Advertisement

ಗಡಿ ಕನ್ನಡ ಭವನವಾದ ಡಿವಿಜಿ ರಂಗಮಂದಿರ

02:13 PM Apr 17, 2021 | Team Udayavani |

ಮುಳಬಾಗಿಲು: ಸಾರಸ್ವತ ಲೋಕದ ದಿಗ್ಗಜರಾದಡಿ.ವಿ.ಗುಂಡಪ್ಪ ಅವರ ನೆನಪಿಗಾಗಿ ಹಲವು ವರ್ಷಗಳ ಹಿಂದೆ ನಗರದಲ್ಲಿ ನಿರ್ಮಿಸಿದ್ದ ಡಿವಿಜಿ ರಂಗ ಮಂದಿರವನ್ನು 6 ವರ್ಷಗಳ ಹಿಂದೆ ನವೀಕರಿಸಿ, ಅನಾವರಣ ಮಾಡಿದ ಸಂದರ್ಭದಲ್ಲಿ ಡಿವಿಜಿ ಹೆಸರನ್ನು ತೆಗೆದು, ಗಡಿ ಕನ್ನಡ ಭವನ ಎಂದೇ ಬರೆಸಲಾಗಿರುವ ನಾಮಫ‌ಲಕವನ್ನು  3-4ವರ್ಷಗಳೇ ಕಳೆದರೂ ಇದುವರಿಗೂ ಬದಲಾಯಿಸದೇ ಇರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಆಧುನಿಕ ಸಮಾಜದ ಅಭಿವೃದ್ಧಿ ಹಾಗೂ ನಾಡಿನ ಶ್ರೇಯಸ್ಸಿಗಾಗಿ ಹಲವಾರು ಕ್ಷೇತ್ರಗಳಲ್ಲಿ ಎಷ್ಟೋ ಜನಬಹುಮುಖ ಪ್ರತಿಭಾವಂತರು ದುಡಿದಿದ್ದಾರೆ.ಅಂತಹ ಕೀರ್ತಿ ಶಿಖರಗಳಲ್ಲಿ ಸಾರಸ್ವತ ಲೋಕದ ದಿಗ್ಗಜ ಡಿ.ವಿ.ಗುಂಡಪ್ಪ ಒಬ್ಬರು. ವೆಂಕಟರಮಣಯ್ಯ, ತಾಯಿ ಅಲುವೇಲಮ್ಮ ಅವರ ಪುತ್ರರೇ ಡಿವಿಜಿ, ಬದುಕಿನ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಬಹುಮುಖ ಪ್ರತಿಭಾವಂತರಾಗಿ ಕನ್ನಡ ಪತ್ರಿಕೋದ್ಯಮ ಪಿತಾಮಹರಾಗಿದ್ದರು.ಅಂತಹ ಕನ್ನಡ ಸಾರಸ್ವತ ಲೋಕದ ದಾರ್ಶನಿಕ ಮಂಕುತಿಮ್ಮನಿಗೆ ಸಂದಿರುವ ಪ್ರಶಸ್ತಿಗಳು ನೂರಾರು, ಹಾಗೆಯೇ ಹಲವು ಡಾಕ್ಟರೇಟ್‌ಗಳೊಂದಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣಪ್ರಶಸ್ತಿಗಳು ಒಲಿದಿವೆ.

ಡಿವಿಜಿ ಮನೆ ಶಾಲೆಯಾಗಿ ಪರಿವರ್ತನೆ: ಇಂತಹ ಮಹಾನ್‌ ಚೇತನದ ನೆನಪಿಗಾಗಿ ಜಿಲ್ಲಾಡಳಿತ, ಡಿವಿಜಿ ಪ್ರತಿಷ್ಠಾನ, ಸಂಘ-ಸಂಸ್ಥೆಗಳು ಒಟ್ಟಾಗಿ ಸೇರಿ 1987 ಮಾರ್ಚ್‌ 17ರಂದು ಮುಳಬಾಗಿಲು ನಗರದಲ್ಲಿ ಶತಮಾನೋತ್ಸವ ಆಚರಿಸಿ,ಜ್ಞಾಪಕಾರ್ಥವಾಗಿ ಅವರ ವಾಸದ ಮನೆಯನ್ನುಶಾಲೆಯಾಗಿ ಪರಿವರ್ತಿಸಿದೆಯಲ್ಲದೆ, ನಗರ ಮತ್ತುಕೋಲಾರದಲ್ಲಿ ನಿರ್ಮಿಸಿರುವ ಜಿಲ್ಲಾಗ್ರಂಥಾಲಯಗಳಿಗೆ ಡಿವಿಜಿ ಹೆಸರನ್ನುನಾಮಕರಣಗೊಳಿಸಿದ್ದಾರೆ.

