ಚಿಕ್ಕಮಗಳೂರು: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಜಿಲ್ಲಾದ್ಯಂತ 22 ನ್ಯಾಯಪೀಠಗಳಲ್ಲಿ ನಡೆದ ಬೃಹತ್ ಇ-ಲೋಕ್ ಅದಾಲತ್‌ನಲ್ಲಿ 5,327 ಪ್ರಕರಣಗಳನ್ನು ಕೈಗೆತ್ತಿಕೊಂಡು 1,263 ಪ್ರಕರಣಗಳನ್ನು ಇತ್ಯರ್ಥಗೊಳಿಸಿರುವುದಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿ ನ್ಯಾ| ಬಸವರಾಜ್ ಚಂಗಟ್ಟಿ ತಿಳಿಸಿದ್ದಾರೆ.
ಮರಳು ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೆತ್ತಿಕೊಂಡ 123 ಪ್ರಕರಣಗಳ ಪೈಕಿ 31 ಪ್ರಕಕರಣಗಳು ಇತ್ಯಾರ್ಥವಾಗಿದ್ದು, ಅದರಲ್ಲಿ 2 ಲಕ್ಷದ 14 ಸಾವಿರದ 712 ರೂ.ದಂಡ ವಸೂಲಿಯಾಗಿದೆ. ಚೆಕ್‌ಬೌನ್ಸ್ ಪ್ರಕರಣಗಳ ಪೈಕಿ ಕೈಗೆತ್ತಿಕೊಂಡ 1,524 ಪ್ರಕರಣಗಳಲ್ಲಿ 49 ಪ್ರಕರಣಗಳು ಇತ್ಯರ್ಥಗೊಂಡು 78 ಲಕ್ಷದ 50 ಸಾವಿರ 122 ರೂ. ಇತ್ಯರ್ಥವಾಗಿದೆ.
ಬ್ಯಾಂಕ್ ವ್ಯವಹಾರದ ಪ್ರಕರಣಗಳಿಗೆ ಸಂಬಂಧಿಸಿದಂತೆ 677 ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದು, 45 ಪ್ರಕರಣಗಳು ಇತ್ಯಾರ್ಥಗೊಂಡು 1 ಕೋಟಿ 52 ಲಕ್ಷ 51 ಸಾವಿರದ 951 ರೂ. ಇತ್ಯಾರ್ಥಗೊಂಡಿದೆ. ಬ್ಯಾಂಕ್ ಪ್ರಕರಣ ಹಾಗೂ ಲೇವಾದೇವಿ ಪ್ರಕರಣಕ್ಕೆ ಸಂಬಂಧಿಸಿದಂತೆ 5,194 ಪ್ರಕರಣಗಳ ಪೈಕಿ 6 ಪ್ರಕರಣ ಇತ್ಯರ್ಥಗೊಂಡು 25ಲಕ್ಷ 70 ಸಾವಿರ ರೂ. ಇತ್ಯರ್ಥಗೊಂಡಿದೆ. ವೈವಾಹಿಕ ಪ್ರಕರಣಗಳ ಪೈಕಿ 166 ರಲ್ಲಿ 3 ಪ್ರಕರಣ ಇತ್ಯರ್ಥಗೊಂಡಿದೆ. ಸಿವಿಲ್ ದಾವೆಯ 129 ಪ್ರಕರಣದಲ್ಲಿ 115 ಇತ್ಯರ್ಥಗೊಂಡಿದೆ. ಅದ್ದರಿಂದ 99 ಲಕ್ಷ 23 ಸಾವಿರ 645 ರೂ. ಇತ್ಯರ್ಥಗೊಂಡಿದೆ. ಇತರೆ ಕ್ರಿಮಿನಲ್ ಮೊಕದ್ದಮೆಗಳ ಪೈಕಿ ಕೈಗೆತ್ತಿಕೊಂಡ 1,028 ಪ್ರಕರಣಗಳಲ್ಲಿ 909 ಇತ್ಯರ್ಥಗೊಂಡಿದೆ. ಇತರೆ ಕ್ರಿಮಿನಲ್ ಪ್ರಕರಣಗಳ ಪೈಕಿ ಕೈಗೆತ್ತಿಕೊಂಡ 266 ಪ್ರಕರಣಗಳಲ್ಲಿ 86 ಪ್ರಕರಣ ಇತ್ಯರ್ಥಗೊಂಡು 41 ಸಾವಿರ 425 ರೂ. ಇತ್ಯರ್ಥಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.