Advertisement

ಶಿವಮೊಗ್ಗದಲ್ಲಿ ದುಷ್ಮನ್‌ ಚಿತ್ರೀಕರಣಕ್ಕೆ ಚಾಲನೆ

07:52 PM Sep 28, 2020 | Suhan S |

ಶಿವಮೊಗ್ಗ: “ದುಷ್ಮನ್‌’ ಕನ್ನಡ ಚಲನಚಿತ್ರ ಚಿತ್ರೀಕರಣ ನಗರದಲ್ಲಿ ಭರದಿಂದ ಸಾಗಿದೆ. ಭಾನುವಾರ ಕೋಟೆ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ಜಿ.ಪಂ. ಸದಸ್ಯ ಕಲಗೋಡು ರತ್ನಾಕರ್‌ ಚಿತ್ರೀಕರಣಕ್ಕೆ ಆಕ್ಷನ್‌ ಹೇಳಿದರು.

Advertisement

ನಂತರ ಮಾತನಾಡಿದ ಅವರು, ಈ ಚಿತ್ರ ಯುವ ಸಮೂಹದ ದುಶ್ಚಟಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಸಂದೇಶ ಸಾರುವ ಚಿತ್ರವಾಗಿದೆ. ಶಿವಮೊಗ್ಗದ ನಟ, ನಟಿಯರು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ಚಿತ್ರಕ್ಕೆ ಶುಭ ಹಾರೈಸಿದರು.

ಕಾರ್ಯಕಾರಿ ನಿರ್ಮಾಪಕ ಹಾಗೂ ನುಡಿಗಿಡ ಪತ್ರಿಕೆ ಸಂಪಾದಕ ಎಚ್‌.ಎನ್‌. ಮಂಜುನಾಥ್‌ ಮಾತನಾಡಿ, ಚಿತ್ರೀಕರಣ ಶಿವಮೊಗ್ಗದ ಸುತ್ತಮುತ್ತ ಇನ್ನು 15 ದಿನಗಳ ಕಾಲ ನಡೆಯಲಿದೆ. ನಾಯಕ, ನಾಯಕಿ ಹೊಸಬರಾದರೂ ತುಂಬಾ ಅದ್ಭುತವಾಗಿ ನಟಿಸುತ್ತಿದ್ದಾರೆ. ಗಾಂಜಾ, ಅμàಮು ಸೇರಿದಂತೆ ಮಾದಕ ವಸ್ತುಗಳಿಗೆ ಯುವ ಸಮೂಹ ಬಲಿಯಾಗುತ್ತಿರುವುದು ವಿಷಾದಕರವಾಗಿದೆ. ಇದನ್ನುಸಂಪೂರ್ಣವಾಗಿ ತೊಡೆದುಹಾಕುವ ಸಂದೇಶ ನೀಡುವ ಚಿತ್ರ “ದುಷ್ಮನ್‌’ ಆಗಿದೆ. ಮಾದಕ ವಸ್ತುಗಳು ಒಂದು ರೀತಿಯಲ್ಲಿ ಯುವ ಜನಾಂಗದ ದುಷ್ಮನ್‌ ಆಗಿದ್ದು, ಇದನ್ನು ಹೊಡೆದೋಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ನಿರ್ದೇಶಕ ಮುತ್ತು ಮಾತನಾಡಿ, ಶಿವಮೊಗ್ಗದಲ್ಲಿ ಚಿತ್ರೀಕರಣವಾಗುತ್ತಿರುವುದು ತುಂಬಾ ಸಂತೋಷವಾಗಿದೆ. ಇಲ್ಲಿ ಸಾಂಸ್ಕೃತಿಕ ವಾತಾವರಣವಿದ್ದು, ಜೋಗ ಸೇರಿದಂತೆ ಜಿಲ್ಲೆಯ ಐತಿಹಾಸಿಕ ಸ್ಥಳಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗುವುದು ಎಂದರು. “ದುಷ್ಮನ್‌’ ಚಿತ್ರದ ಹಲವು ಭಾಗಗಳು ಇಂದು ಕೋಟೆ ಶ್ರೀ ರಾಮಾಂಜನೇಯ ದೇವಾಲಯದಲ್ಲಿ ಚಿತ್ರೀಕರಣಗೊಂಡಿದ್ದು, ಹಾಸ್ಯಲೋಕದ ದಿಗ್ಗಜರಾದ ರಂಗಾಯಣ ರಘು ಸೇರಿದಂತೆ ಹಲವು ಹೆಸರಾಂತ ಕಲಾವಿದರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಟ ಕೆಂಪೇಗೌಡ ಚಿತ್ರದ ಪ್ರಮುಖ ಹಾಸ್ಯ ಕಲಾವಿದರಾಗಿದ್ದಾರೆ.

ರಂಜಿತ್‌, ಅರುಣ್‌, ಭೀಮರಾವ್‌ ಸೇರಿದಂತೆ ಶಿವಮೊಗ್ಗದ ಹಲವು ಕಲಾವಿದರು ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿ ಜನನಿ, ಚಿತ್ರ ಹೊನ್ನಪ್ಪ, ನಾಯಕ ನಟ ಜೀವನ್‌ ಕುಮಾರ್‌ ಸೇರಿದಂತೆ ಹಲವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next