Advertisement

ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ಸರ್ವರ್‌ ಸಮಸ್ಯೆ: ಹತ್ತು ದಿನಗಳಾದರೂ ಕೇಳುವವರಿಲ್ಲ

11:28 PM Nov 17, 2022 | Team Udayavani |

ಉಡುಪಿ: ಮಂಗಳೂರು ಮಹಾನಗರ ಪಾಲಿಕೆ, ಉಡುಪಿ ನಗರಸಭೆ, ಹಲವು ಪುರಸಭೆ, ಪಟ್ಟಣ ಪಂಚಾಯತ್‌  ಸಹಿತವಾಗಿ ರಾಜ್ಯದ ಬಹುತೇಕ ಎಲ್ಲ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ನಿವೇಶನ, ಕಟ್ಟಡಗಳ ಆಸ್ತಿ ಹಕ್ಕಿಗೆ ಸಂಬಂಧಿಸಿದ ಇ-ಖಾತಾ ಸರ್ವರ್‌ ಹತ್ತು ದಿನಗಳಿಂದ ಸ್ತಬ್ಧಗೊಂಡಿದೆ.

Advertisement

ಇದರಿಂದ ನಿವೇಶನ ಮಾಲಕರಿಗೆ ಯಾವುದೇ ಸೇವೆ ಲಭ್ಯವಾಗುತ್ತಿಲ್ಲ. ಆಸ್ತಿಗೆ ಸಂಬಂಧಿಸಿದ ಆರ್‌ಟಿಸಿ ಇರು ವಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಯಲ್ಲಿ ಪೌರಾಡಳಿತ ನಿರ್ದೇಶನಾಲಯವು ಆಸ್ತಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಇ-ಖಾತಾ ಅನುಷ್ಠಾನ ಗೊಳಿಸಿತು. ಆ ಬಳಿಕ ನಿವೇಶನ ಮಾಲಕರು ತೆರಿಗೆ ಪಾವತಿ ಸೇರಿದಂತೆ ಎಲ್ಲ ವನ್ನೂ ಆನ್‌ಲೈನ್‌ನಲ್ಲೇ ಕೈಗೊಳ್ಳುತ್ತಿದ್ದಾರೆ.

ಕಾರ್ಯ ವ್ಯಾಪ್ತಿ ಹೇಗೆ?:

ನಿವೇಶನ ಮಾಲಕರು ಇ-ಖಾತಾಕ್ಕಾಗಿ ಚಲನ್‌ ಮೂಲಕ ಶುಲ್ಕ ಪಾವತಿಸಿದ ಅನಂತರ ನಿವೇಶನ, ಕಟ್ಟಡ ಇರುವ ಸ್ಥಳಕ್ಕೆ ಆಯಾ ಪ.ಪಂಚಾಯತ್‌, ಪುರಸಭೆ, ನಗರಸಭೆ, ಪಾಲಿಕೆ ಸಿಬಂದಿ ತೆರಳಿ ಆಸ್ತಿ ಗುರುತಿಸುತ್ತಾರೆ. ಬಳಿಕ ಇ-ಖಾತಾದಲ್ಲಿ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಅನುಮೋದಿಸಲಾಗುತ್ತದೆ.  ಇದಾದ ಅನಂತರ ಮಾಲಕರಿಗೆ ಇ-ಖಾತಾ ನೀಡ ಲಾಗುತ್ತದೆ. ಆದರೆ ಸರ್ವರ್‌ ಸಮಸ್ಯೆಯಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಅನುಮೋದನೆಯೂ ಸಿಗುತ್ತಿಲ್ಲ. ಸರಕಾರ ಅಥವಾ ಸಂಬಂಧ ಪಟ್ಟ ಇಲಾಖೆ ಇದಕ್ಕೆ ಶೀಘ್ರ ಪರಿಹಾರ ನೀಡಬೇಕು. ಇ-ಖಾತಾ ವಿಳಂಬದಿಂದ ನಗರ ಪ್ರದೇಶದಲ್ಲಿ ಕಟ್ಟಡ, ನಿವೇಶನ ಮಾಲಕರು ಸಾಕಷ್ಟು ಸಮಸ್ಯೆ ಅನುಭವಿಸು ತ್ತಿದ್ದಾರೆ ಎಂಬುದು ಹಲವರ ದೂರು.