ನಂತರದ ವರ್ಷಗಳಲ್ಲಿ ರಂಗ ಮಂದಿರ ಕಟ್ಟಡವುಶಿಥಿಲಗೊಂಡಿದ್ದರಿಂದ ತಾಲೂಕು ಆಡಳಿತ, ರಂಗಮಂದಿರವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿ ಕಳೆದ6 ವರ್ಷಗಳ ಹಿಂದೆ ನಗರಸಭೆ ಮತ್ತು ಕನ್ನಡ ಮತ್ತುಸಂಸ್ಕೃತಿ ಇಲಾಖೆಯ ಮುಖಾಂತರ ಲಕ್ಷಾಂತರರೂ.ಗಳ ವೆಚ್ಚದಲ್ಲಿ ನವೀಕರಣ ಮಾಡಿದರು. ಆಸಂದರ್ಭದಲ್ಲಿ ಡಿವಿಜಿ ರಂಗ ಮಂದಿರ ಬದಲಾಗಿ,ಗಡಿ ಕನ್ನಡ ಭವನ ಎಂದು ನಾಮಫ‌ಲಕ ಬರೆಸಿಶಾಸಕ ಜಿ.ಮಂಜುನಾಥ್‌ ಅವರ ಕೈಯಿಂದಉದ್ಘಾಟನೆ ಮಾಡಿಸಿದರು.

ಯಾವುದೇ ಪ್ರಯೋಜನವಿಲ್ಲ: ಕಳೆದ 5 ವರ್ಷಹಿಂದೆ ನಡೆದ ಉದ್ಘಾಟನೆ ಸಂದರ್ಭದಲ್ಲಿ ಸಾಕಷ್ಟುಜನರು ರೊಚ್ಚಿಗೆದ್ದು, ಗಡಿ ಕನ್ನಡ ಭವನಕ್ಕೆಮೊದಲಿನಂತೆ ಡಿವಿಜಿ ರಂಗಮಂದಿರ ಎಂದುನಾಮಫ‌ಲಕ ಹಾಕಿಸಲು ಪ್ರತಿಭಟನೆಗಳುಮಾಡಿದಾಗ, ಕಂಗೆಟ್ಟ ತಾಲೂಕು ಆಡಳಿತಕಾರ್ಯಕ್ರಮಕ್ಕೆ ಉಂಟಾಗುತ್ತಿದ್ದ ತೊಂದರೆಯಿಂದಪಾರಾಗಲು ಶೀಘ್ರವಾಗಿ ನಾಮಫ‌ಲಕಹಾಕಿಸಲಾಗುವುದು ಎಂದು ಪ್ರತಿಭಟನಾಕಾರರಮನವೊಲಿಸಲು ನೆಪ ಮಾತ್ರಕ್ಕೆ ಡಿವಿಜಿ ಸಭಾಂಗಣಎಂದು ಬಾಗಿಲು ಮೇಲೆ ಬರೆಸಿದ್ದರು.

Advertisement

ಕನ್ನಡ ಮತ್ತುಸಂಸ್ಕೃತಿ ಇಲಾಖೆ ಅಧಿಕಾರಿ ರವಿಕುಮಾರ್‌ ಸಹಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಡಿವಿಜಿ ರಂಗಮಂದಿರವೆಂದು ಬದಲಾಯಿಸಲಾಗುವುದುಎಂದು ತಿಳಿಸಿ, ಹಲವು ವರ್ಷಗಳೇ ಕಳೆದರೂಇದುವರೆಗೂ ಯಾವುದೇಪ್ರಯೋಜನೆಯಾಗಿರುವುದಿಲ್ಲ.

ಎಂ.ನಾಗರಾಜಯ್ಯ

Advertisement

Udayavani is now on Telegram. Click here to join our channel and stay updated with the latest news.

Next