Advertisement

Mysore Dasara: ದಸರಾ ವಸ್ತು ಪ್ರದರ್ಶನದಲ್ಲಿ ಪಂಚ ಗ್ಯಾರಂಟಿಗಳ ದರ್ಬಾರ್: ಸಿಎಂ ಮೆಚ್ಚುಗೆ

01:18 PM Oct 18, 2023 | Team Udayavani |

ಮೈಸೂರು: ರಾಜ್ಯ ಸರ್ಕಾರದ ಜನಪ್ರಿಯ ಹಾಗೂ ಜನಪರ ಪಂಚ ಗ್ಯಾರಂಟಿಗಳ ವಾರ್ತಾ ಇಲಾಖೆ ಮಳಿಗೆ ಜನರನ್ನು ತನ್ನತ್ತ ಸೆಳೆಯುವುದರೊಂದಿಗೆ ಮಾನ್ಯ ಮುಖ್ಯಮಂತ್ರಿಗಳ ಮೆಚ್ಚುಗೆಗೂ ಪಾತ್ರವಾಯಿತು.

Advertisement

ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಭವ್ಯವಾಗಿ ಮೂಡಿಬಂದಿರುವ ವಾರ್ತಾ ಇಲಾಖೆಯಿಂದ ಹಾಕಲಾಗಿರುವ ಮಳಿಗೆಯಲ್ಲಿ ನುಡಿದಂತೆ ನಡೆದಿದ್ದೇವೆ ಎನ್ನುವುದರೊಂದಿಗೆ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಭರಪೂರ ಮಾಹಿತಿ ಆಸಕ್ತರಿಗೆ ಸರ್ಕಾರ ನಮಗೆ ಇಷ್ಟೆಲ್ಲಾ ಕೊಟ್ಟಿದೆಯಾ ಎಂದು ಆಶ್ಚರ್ಯ ವ್ಯಕ್ತಪಡಿಸುವಂತೆ ಮಾಡುವುದರೊಂದಿಗೆ ಮಳಿಗೆ ಉಧ್ಘಾಟಿಸಿದ ಸಿ.ಎಂ.ಸರ್ಕಾರದ ಯೋಜನೆಗಳನ್ನು ಜನರ ಬಳಿಗೆ ಕೊಂಡೊಯ್ಯುವ ವಾರ್ತಾ ಇಲಾಖೆಯ ಪ್ರಯತ್ನವನ್ನು ಶ್ಲಾಘಿಸಿದರು

ಪ್ರಮುಖ ಐದು ಗ್ಯಾರಂಟಿಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆಗಳು ಅನುಕೂಲ ಪಡೆದ ಫಲಾನುಭವಿಗಳ ಅಂಕಿ ಸಂಖ್ಯೆ ನೀಡುವುದರೊಂದಿಗೆ, ಯೋಜನೆಗಳಲ್ಲಿ ನೊಂದಾಯಿಸಿಕೊಳ್ಳದಿರುವವರು ಹೇಗೆ ನೋಂದಾಯಿಸಿಕೊಳ್ಳಬೇಕೆಂಬುದನ್ನು ವಾರ್ತಾ ಇಲಾಖೆಯ ಸ್ವಯಂ ಸೇವಕರು ಮಾಹಿತಿ ನೀಡುತ್ತಿದ್ದಾರೆ.

ಗ್ಯಾರಂಟಿ ಯೋಜನೆಗಳು ಮಹಿಳೆಯರ, ಯುವಕ ಯುವತಿಯರ, ಹಿಂದುಳಿದ ಅಲ್ಪಸಂಖ್ಯಾತರ, ಗೃಹಿಣಿಯರ ಮನೋಸ್ಥೈರ್ಯವನ್ನು ಹೆಚ್ಚಿಸಿವೆ.

