Advertisement

ಕೆರೆಯ ಏರಿಯಲ್ಲಿ ಬಿರುಕು: ದುರಸ್ತಿ ವೇಳೆ ಅವಘಡ; ಅಪಾರ ಪ್ರಮಾಣದ ಫಸಲು ಹಾನಿ

08:39 PM Nov 18, 2022 | Team Udayavani |

ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಜೆಟ್ಟಿ ಅಗ್ರಹಾರ ಗ್ರಾಪಂಗೆ ಸೇರಿದ ಕೆ. ಕಂಬದಹಳ್ಳಿ ಕೆರೆ‌ ಏರಿ ಒಡೆದು ಸ್ಥಳೀಯ ರೈತರಿಗೆ ಅಪಾರ ಬೆಳೆ ಹಾನಿಯಾಗಿ ನಷ್ಟ ಸಂಭವಿಸಿದೆ.

Advertisement

ತಾಲ್ಲೂಕಿನ ಕೆ.ಕಂಬದಹಳ್ಳಿ ಕೆರೆ ಏರಿ ಮದ್ಯ ಭಾಗದಲ್ಲಿ ಒಂದು ದಿನದ ಹಿಂದೆ ನೀರು ಜಿನುಗುತ್ತಿರುವುದು ಕಾಣಿಸಿ ಕೊಂಡಿದೆ. ಕೂಡಲೇ ಎಚ್ಚೆತ್ತ ಗ್ರಾಮಸ್ಥರು ಗ್ರಾಪಂ ಗಮನಕ್ಕೆ ತಂದಿದ್ದರು. ಗ್ರಾಮ ಪಂಚಾಯತಿ ಅಧಿಕಾರಿಗಳು ಕೆರೆ ಏರಿಯಲ್ಲಿ ನೀರು ಜಿನುಗುತ್ತಿರುವುದನ್ನು ಸರಿ ಪಡಿಸಲು ಟ್ರಾಕ್ಟರ್ ಹಾಗೂ ಜೆಸಿಬಿ ಸಹಾಯದಿಂದ ಕೆಲಸ ಮಾಡಲು ಮುಂದಾಗಿದ್ದಾರೆ. ಆಗ ಇದ್ದಕ್ಕಿದ್ದ ಹಾಗೆ ಏರಿ ಕುಸಿದು ನೀರು ಸಂಪೂರ್ಣ ಹೊರ ಹೋಗಿದೆ.

ಕೆರೆಯ ಹಿಂಭಾಗದಲ್ಲಿ ಸುಮಾರು 70ಕ್ಕೂಹೆಚ್ಚು ರೈತರ ಬೆಳೆ ನಷ್ಟವಾಗಿದೆ. ಕೆರೆ ಏರಿ ಒಡೆದು ನೀರು ರಭಸವಾಗಿ ಹರಿದ ಪರಿಣಾಮವಾಗಿ ತೆಂಗು, ಅಡಿಕೆ, ಬಾಳೆಗಿಡ ಮುರಿದಿವೆ. ತೊಗರಿ, ತರಕಾರಿ, ಹೂವು ಇಟ್ಟಿದ್ದ ಇತರೆ ಬೆಳೆ ಭೂಮಿಯಲ್ಲಿ ನೀರು ಹರಿದು ಕೊಚ್ಚಿ ಹೋಗಿದೆ.

ಸ್ಥಳಕ್ಕೆ ತಹಶೀಲ್ದಾರ್ ನಾಹಿದಾ ಜಮ್ ಜಮ್ ಭೇಟಿ ನೀಡಿ, ಕೆರೆ ಏರಿ ಇದ್ದಕ್ಕಿದ್ದ ಹಾಗೆ ಬಿರುಕು ಬಿದ್ದು ಕೆರೆ ಒಡೆದಿದೆ. ನೀರು ರಭಸವಾಗಿ ಹರಿದಿದೆ ಇದರಿಂದ ರೈತರ ಅಪಾರ ಬೆಳೆ ನಷ್ಟವಾಗಿದೆ.ಕೆರೆ ನೀರು ಜಟ್ಟಿ ಅಗ್ರಹಾರ ಕೆರೆಗೆಹರಿದಿದೆ. ಈ ಕೆರೆ ದೊಡ್ಡದಾಗಿರುವ ಕಾರಣದಿಂದಾಗಿ ಯಾವುದೇ ತೊಂದರೆಯಾಗಿಲ್ಲ ಎಂದರು.

ಶೀಘ್ರ ಮರು ನಿರ್ಮಾಣ
ಜಿಪಂವೆಇಇ ರವಿಕುಮಾರ್ ಪ್ರತಿಕ್ರಿಯಿಸಿ ಸಣ್ಣ ಮಟ್ಟದಲ್ಲಿ ಕೆರೆ ಏರಿಯಲ್ಲಿ ನೀರು ಜಿನುಗುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಬಮದ ನಂತರ ತಕ್ಷಣ ಗ್ರಪಂ ಅಧಿಕಾರಿಗಳೊಂದಿಗೆ ದುರಸ್ತಿ ಮಾಡಲು ಟ್ರಾಕ್ಟರ್ ಹಾಗೂ ಜೆಸಿಬಿ ಮೂಲಕ ‌ಮಣ್ಣು ತುಂಬಲು ಮುಂದಾದಾಗ ಏರಿ ಏಕಾಏಕಿ ಕೊಚ್ಚಿ ಹೋಗಲು ಪ್ರಾರಂಭಿಸಿತು ನೀರಿನ ರಭಸಕ್ಕೆಬೆಳೆ ನಷ್ಟವಾಗಿದೆ. ಕೂಡಲೇ ಮರು ನಿರ್ಮಾಣಕ್ಕೆ ಕ್ರಮ ವಹಿಸುವುದಾಗಿ ತಿಳಿಸಿದರು.

Advertisement

.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next