Advertisement

ಬೀದರ್‌, ಚಿತ್ತಾಪುರ ರೈಲ್ವೇ ನಿಲ್ದಾಣದಲ್ಲಿ ಇ-ಚಾರ್ಜಿಂಗ್‌

11:31 AM Jun 03, 2022 | Team Udayavani |

ಹೊಸದಿಲ್ಲಿ: ತೈಲ ಆಮದು ತಗ್ಗಿಸಲು ಹಾಗೂ ಮಾಲಿನ್ಯ ನಿಯಂತ್ರಿಸಲು ಕೇಂದ್ರ ಸರಕಾರ ವಿದ್ಯುತ್‌ ಚಾಲಿತ ವಾಹನ ಗಳಿಗೆ ಉತ್ತೇಜನ ನೀಡುತ್ತಿದ್ದು, ಈ ಮಹತ್ವಾ ಕಾಂಕ್ಷೆಯ ಪ್ರಯತ್ನಕ್ಕೆ ದಕ್ಷಿಣ ಕೇಂದ್ರ ವಲಯ ರೈಲ್ವೇ ಇಲಾಖೆಯೂ ಕೈ ಜೋಡಿಸಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಎರಡು ರೈಲು ನಿಲ್ದಾಣಗಳು ಸೇರಿದಂತೆ ದೇಶದ 32 ರೈಲು ನಿಲ್ದಾಣಗಳಲ್ಲಿ ವಿದ್ಯುತ್‌ ವಾಹನಗಳ ಇ- ಚಾರ್ಜಿಂಗ್‌ ಸೌಲಭ್ಯ ಕಲ್ಪಿಸಲಾಗುವುದೆಂದು ರೈಲ್ವೇಯ ದಕ್ಷಿಣ ಕೇಂದ್ರ ವಲಯದ ಸಿಕಂದರಾಬಾದ್‌ ವಿಭಾಗ ಪ್ರಕಟಿಸಿದೆ.

Advertisement

ಕರ್ನಾಟಕದ ಬೀದರ್‌ ರೈಲ್ವೇ ನಿಲ್ದಾಣ  ಮತ್ತು ಕಲಬುರಗಿ ಜಿಲ್ಲೆಯಲ್ಲಿರುವ ಚಿತ್ತಾ ಪುರ ರೈಲ್ವೇ ನಿಲ್ದಾಣಗಳಲ್ಲಿ ಚಾರ್ಜಿಂಗ್‌ ಕೇಂದ್ರಗಳು ಸ್ಥಾಪನೆಯಾಗ ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಇ-ವಾಹನ ಚಾರ್ಜಿಂಗ್‌ ಕೇಂದ್ರ ತೆರೆಯಲು ಖಾಸಗಿ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು. ಈ ರೀತಿ ಸೌಲಭ್ಯ ಕಲ್ಪಿಸಿಕೊಡುವುದರಿಂದ ಜನರಿಗೆ ಸಹಾಯವಾಗುವುದರ ಜತೆ ರೈಲ್ವೇಗೂ ಆದಾಯ ಹೆಚ್ಚುತ್ತದೆ. ಈಗಾಗಲೇ ಈ ಯೋಜನೆ ಕಾರ್ಯ  ರೂಪಕ್ಕೆ ಬಂದಿದ್ದು, ಮೊದಲ ಹಂತದಲ್ಲಿ ತೆಲಂಗಾಣದ ಹೈದರಾಬಾದ್‌  ರೈಲ್ವೇ ನಿಲ್ದಾಣದಲ್ಲಿ ಇ-ವಾಹನ ಚಾರ್ಜಿಂಗ್‌ ಕೇಂದ್ರ ತೆರೆಯಲಾಗಿದೆ” ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next