ಮಳಿಗೆ ನೋಡಲು ಬರುತ್ತಿರುವ ಬಹಳಷ್ಟು ಮಹಿಳೆಯರು ಸಿದ್ದರಾಮಯ್ಯನವರ ಕಟೌಟ್ಗಳಿಗೆ ಕೈ ಮುಗಿದದ್ದೂ ಇದೆ

Advertisement

ಬಹಳ ಅಂದ ಹಾಗೂ ಆಕರ್ಷಕವಾಗಿ ಮೂಡಿಬಂದಿರುವ ಜೀವಂತಿಕೆಗೆ ಹತ್ತಿರವಾಗಿರುವ ಬೊಂಬೆಗಳ ಕಲಾಕೃತಿಗಳು ಯೋಜನೆಯ ಸಾರಾಂಶವನ್ನ ಮನದಟ್ಟು ಮಾಡಲು ಮತ್ತಷ್ಟು ಸಾಥ್ ನೀಡುತ್ತಿವೆ.

ಕನ್ನಡದ ಮೊದಲ ಗ್ರಂಥ, ಮೊದಲ ಕಾವ್ಯ, ಕೃತಿ, ಮೊದಲ ಚಲನಚಿತ್ರ, ಕನ್ನಡದ ಕವಿಗಳು, ಸಾಹಿತಿಗಳು, ಶರಣರು, ನಾಡಿಗೆ ನಾಲ್ವಡಿಯವರ ಕೊಡುಗೆಗಳು, ಭಾರತ ರತ್ನ ಪಡೆದ ಕನ್ನಡಿಗರು ಸೇರಿದಂತೆ ವಿವಿಧ ಮಾಹಿತಿಗಳು ಮೇಳೈಸಿವೆ.

ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ನೀಡಿದ್ದ ಯೋಜನೆಗಳಾದ ಜನತಾದರ್ಶನ,ಇಂದಿರಾ ಕ್ಯಾಂಟೀನ್, ಬ್ರಾಂಡ್ ಬೆಂಗಳೂರು, ಪಿಟಿಸಿಎಲ್ ಕಾಯ್ದೆ ತಿದ್ದುಪಡಿ, ಕ್ಷೀರಭಾಗ್ಯ ಯೋಜನೆಗಳ ಮಾಹಿತಿ ಮಹತ್ವದ್ದಾಗಿದೆ.

ಸರ್ಕಾರದ ಎಲ್ಲಾ ಯೋಜನೆಗಳು ಆಕರ್ಷಕ ಹಾಗೂ ಮಾಹಿತಿಪೂರ್ಣವಾಗಿದ್ದು ಈಗಾಗಲೇ ರಾಜ್ಯದ ಶೇ.92 ರಷ್ಟು ಜನಕ್ಕೆ ಗ್ಯಾರಂಟಿ ಯೋಜನೆಗಳ ಪ್ರಯೋಜನ ತಲುಪುತ್ತಿವೆ.

ಸಂವಿಧಾನ ಪೀಠಿಕೆಯ ಜಾಗತಿಕ ವಾಚನದ ವಿಶ್ವದಾಖಲೆ ಮಾಡಿದ 2,31,66,401 ಜನರಿಗೆ ಧನ್ಯವಾದ ಹೇಳಲಾಗಿದೆ.

ಸ್ತ್ರೀ ಸ್ವಾತಂತ್ರ್ಯದತ್ತ ದಿಟ್ಟಹೆಜ್ಜೆ ,ನಾಲ್ವಡಿಯವರ ಸಾಮಾಜಿಕ ಕಾನೂನುಗಳು,‌ ಸಿ.ಎಂ.ಸಿದ್ದರಾಮಯ್ಯನವರ ಆಯವ್ಯಯ ಮಂಡನೆಯ ಚರಿತ್ರಾರ್ಹ ದಾಖಲೆ,ಲೇಸ್ಲಿ ಮಿಲ್ಲರ್ ಸಮಿತಿ,ಪಾಲ್ಕೆ ಪುರಸ್ಕ್ೃತರ ವಿವರಗಳು ಅಂದವಾಗಿ ಮೂಡಿಬಂದಿವೆ.

ಇದನ್ನೂ ಓದಿ: Pramod Muthalik: ಮುಂದಿನ 30 ದಿನ ಶಿವಮೊಗ್ಗ ಪ್ರವೇಶಿಸದಂತೆ ಮುತಾಲಿಕ್ ಗೆ ನಿರ್ಬಂಧ

Advertisement

Udayavani is now on Telegram. Click here to join our channel and stay updated with the latest news.

Next