Advertisement
ಪ್ರಜೆಗಳನ್ನು ಒಡಹುಟ್ಟಿದ ಬಂಧುಗಳಂತೆ ಪಾಲಿಸುತ್ತಿದ್ದ ಅರಸನಿಗೆ ಒಂದು ದಿನ ಬಿಡುವಿಲ್ಲದಷ್ಟು ರಾಜಕಾರ್ಯವಿತ್ತು , ಅದೇ ದಿವಸ ಮಹಾತ್ಮರಾದ ದೂರ್ವಾಸರು ತಮ್ಮ ಶಿಷ್ಯರಿಂದೊಡಗೂಡಿ ಕುಂತಿಭೋಜನ ಅರಮನೆಗೆ ಆಗಮಿಸಿದರು. ಅವರನ್ನು ಸ್ವಾಗತಿಸಲು ರಾಜನಿಂದ ಸಾಧ್ಯವಾಗಲಿಲ್ಲ. ದುರ್ವಾಸರು ಕೋಪಿಸಿದರು ಅದನ್ನು ಗಮನಿಸಿ ತನ್ನ ತಂದೆಯಿಂದ ಆದ ಅಚಾತುರ್ಯವನ್ನು ತಿಳಿದು ಕುಂತಿದೇವಿಯು ಬಂದ ಅಥಿತಿಗಳ ಕಾಲಿಗೆ ಬಿದ್ದು ಅವರನ್ನು ಸತ್ಕರಿಸಿದಳು. ಅವಳ ಸೇವೆಯು ಅವರ ಕೋಪವನ್ನು ಶಾಂತಗೊಳಿಸಿತು.
Related Articles
Advertisement
ದಿನಮಣಿಯು ” ಎಲೈ ಕನ್ಯೆಯೇ ನೀನು ಅಂಜಬೇಡ ಈ ಸುಂದರ ಮಗುವನ್ನು ಪಡೆದೆಯಾದರು ನಿನ್ನ ಕನ್ಯತ್ತ್ವವು ಕೆಡಲಿಲ್ಲ ಎಂದು ಅಂತರ್ಧಾನನಾದನು. ಕುಂತಿಗೆ ಉಭಯಸಂಕಟವಾಯಿತು ಶಿಶುವನ್ನು ಅರಮನೆಗೆ ಒಯ್ದರೆ ಪ್ರಜೆಗಳ ಪ್ರಶ್ನೆಗಳಿಗೆ ಏನೆಂದು ಉತ್ತರಿಸಲಿ ? ಲೋಕಾಪವಾದದಿಂದ ಹೇಗೆ ಪಾರಾಗಲಿ? ಜನ್ಮಕೊಟ್ಟ ವಂಶವನ್ನು ಸಾಕಿ ಸಲಹಿದ ಕುಂತಿಭೋಜ ಮಹಾರಾಜನನ್ನು ನಗೆಗೀಡುಮಾಡಲೇ…..! ಹೀಗೆ ಹಲವಾರು ಯೋಚನೆಗಳು ಉದ್ಭವಿಸಿದವು. ತನ್ನೊಳಗೆ ತಾನು ನೊಂದು ಮೂಕಳಾಗಿ ಭೋರ್ಗರೆದು ಹರಿಯುತ್ತಿರುವ ಜಾನ್ಹವಿಯನ್ನು ಕರಜೋಡಿಸಿ ಪ್ರಾರ್ಥಿಸಿದಳು.
