರುಕಟ್ಟೆಯಲ್ಲಿ ನಗದು ಪಾವತಿ ವ್ಯವಸ್ಥೆ ಸಂಪೂರ್ಣ ತೆಗೆದುಹಾಬೇಕೆಂದು ಕೇಂದ್ರದ ನಿರ್ದೇಶನ ಮತ್ತು ರಾಜ್ಯ ಸರ್ಕಾರದ ಆಶಯ. ಇದರಲ್ಲಿ ಬದಲಾವಣೆ ಸಾಧ್ಯವಿಲ್ಲ. ರಾಜ್ಯದರಾಮನಗರ ಇನ್ನಿತರೆ ಮಾರುಕಟ್ಟೆಯಲ್ಲಿ ಇ-ಪಾವತಿ ವ್ಯವಸ್ಥೆ ಸರಾಗವಾಗಿ ನಡೆಯುತ್ತಿದೆ ಎಂದು ತಿಳಿಸಿದರು.

Advertisement

ಶೌಚಗೃಹದ ವ್ಯವಸ್ಥೆ ಮಾಡಿ: ಸರ್ಕಾರಿರೇಷ್ಮೆಗೂಡು ಮಾರುಕಟ್ಟೆಯ ಅವ್ಯವಸ್ಥೆಯ ಬಗ್ಗೆಗಮನ ಸೆಳೆದ ರೇಷ್ಮೆ ಬೆಳೆಗಾರರ ಅಭಿವೃದ್ಧಿಸಂಘದ ಅಧ್ಯಕ್ಷ ನಾಗನಾಳ ಶ್ರೀನಿವಾಸ್‌, ಮಳೆಬಂದಾಗ ನೀರು ಸೋರಿ ಸಮಸ್ಯೆ ಆಗುತ್ತಿದೆ. ಶೌಚಗೃಹದ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಸೋಂಕು ನಿವಾರಕ ಸಿಂಪಡಿಸಿ: ಕೋಲಾರ ಮತ್ತು ಕ್ಯಾಲನೂರು ರೇಷ್ಮೆ ಗೂಡುಮಾರುಕಟ್ಟೆಯಲ್ಲಿ ರೇಷ್ಮೆಗೆ ಸಂಬಂ ಧಿಸಿದಸೋಂಕುನಿವಾರಕ, ಬ್ಲೀಚಿಂಗ್‌ ಇನ್ನಿತರೆ ವಸ್ತುಗಳಮಾರಾಟಕ್ಕೆ ಮಳಿಗೆ ತೆರೆಯಲು ಅವಕಾಶಕಲ್ಪಿಸುವಂತೆ ಕೋರಿದರು. ಇದಕ್ಕೆ ಸ್ಪಂದಿಸಿದಆಯು ಕ್ತರು ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.

ರೇಷ್ಮೆ ಇಲಾಖೆ ಉಪನಿರ್ದೇಶಕರ ಕಚೇರಿಗೆ ಆಯುಕ್ತರು ಭೇಟಿ ನೀಡಿದಾಗ ಕಚೇರಿಶಿಥಿಲಗೊಂಡಿರುವ ಕುರಿತು ಅಧಿಕಾರಿಗಳುಗಮನ ಸೆಳೆದಾಗ ದುರಸ್ತಿ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶನ ನೀಡಿದರು.

ಸೋಂಕು ನಿವಾರಕ ಬಿಡುಗಡೆ: ಇತ್ತೀಚಿನ ದಿನಗಳಲ್ಲಿ ರೇಷ್ಮೆ ಹುಳುಗಳಿಗೆ ಸುಣ್ಣಕಟ್ಟು ರೋಗ ಬಾಧಿಸುತ್ತಿರುವುದರಿಂದ ಅಗತ್ಯ ಸೋಂಕು ನಿವಾರಕ ಒದಗಿಸಬೇಕೆಂದು ಕೋರಿದಾಗ ಸ್ಪಂದಿಸಿದ ಆಯುಕ್ತರು, ಹಿಂದೆ ಪ್ರಕರಣಕೋರ್ಟ್‌ನಲ್ಲಿದ್ದರಿಂದ ವಿಳಂಬವಾಯಿತು,ಪ್ರಸ್ತುತ ಜಾರಿಯಲ್ಲಿರುವ ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಂಡ ನಂತರ ಆಯಾತಾಲೂಕುಗಳಿಗೆ ಸೋಂಕು ನಿವಾರಕ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ರೇಷ್ಮೆ ಇಲಾಖೆ ಉಪನಿರ್ದೇಶಕ ಟಿ.ಎಂ.ಕಾಳಪ್ಪ,ಮಾರುಕಟ್ಟೆ ಉಪನಿರ್ದೇಶಕ ರಾಧಾಕೃಷ್ಣ,ಸಹಾಯಕ ನಿರ್ದೇಶಕ ಮಂಜುನಾಥ್‌, ಮಾರುಕಟ್ಟೆ ಅಧಿಕಾರಿ ವಿ.ಲಕ್ಷ್ಮೀ, ರೇಷ್ಮೆ ಮಂಡಳಿ ಮಾಜಿ ಸದಸ್ಯ ಚಿನ್ನಾಪುರ ನಾರಾಯಣಸ್ವಾಮಿ, ಜಿಲ್ಲಾ ರೇಷ್ಮೆ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರೇಗೌಡ, ಉಪಾಧ್ಯಕ್ಷ ರಮೇಶ್‌, ತಾಲೂಕು ಕಾರ್ಯದರ್ಶಿ ಅಯ್ಯಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next