ತಂತ್ರಾಂಶದ ಅಪ್‌ಡೇಟ್‌ :

Advertisement

ಇ-ಖಾತಾ ತಂತ್ರಾಂಶವನ್ನು ಅಪ್‌ಡೇಟ್‌ ಮಾಡಲಾಗು ತ್ತಿದ್ದು, ಯಾವುದೇ ಸೇವೆ ನೀಡಲಾಗುತ್ತಿಲ್ಲ. ಈ ಬಗ್ಗೆ ಕೇಂದ್ರ ಕಚೇರಿಗೆ ಮಾಹಿತಿ ನೀಡಿದ್ದೇವೆ. ಶೀಘ್ರ ಸರಿಯಾಗಲಿದೆ ಎಂಬ ಭರವಸೆ ಲಭಿಸಿದೆ. ನಮ್ಮ ಹಂತದಲ್ಲಿ ಏನೂ ಮಾಡಲು ಸಾಧ್ಯವಿಲ್ಲ  ಎಂದು ಹತಾಶೆ ವ್ಯಕ್ತಪಡಿಸುತ್ತಾರೆ ನಗರ ಸ್ಥಳೀಯ ಸಂಸ್ಥೆಯ ಸ್ಥಳೀಯ ಅಧಿಕಾರಿಯೊಬ್ಬರು.

ಏನೇನು ಸಿಗಲಿದೆ? :

ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಅಧಿಕೃತ, ಅಕ್ರಮ ಆಸ್ತಿಗಳ ಮಾಹಿತಿ ದಾಖಲಿಸಲು ಅಥವಾ ತಿದ್ದುಪಡಿ ಮಾಡಲು, ಆಸ್ತಿಗಳ ಮಾಲಕತ್ವ ಹಕ್ಕು ವರ್ಗಾಯಿಸಲು ಹಾಗೂ ಆಸ್ತಿ ತೆರಿಗೆಯ ನಕಲನ್ನು ಡಿಜಿಟಲ್‌ ಸಹಿಯೊಂದಿಗೆ ಪಡೆಯಲು ಮಾಲಕರಿಗೆ ಅವಕಾಶ ಕಲ್ಪಿಸಿದೆ. ಆದರೆ ಸರ್ವರ್‌ ಸಮಸ್ಯೆಯಿಂದ ಇದ್ಯಾವುದೂ ಸದ್ಯ ಸಿಗು ¤ಲ್ಲ.

ಶೀಘ್ರವೇ ಸಮಸ್ಯೆಗೆ ಪರಿಹಾರ :

ಈ ಸಂಬಂಧ ರಾಜ್ಯವ್ಯಾಪಿ ಬಹುತೇಕ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಂದಲೂ ದೂರುಗಳು ಬರುತ್ತಿವೆ. ತಂತ್ರಾಂಶ ಅಪ್‌ಡೇಟ್‌ ಆಗುತ್ತಿದೆ. ಶೀಘ್ರವೇ ಸಮಸ್ಯೆಗೆ ಪರಿಹಾರ ಸಿಗಲಿದೆ ಎನ್ನುತ್ತಾರೆ ನಿರ್ದೇಶನಾಲಯದ ಅಧಿಕಾರಿಯೊಬ್ಬರು.

ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ ಸಹಿತ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಎಲ್ಲೆಡೆ ಈಗ ಸರ್ವರ್‌ ಲಭ್ಯವಿರದ ಸಮಸ್ಯೆ ಇದೆ. ಜನ ಸಾಮಾನ್ಯರು ನಿತ್ಯವೂ ಇ-ಖಾತಾ ಸಂಬಂಧ ಕಚೇರಿಗೆ ಅಲೆದಾಡುತ್ತಿದ್ದಾರೆ. ಇಲಾಖೆಯಿಂದ ಅಥವಾ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳೂ ಸೂಕ್ತ ಮಾಹಿತಿ ನೀಡದ ಕಾರಣ ಬಹುತೇಕರು ಕಚೇರಿ-ಮನೆಗೆ ಅಲೆದಾಡುವಂತಾಗಿದೆ ಎನ್ನುತ್ತಾರೆ ನಿವೇಶನ ಮಾಲಕರೊಬ್ಬರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next