” ಅಮ್ಮ, ಅರಿಯದೆ ದೊಡ್ಡ ಪ್ರಮಾದವನ್ನೆಸಗಿದ್ದೇನೆ, ಲೋಕಾಪವಾದಕ್ಕೆ ಹೆದರಿ ಈ ಕೂಸನ್ನು ನಮ್ಮ ಅರಮನೆಗೆ ಕೊಂಡು ಹೋಗಲಾರೆ, ನಿನ್ನ ಸೀರೆಯ ಸೆರಗಿನಂತಿರುವ ಈ ಮಹಾ ಪ್ರವಾಹದಲ್ಲಿ ತೇಲಿಬಿಡುತಿದ್ದೇನೆ ನಿನ್ನ ಮಡಿಲಲ್ಲಿ ಇರಿಸಿಕೊಂಡು ಈ ಹಸುಳೆಯನ್ನು ಕಾಯ್ದುಕೊ. ಲೋಕಮಾತೆಯಾಗಿರುವ ನಿನಗೆ ತಾಯಿತನದ ನೋವು ನಲಿವಿನ ಅರಿವಿದೆ. ಶಿಶುವನ್ನು ಕಾಯುವುದಾಗಲಿ, ಕೊಲ್ಲುವುದಾಗಲಿ ನಿನಗೆ ಬಿಟ್ಟಿರುತ್ತೇನೆ. ಈ ನನ್ನ ಮನದಾಳವನ್ನು ಹೆತ್ತ ಕರುಳು ಮಾತ್ರ ಅರಿಯಬಲ್ಲದು, ಅಮ್ಮ ನನ್ನ ವಂಶವನ್ನು ಕುಲಗೌರವವನ್ನು ಕಾಪಾಡು ಎಂದು ಆ ಮಗುವನ್ನು ಗಂಗೆಯಲ್ಲಿ ತೇಲಿಬಿಟ್ಟಳು. ಗಂಗಾ ಪ್ರವಾಹದಲ್ಲಿ ಮಗು ತೇಲಿಕೊಂಡು ಹೋಗುತಿತ್ತು. ಜಾನ್ಹವಿ ಕರುಣಾಮಯಿಯಲ್ಲವೇ…..? ಆ ಕಂದನ ಭಾಗ್ಯ ಭಾಗೀರಥಿಯಲ್ಲಿ ನಶಿಸಿಹೋಗದೆ, ದೂರದ ತೀರವನ್ನು ಸೇರಿಕೊಂಡಿತು.
ವಿಶ್ವಚಕ್ಷುವಾದ ಸೂರ್ಯನನ್ನು ನೋಡಿ ಅಳುತ್ತ ಕೈಕಾಲುಗಳನ್ನು ಆಡಿಸುತ್ತಾ ನದಿ ತೀರದಲ್ಲಿದ್ದ ಮಗುವನ್ನು ಅಲ್ಲೇ ಸನಿಹದಲ್ಲಿ ಹೋಗುತಿದ್ದ ಅಧಿರಥನು ನೋಡಿದನು. ಸಂತಾನವಿಲ್ಲದೆ ನರಳುತ್ತಿದ್ದ ಅವನ ಹೃದಯಕ್ಕೆ ಶಿಶುವನ್ನು ಕಂಡಾಗ ಎಲ್ಲಿಲ್ಲದ ಆನಂದ.. ಮನೆಯ ನಂದಾದೀಪ ಬೆಳಗಿಸುವುದಕ್ಕೆ ಭಗವಂತನೇ ತಂದಿರಿಸಿದನು ಎನ್ನುವ ಸಂತೋಷ. ಆ ಸುಂದರ ಶಿಶುವನ್ನು ಕರಗಳಲ್ಲಿ ಎತ್ತಿಕೊಂಡು ತನ್ನ ಗುಡಿಸಲಿಗೆ ಓಡಿಬಂದು ತನ್ನ ಹೆಂಡತಿಯ ಕೈಲಿಟ್ಟನು ಅವಳು ಬಹಳ ಹರುಷದಿಂದ ಮಗುವನ್ನು ಮುದ್ದಾಡಿದಳು.
ಈ ಮಗುವಾದರೂ ಜನಿಸಿದಾಗಲೇ ಆಭರಣಗಳಿಂದಲೂ , ಎದೆಯಲ್ಲಿ ಅಮೃತಕಲಶ, ಕವಚಗಳಿಂದಲೂ ಕೊಡಿದ್ದಾ ಮಗುವಿಗೆ ವಸುಷೇಣನೆಂದು ಕರೆದರೂ.. ಕಿವಿಯಲ್ಲಿ (ಕರ್ಣ)ಕುಂಡಲ ಇದ್ದ ಕಾರಣ ಕರ್ಣನೆಂಬ ಹೆಸರಾಯಿತು. ಮಗು ಬಹಳ ಬುದ್ದಿವಂತನು , ಧೈರ್ಯಶಾಲಿಯು ಆಗಿದ್ದನು.