ಕುಷ್ಟಗಿ: ಚುನಾವಣೆ ನೀತಿ ಸಂಹಿತೆ ಜಾರಿಯ ಸಂಧರ್ಭದಲ್ಲಿ 4 ಲೀಟರ್ ಅಕ್ರಮ ಕಳ್ಳ ಭಟ್ಟಿ ಸರಾಯಿಯನ್ನು ಕುಷ್ಟಗಿ ಪೋಲೀಸರು ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿ ನಡೆದಿದೆ.
ಕಡೇಕೊಪ್ಪ ತಾಂಡದಲ್ಲಿ ಕಳ್ಳಭಟ್ಟಿ ಸರಾಯಿಯನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕುಷ್ಟಗಿ ಪೊಲೀಸ್ ಇನ್ಸಫೆಕ್ಟರ್ ಮೌನೇಶ ರಾಠೋಡ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿ ಕುಬೇರಪ್ಪ ಶಿವಪ್ಪ ಪವಾರ್ ನನ್ನು ಬಂಧಿಸಿದ್ದಾರೆ. 2 ಲೀಟರ್ ಪ್ಲಾಸ್ಟಿಕ ಬಾಟಲಿಯಲ್ಲಿ 2 ಬಾಟಲಿ ಹಾಗೂ ನಾಲ್ಕು ಪ್ಲಾಸ್ಟಿಕ್ ಗ್ಲಾಸ್ 300 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಕಳ್ಳಭಟ್ಟಿ ಸರಾಯಿಯನ್ನು ನಿಷೇಧಿಸಿದ್ದರೂ ಸಹ ಮಾರಾಟಕ್ಕೆ ಮುಂದಾಗಿದ್ದರಿಂದ ಸದರಿ ಆರೋಪಿ ವಿರುದ್ದ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಕಾರವಾರದಲ್ಲಿ ಗೋವಾದಿಂದ ತಂದಿದ್ದ ಭಾರಿ ಪ್ರಮಾಣದ ಮದ್ಯ ವಶ