Advertisement

Tamilnadu ಗಿರಿಧಾಮ ಪ್ರವೇಶಕ್ಕೆ ಇಂದಿನಿಂದ ಇ-ಪಾಸ್‌ ಕಡ್ಡಾಯ

01:13 AM May 07, 2024 | Team Udayavani |

ಚೆನ್ನೈ: ಪ್ರಸಿದ್ಧ ಗಿರಿಧಾಮಗಳಾಗಿರುವ ಕೊಡೈಕೆ ನಾಲ್‌, ನೀಲಗಿರಿಗೆ ಹೋಗಬೇಕೆಂದರೆ ಮಂಗಳವಾರದಿಂದ ಪ್ರವಾಸಿಗರು ಕಡ್ಡಾಯವಾಗಿ ಇ-ಪಾಸ್‌ ಪಡೆಯಬೇಕು. ಪ್ರತೀ ದಿನ ಎಷ್ಟು ಪ್ರವಾಸಿಗರ ವಾಹನಗಳು ಆಗಮಿಸುತ್ತವೆ ಎಂಬ ಬಗ್ಗೆ ನಿಗಾ ಇರಿಸಲು ಮದ್ರಾಸ್‌ ಹೈಕೋರ್ಟ್‌ ಆದೇಶಿಸಿದ ಕಾರಣ ತಮಿಳುನಾಡು ಸರಕಾರ ಈ ಕ್ರಮ ಕೈಗೊಂಡಿದೆ. ಪ್ರವಾಸಿಗರು, ವಾಣಿಜ್ಯ ವಾಹನಗಳಿಗೆ ಇ-ಪಾಸ್‌ ಕಡ್ಡಾಯ ಎಂದು ನೀಲಗಿರಿ, ದಿಂಡಿಗಲ್‌ ಜಿಲ್ಲಾಡಳಿತಗಳು ಪ್ರಕಟಿ ಸಿವೆ. ಪ್ರವಾಸಿಗರು https://epass.tnega.org/ ವೆಬ್‌ಸೈಟ್‌ ಮೂಲಕ ಇ-ಪಾಸ್‌ ಪಡೆ ಯಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ಸಾರಿಗೆಗಳಲ್ಲಿ ಬರುವವರು ಪಾಸ್‌ ಪಡೆಯಬೇ ಕಾಗಿಲ್ಲ ಎಂದು ಜಿಲ್ಲಾಡಳಿತಗಳು ಸ್ಪಷ್ಟಪಡಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next