ಪುಣೆ: ಪುಣೆ ಓಣಿಮಜಲು ಜಗನ್ನಾಥ ಶೆಟ್ಟಿ ಬಂಟರ ಭವನದಲ್ಲಿ ಮೊದಲ ಕಾರ್ಯಕಾರಿ ಸಮಿತಿ ಸಭೆ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ಸಮಿತಿ ಸದಸ್ಯರನ್ನು ಸ್ವಾಗತಿಸಿ ಸಂತೋಷ್ ಶೆಟ್ಟಿ ಅವರು ಮಾತನಾಡಿ, ಬಹಳಷ್ಟು ವರ್ಷಗಳ ಈ ಕನಸು ನನಸಾಗಿ ನಮ್ಮದೇ ಆದ ಬಂಟರ ಭವನದಲ್ಲಿ ಕಾರ್ಯಕಾರಿ ಸಭೆಯನ್ನು ನಡೆಸಲು ಬಹಳ ಆನಂದವಾಗುತ್ತಿದೆ. ಎ. 7 ಹಾಗೂ 8 ರಂದು ಭವನದ ಲೋಕಾರ್ಪಣೆಯ ಸಂದರ್ಭ ಗಣ್ಯಾತಿಗಣ್ಯ ಅತಿಥಿಗಳು, ಭವನದ ಮಹಾದಾನಿಗಳು ಆಗ ಮಿಸಿ ಸಮಾರಂಭವನ್ನು ಯಶಸ್ವಿ ಗೊಳಿಸಿರುವುದಕ್ಕಾಗಿ ಕೃತಜ್ಞತೆ ಗಳನ್ನು ಸಲ್ಲಿಸುತ್ತಿದ್ದೇನೆ. ಮುಂದೆ ಭವನದ ಎÇÉಾ ವ್ಯವಸ್ಥೆಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವ ಬಗ್ಗೆ ಚಿಂತಿಸಬೇಕಾಗಿದೆ. ಭವಿಷ್ಯದ ವಿವಿಧ ಯೋಜನೆಗಳನ್ನೂ ಸಮಾಲೋಚಿಸಿ ಕಾರ್ಯರೂಪಕ್ಕೆ ತರುವಲ್ಲಿ ಸಮಿತಿ ಪದಾಧಿಕಾರಿಗಳೆಲ್ಲರೂ ಸಹಕಾರ ನೀಡ ಬೇಕಾಗಿದೆ. ಭವನಕ್ಕೆ ದೇಣಿಗೆ ನೀಡಿದ ಪ್ರತಿಯೊಬ್ಬರನ್ನೂ ಸಂಘದ ವತಿಯಿಂದ ಸಮ್ಮಾನಿಸುವ ಕಾರ್ಯ ನಮ್ಮ ಮುಂದಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ವರದಿ ಮುಂದಿಟ್ಟರು. ಗೌರವ ಕೋಶಾಧಿಕಾರಿ ವೈ. ಚಂದ್ರಹಾಸ ಶೆಟ್ಟಿ ಉದ್ಘಾಟನಾ ಸಮಾರಂಭದ ಲೆಕ್ಕ ಪತ್ರಗಳನ್ನು ಮುಂದಿಟ್ಟರು. ಜತೆ ಕಾರ್ಯದರ್ಶಿ ಸತೀಶ್ ಶೆಟ್ಟಿ ಹಾಗೂ ಜತೆ ಕೋಶಾಧಿಕಾರಿ ಶ್ರೀನಿವಾಸ ಶೆಟ್ಟಿ ಖರ್ಚಿನ ಮಾಹಿತಿಯಿತ್ತರು.
ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಮಾಹಿತಿಯಿತ್ತರು. ಮಹಿಳಾ ವಿಭಾಗದ ಮಾಹಿತಿಯನ್ನು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ ನೀಡಿದರು.
ಉಪಾಧ್ಯಕ್ಷರಾದ ರಾಮಕೃಷ್ಣ ಶೆಟ್ಟಿ, ಪದಾಧಿಕಾರಿಗಳಾದ ಚಂದ್ರಶೇಖರ ಶೆಟ್ಟಿ ನಿಟ್ಟೆ, ಗಣೇಶ್ ಶೆಟ್ಟಿ, ಶಶೀಂದ್ರ ಶೆಟ್ಟಿ, ಮೋಹನ್ ಶೆಟ್ಟಿ, ವಿವೇಕಾನಂದ ಶೆಟ್ಟಿ ಆವರ್ಸೆ, ತಾರಾನಾಥ ಕೆ. ರೈ ಮೇಗಿನಗುತ್ತು, ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು, ವಿಶ್ವನಾಥ ಶೆಟ್ಟಿ, ಪ್ರಶಾಂತ್ ಎ. ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ವಸಂತ ಶೆಟ್ಟಿ ಬೈಲೂರು, ಮಹಿಳಾ ವಿಭಾಗದ ಸುಲತಾ ಎಸ್. ಶೆಟ್ಟಿ, ಸುಚಿತ್ರಾ ಎಸ್. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.