Advertisement

ಹೆಗ್ಗಡೆ ಭವನದಲ್ಲಿ ದುರ್ಗಾಪೂಜೆ, ದಾಂಡಿಯಾ ರಾಸ್‌

12:16 PM Oct 03, 2017 | |

ನವಿ ಮುಂಬಯಿ: ದಸರಾ ಹಬ್ಬದ ಆಚರಣೆ ಪ್ರಯುಕ್ತ ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ  ಸಾಂಸ್ಕೃತಿಕ ಮತ್ತು ಯುವ ವಿಭಾಗದ ವತಿಯಿಂದ  ನವರಾತ್ರಿ ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ದಾಂಡಿಯಾ ರಾಸ್‌ ಕಾರ್ಯಕ್ರಮವು ಐರೋಲಿಯ  ಹೆಗ್ಗಡೆ ಭವನದಲ್ಲಿ  ಸೆ. 24ರಂದು  ಸಂಜೆ 5ರಿಂದ ಜರಗಿತು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ದೇವತಾ ಪ್ರಾರ್ಥನೆ, ದುರ್ಗಾದೇವಿಗೆ ಪೂಜೆ, ಭಜನ ಕಾರ್ಯಕ್ರಮ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಅನಂತರ ದುರ್ಗೆಯ ಸೇವೆಯಾಗಿ ದಾಂಡಿಯಾ ಹಾಗೂ ಗರ್ಭ ನೃತ್ಯ ಕಾರ್ಯಕ್ರಮ ನಡೆಯಿತು.  ಕಾರ್ಯಕ್ರಮದಲ್ಲಿ ಸಮಾಜದ ಬಾಂಧವರಲ್ಲದೆ ಸ್ಥಳೀಯರು ಜಾತಿ ಮತ ಭೇದವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ವಿಶೇಷವಾಗಿ ಗರ್ಭ ನೃತ್ಯದ ಉಡುಗೆ ತೊಡುಗೆ ಯೊಂದಿಗೆ ಮಕ್ಕಳು ಮಹಿಳೆಯರು ಭಾಗವಹಿಸಿ ಹಲವು ಬಹುಮಾನಗಳನ್ನು ತಮ್ಮದಾಗಿಸಿಕೊಂಡರು.  ಕಾರ್ಯಕ್ರಮದಲ್ಲಿ ಹೆಗ್ಗಡೆ ಸೇವಾ ಸಂಘದ ಅಧ್ಯಕ್ಷ ವಿಜಯ್‌ ಬಿ. ಹೆಗ್ಡೆ, ಮಾಜಿ ಅಧ್ಯಕ್ಷ ವಿ. ಎಸ್‌. ಹೆಗ್ಡೆ, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷ  ಸುರೇಂದ್ರಕುಮಾರ್‌  ಹೆಗ್ಡೆ, ತುಳು ಕೂಟ ಐರೋಲಿ ಇದರ ಅಧ್ಯಕ್ಷ ಮತ್ತು ಆಡಳಿತ ಮಂಡಳಿ ಸದಸ್ಯರು, ಶ್ರೀ  ಅಯ್ಯಪ್ಪ ಭಕ್ತ ವೃಂದ ಚಾರಿಟೇಬಲ… ಟ್ರಸ್ಟ್‌ ನೆರೂಲ… ಇದರ ಅಧ್ಯಕ್ಷ  ಅನಿಲ್‌ ಕುಮಾರ್‌ ಹೆಗ್ಡೆ ಪೆರ್ಡೂರು, ಸಂಘದ ಕಾರ್ಯಾಧ್ಯಕ್ಷ  ಸಂಜೀವ ಪಿ. ಹೆಗ್ಡೆ, ಕಾರ್ಯದರ್ಶಿ ಶಂಕರ್‌ ಆರ್‌. ಹೆಗ್ಡೆ, ಕೋಶಾಧಿಕಾರಿ ರಮೇಶ್‌ ಎಂ. ಹೆಗ್ಡೆ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ರವಿ ಹೆಗ್ಡೆ ಹೆರ್ಮುಂಡೆ, ಜೊತೆ ಕೋಶಾಧಿಕಾರಿ ಚಂದ್ರಶೇಖರ್‌ ಹೆಗ್ಡೆ, ಕ್ಯಾಟರಿಂಗ್‌ ಸಮಿತಿ ಕಾರ್ಯಾಧ್ಯಕ್ಷ  ಬಿ. ಗೋಪಾಲ್‌ ಹೆಗ್ಡೆ, ಹೆಗ್ಗಡೆ ಭವನ ಸ್ವತ್ಛತಾ ಸಮಿತಿ ಕಾರ್ಯಾಧ್ಯಕ್ಷ  ಕೆ. ಪ್ರಸನ್ನ ಹೆಗ್ಡೆ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ  ಶಶಿಧರ್‌  ಹೆಗ್ಡೆ,  ಯುವ ವಿಭಾಗದ ಕಾರ್ಯಾಧ್ಯಕ್ಷ ಅಭಿಷೇಕ್‌ ಸುಧಾಕರ್‌ ಹೆಗ್ಡೆ, ಮಹಿಳಾ ವಿಭಾಗ, ಆಡಳಿತ ಸಮಿತಿ ಸದಸ್ಯರು, ಮತ್ತು ಸಂಸ್ಥೆಯ ಸದಸ್ಯರು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಸುರೇಂದ್ರ ಕುಮಾರ್‌  ಹೆಗ್ಡೆ ದಂಪತಿ, ಯುವ ವಿಭಾಗದ ಸದಸ್ಯೆಯರು, ನವೀನ ಬಾಬು ಹೆಗ್ಡೆ, ಗೀತಾ ಶೆಟ್ಟಿ, ಪೂರ್ಣಿಮಾ, ಶಾರದಾ ವಿಟuಲ್‌ ಹೆಗೆª, ಅನಂತೇಶ್‌  ಮುದ್ದು ಅಂಚನ್‌, ನವ್ಯಾ ಹೆಗ್ಡೆ, ಸಂಗೀತ ಖೈರ್ನಾರ್‌, ಸಂಕೇತ್‌  ಹೆಗ್ಡೆ, ಪದ್ಮನಾಭ ಗೌಡ ಅವರು ಗರ್ಭ ಹಾಗೂ ದಾಂಡಿಯಾ ಕಾರ್ಯಕ್ರಮದಲ್ಲಿ ಬಹುಮಾನ ಪಡೆದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ನವೀನ ಆರ್‌.  ಹೆಗ್ಡೆ ಮತ್ತು ರಾಜೇಶ್‌ ಆರ್‌. ಹೆಗ್ಡೆ ಮೊದಲಾದವರು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next