ಮಂಗಳೂರು: ಪಡಿತರ ಚೀಟಿದಾರರ ಇ- ಕೆವೈಸಿ ಮಾಡಿಸಿ ಕೊಳ್ಳಲು ರಾಜ್ಯ ಸರಕಾರ ನೀಡಿದ ಗಡುವು ಸೆ. 10ರಂದು ಮುಕ್ತಾಯವಾ ಗಲಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇ-ಕೆವೈಸಿ ಮಾಡಲು ಬಾಕಿ ಉಳಿದಿರುವವರ ಭವಿಷ್ಯ ರಾಜ್ಯ ಸರಕಾರದ ಕೈಯಲ್ಲಿದೆ.
ಸೆ. 9ರ ತನಕ ವೇಳೆಗೆ ದ.ಕ.ದಲ್ಲಿ ಶೇ. 80 ಹಾಗೂ ಉಡುಪಿ ಜಿಲ್ಲೆಯಲ್ಲಿ ಶೆ. 81ರಷ್ಟು ಮಂದಿ ಇಕೆವೈಸಿ ಮಾಡಿಸಿ ಕೊಂಡಿದ್ದಾರೆ. ಇನ್ನೂ ಶೇ. 20ರಷ್ಟು ಮಂದಿ ಬಾಕಿ ಇದ್ದಾರೆ.
ಈ ಪ್ರಕ್ರಿಯೆಯನ್ನು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿಯೇ ಮಾಡಬೇಕು. ಆದರೆ ಕೊನೆಯ ದಿನ ಎಂದಿರುವ ಸೆ. 10ರಂದು ಚೌತಿ ಹಿನ್ನೆಲೆಯಲ್ಲಿ ಸಾರ್ವಜನಿಕ ರಜೆ ಇರುವುದರಿಂದ ಸೆ. 11ರಂದು ಕೊನೆಯ ದಿನವಾಗಿರುತ್ತದೆ ಎಂದು ಆಹಾರ ಇಲಾಖೆ ತಿಳಿಸಿದೆ.
ಬಾಕಿಯಾಗಲು ಕಾರಣವೇನು? :
ದ.ಕ. ಮತ್ತು ಉಡುಪಿ ಜಿಲ್ಲೆಗಳ ಪಡಿತರ ಚೀಟಿದಾರರಲ್ಲಿ ಬಹಳಷ್ಟು ಕುಟುಂಬಗಳ ಸದಸ್ಯರು ದೇಶದ ವಿವಿಧ ಭಾಗಗಳಲ್ಲಿ ಅಥವಾ ವಿದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. ಕೊರೊನಾ ಹಾವಳಿಯಿಂದಾಗಿ ಹಲವಾರು ಮಂದಿ ಊರಿಗೆ ಬರಲಾಗದೆ ಅಥವಾ ಬಂದರೆ ವಾಪಸ್ ಹೋಗಲು ಸಾಧ್ಯವಾಗದ ಆತಂಕ ದಿಂದಾಗಿ ಊರಿಗೆ ಹಿಂದಿರುಗಿಲ್ಲ. ಹಾಗಾಗಿ ಇ- ಕೆವೈಸಿ ಮಾಡಿಸಲು ಹಲವರಿಗೆ ಸಾಧ್ಯವಾಗಿಲ್ಲ. ಶೇ. 20ರಷ್ಟು ಇ- ಕೆವೈಸಿ ಬಾಕಿಯಾಗಲು ಮುಖ್ಯ ಕಾರಣ.