Advertisement
ದೂರದೂರುಗಳಿಂದ ಆಗಮಿಸುವ ಪ್ರವಾಸಿಗರಿಗೆ ಸಮುದ್ರದಲ್ಲಿನ ಅಪಾಯದ ಮುನ್ಸೂಚನೆ ಇರುವುದಿಲ್ಲ. ಕೆಲವೊಮ್ಮೆ ಸಮುದ್ರ ನೀರು ನೋಡಿದಾಗ ಈಜಾ ಡಲು ಇಳಿದು ಜೀವಕ್ಕೇ ಕುತ್ತು ತಂದುಕೊಳ್ಳುವಂತಹ ಸನ್ನಿವೇಶಗಳು ನಿರ್ಮಾಣವಾಗುತ್ತದೆ. ಈಗಾಗಲೇ ಕಡಲಬ್ಬರವೂ ಜಾಸ್ತಿಯಾಗಿದ್ದು, ಯಾವುದೇ ದುರ್ಘಟನೆಗಳು ನಡೆಯ ದಂತೆ ತಡೆಯಲು ಪ್ರವಾಸಿಗರಿಗೆ ಸೂಕ್ತ ಎಚ್ಚರಿಕೆ ನೀಡಲು 25 ಮಂದಿ ಗೃಹರಕ್ಷಕರನ್ನು ಎಂಟು ಬೀಚ್‌ಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅದರಂತೆ ಪಣಂಬೂರು, ತಣ್ಣೀರು ಬಾವಿ, ಫಾತಿಮಾ ಬೀಚ್, ಸೋಮೆಶ್ವರ, ಉಳ್ಳಾಲ, ಸುರ ತ್ಕಲ್‌ನ ಎರಡು ಬೀಚ್, ಸಸಿ ಹಿತ್ಲು ಬೀಚ್‌ಗಳಲ್ಲಿ ಬೀಚ್‌ಗೆ ತಲಾ ಮೂವರಂತೆ ಒಟ್ಟು 24 ಮಂದಿ ಗೃಹ ರಕ್ಷಕರು ಜೂನ್ 1ರಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದು, ಅಗಸ್ಟ್ 31ರ ವರೆಗೆ ಬೀಚ್ ಗಾರ್ಡ್‌ಗಳಾಗಿ ಕೆಲಸ ಮಾಡಲಿದ್ದಾರೆ.
Related Articles
ಗೃಹರಕ್ಷಕರು ಕಾರ್ಯನಿರ್ವ ಹಿಸುತ್ತಿ ರುವ ಎಲ್ಲ ಎಂಟು ಬೀಚ್‌ಗಳ ಬದಿಯಲ್ಲಿ “ಅಪಾಯ ವಲಯ; ಮುಂದೆ ಹೋಗ ಬೇಡಿ’ ಎಂಬ ಫಲಕಗಳನ್ನು ಈಗಗಾಲೇ ಅಳವಡಿ ಸಲಾಗಿದೆ. ಖಾಕಿ ಧರಿಸಿ ಲಾಠಿ ಹಿಡಿದು ಇಲ್ಲಿ ಗೃಹರಕ್ಷಕರು ಕಾರ್ಯ ನಿರ್ವಹಿಸಲಿದ್ದಾರೆ. ಗೃಹರಕ್ಷಕರಿಗೆ ಈ ಹೊಣೆಗಾರಿಕೆ ಕಳೆದ ವರ್ಷದಿಂದ ಆರಂಭವಾಗಿದ್ದು, ಕಳೆದ ವರ್ಷ ಬೀಚ್‌ಗೆ ತಲಾ ಇಬ್ಬರಂತೆ 16 ಮಂದಿ ಗೃಹರಕ್ಷಕರು ಮಳೆಗಾಲದಲ್ಲಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಯಾವುದೇ ದುರ್ಘಟನೆ ಹಿಂದಿನ ಮಳೆಗಾಲದ ವೇಳೆ ನಡೆದಿರಲಿಲ್ಲ.
Advertisement