Advertisement

ದುರುಗಮ್ಮನಹಳ್ಳ ಸ್ವಚ್ಛಗೊಳಿಸಿದ ಪ್ರಾಣೇಶ

03:31 PM May 04, 2019 | pallavi |

ಗಂಗಾವತಿ: ನಗರದ ಮಧ್ಯೆ ಭಾಗದಲ್ಲಿ ಹರಿಯುವ ದುರುಗಮ್ಮನಹಳ್ಳದಲ್ಲಿ ಶುಕ್ರವಾರ ಬೆಳಗ್ಗೆ ಹಾಸ್ಯ ಕಲಾವಿದ ಬಿ. ಪ್ರಾಣೇಶ ನೇತೃತ್ವದಲ್ಲಿ ಸ್ವಚ್ಛತಾ ಶ್ರಮಾನುಭವ ಜರುಗಿತು. ಹಳ್ಳದಲ್ಲಿ ಪ್ಲಾಸ್ಟಿಕ್‌ ಗಾಜು ಸೇರಿ ಅಪಾಯಕಾರಿ ವಸ್ತು ಹಾಗೂ ಕಸವನ್ನು ಸಂಗ್ರಹಿಸಲಾಯಿತು. ಸಂಗ್ರಹಿಸಿದ ಕಸವನ್ನು ನಗರಸಭೆಯ ಸಿಬ್ಬಂದಿಗೆ ತಲುಪಿಸಲಾಯಿತು.

Advertisement

ಈ ಸಂದರ್ಭದಲ್ಲಿ ಕಲಾವಿದ ಬಿ. ಪ್ರಾಣೇಶ ಮಾತನಾಡಿ, ನಗರದ ಸೌಂದರ್ಯಕ್ಕೆ ದುರುಗಮ್ಮನಹಳ್ಳವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ಮೊದಲು ದುರುಗಮ್ಮನಹಳ್ಳದ ನೀರು ಸ್ವಚ್ಛವಾಗಿತ್ತು. ಹಳ್ಳಕ್ಕೆ ಕಸ, ಪ್ಲಾಸ್ಟಿಕ್‌, ಕೊಳೆತ ತರಕಾರಿ ಹಾಗೂ ತ್ಯಾಜ್ಯವನ್ನು ಸುರಿಯುವ ಮೂಲಕ ಹಳ್ಳದ ಆರೋಗ್ಯ ಕೆಡಿಸಲಾಗಿದೆ. ಎಲ್ಲರೂ ನಗರಸಭೆ ಜತೆ ಕೈಜೋಡಿಸಿ ಹಳ್ಳವನ್ನು ಸ್ವಚ್ಛಗೊಳಿಸಿ ಮೊದಲಿಂತೆ ಮಾಡಬೇಕಿದೆ. ನಗರದ ಘನತ್ಯಾಜ್ಯವನ್ನು ನಿಗದಿತ ಸ್ಥಳದಲ್ಲಿ ಹಾಕುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.

ಪೌರಾಯುಕ್ತ ಡಾ| ದೇವಾನಂದ ದೊಡ್ಮನಿ, ಡಾ| ಭಾವಿಕಟ್ಟಿ, ಕೌಸರ್‌ ಬೇಗಂ, ಜಿ. ಶ್ರೀಧರ, ಡಾ| ಶಿವಕುಮಾರ ಮಾಲೀಪಾಟೀಲ್, ಮಂಜುನಾಥ ಗುಡ್ಲಾನೂರು, ಮಹಾಲಿಂಗಪ್ಪ, ಅಭಿಷೇಕ್‌, ಜಿ. ಪವನಗುಂಡೂರು, ಉಲ್ಲಾಸ, ವಾಸುಕೊಳಗದ, ಸುರೇಶ ಸಿಂಗನಾಳ ಸೇರಿ ಅನೇಕರಿದ್ದರು.

ರಾಯನಕೆರೆ ಅಭಿವೃದ್ಧಿಗೆ ದೇಣಿಗೆ

ತಾವರಗೇರಾ: ಸಮೀಪದ ಕಿಲಾರಹಟ್ಟಿ ಸಿಆರ್‌ಸಿ ವ್ಯಾಪ್ತಿಯ ಶಾಲಾ ಶಿಕ್ಷಕರು ರಾಯನಕೆರೆ ಅಭಿವೃದ್ಧಿ ಸೇವಾ ಸಮಿತಿಗೆ 21 ಸಾವಿರ ರೂ. ದೇಣಿಗೆ ನೀಡಿದರು.

Advertisement

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷೆ ಗುರುಪಾದಮ್ಮ ಭಂಡಾರಿ, ಸಹಶಿಕ್ಷಕರಾದ ಶಂಕರ್‌ ರಾಠೊಡ್‌, ಗಿರಿಯಪ್ಪಗೌಡ ಪಾಟೀಲ, ಶೇಖರಪ್ಪ ಬಿ., ತಿಮ್ಮಪ್ಪ ಮಡ್ಡೆರ, ಸ್ಥಳೀಯ ಪಿಎಸ್‌ಐ ಮಹಾಂತೇಶ ಸಜ್ಜನ, ಎಪಿಎಂಸಿ ಸದಸ್ಯರಾದ ವಿರುಪಣ್ಣ ನಾಲತವಾಡ, ಸಮಿತಿ ಸದಸ್ಯರಾದ ಅಮರೇಶ ಕುಂಬಾರ, ಸಂಜೀವ ಚಲುವಾದಿ, ಸಿದ್ಧನಗೌಡ, ಕರಡೆಪ್ಪ ನಾಲತವಾಡ ಹಾಗೂ ಇನ್ನಿತರರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next