Advertisement

ಈಗಿರುವುದು ಡೂಪ್ಲಿಕೇಟ್‌ ಕಾಂಗ್ರೆಸ್‌: ಸಚಿವ ಪ್ರಹ್ಲಾದ ಜೋಶಿ

09:44 PM Aug 14, 2022 | Team Udayavani |

ಹಾವೇರಿ: ಈಗಿರುವ ಕಾಂಗ್ರೆಸ್ಸಿನವರು ಒರಿಜಿನಲ್‌ ಕಾಂಗ್ರೆಸ್ಸಿಗರಲ್ಲ. ಈಗಿನ ಕಾಂಗ್ರೆಸ್‌ಗೂ ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿದ್ದ ಕಾಂಗ್ರೆಸ್‌ಗೂ ಸಂಬಂಧವಿಲ್ಲ. ಈಗಿರುವುದು ಡೂಪ್ಲಿಕೇಟ್‌ ಕಾಂಗ್ರೆಸ್‌ ಮತ್ತು ಈಗಿನವರು ನಕಲಿ ಗಾಂಧಿಗಳು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.

Advertisement

ಕಾಂಗ್ರೆಸ್ ಪಕ್ಷದಿಂದಲೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂಬ ಕಾಂಗ್ರೆಸ್‌ ಮುಖಂಡರ ಹೇಳಿಕೆಗೆ ಶಿಗ್ಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು, ಇದರಲ್ಲೂ ಕಾಂಗ್ರೆಸ್‌ನವರು ರಾಜಕೀಯ ಮಾಡಬಾರದಿತ್ತು. ಕಾಂಗ್ರೆಸ್‌, ಅನೇಕ ಸಂಘಟನೆಗಳು, ಕ್ರಾಂತಿಕಾರಿಗಳ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯಸಿಕ್ಕಿದೆ. ಅಂದಿನ ಹೋರಾಟವನ್ನು ನಮ್ಮ ಹೋರಾಟ ಎಂದು ಕ್ಲೇಮ್‌ ಮಾಡಿಕೊಳ್ಳಲು ಇವರಿಗೆ ಯಾವುದೇ ನೈತಿಕತೆಯಿಲ್ಲ. ಇದರಲ್ಲಿ ಭ್ರಷ್ಟರು, ದೇಶಕ್ಕೆ ಸುಳ್ಳು ಹೇಳಿರುವವರು ಬಂದಿದ್ದಾರೆ. ಇದೊಂದು ನಕಲಿ ಕಾಂಗ್ರೆಸ್‌ ಮತ್ತು ನಕಲಿ ಗಾಂಧಿಗಳ ಪಾರ್ಟಿ ಎಂದರು.

ಬಿಜೆಪಿ ಅಧಿಕೃತವಾಗಿ 1980ರಲ್ಲಿ ಬಂತು. ಹಿಂದಿನ ಲೆಕ್ಕ ತೆಗೆದರೆ ಜನ ಸಂಘ ಬಂದಿದ್ದು 1952ರಲ್ಲಿ. ಇದಕ್ಕಿಂತ ಮೊದಲು ನಮ್ಮ ಸಂಘ ಪರಿವಾರದವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಆದರೆ, ಈಗಿನ ಕಾಂಗ್ರೆಸ್ಸಿಗರು ಎಲ್ಲಿ ಭಾಗವಹಿಸಿದ್ದರು? ಈ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಆಗಿನ ಕಾಂಗ್ರೆಸ್ಸೇ ಬೇರೆ, ಈಗಿನ ಕಾಂಗ್ರೆಸ್ಸೇ ಬೇರೆ. ನಾವು ಹೋರಾಟ ಮಾಡಿದ್ದೆವು ಎನ್ನಲು ಇವರಿಗೆಲ್ಲಿ ಅಧಿಕಾರವಿದೆ ಎಂದರು.

ಶಿವಮೊಗ್ಗದಲ್ಲಿ ಸಾವರಕರ್‌ ಬ್ಯಾನರ್‌ ಹರಿದು ಹಾಕಿದ್ದು ತಪ್ಪು. ಆ ರೀತಿ ಯಾರೂ ಮಾಡಬಾರದು. ಸಾವರ್ಕರ್‌ ಹಾಗೂ ಟಿಪ್ಪು ಸುಲ್ತಾನ್‌ಗೆ ಯಾರೂ ಹೋಲಿಸಬಾರದು. ಸೌಹಾರ್ದತೆ ಯಾರೂ ಹಾಳು ಮಾಡಬಾರದು. ಬ್ಯಾನರ್‌ಗಳ ಬಗ್ಗೆ ಆಕ್ಷೇಪಣೆ ಇದ್ದರೆ ಕಾನೂನಿನ ಮೂಲಕ ಪೊಲೀಸರಿಗೆ ಆಕ್ಷೇಪಣೆ ಸಲ್ಲಿಸಲಿ. ಚಾಮರಾಜಪೇಟೆ ಈದ್ಗಾ ಮೈದಾನ ಕಾರ್ಪೋರೇಶನ್‌ಗೆ ಸೇರಿದ್ದು. ಅಲ್ಲಿ ಯಾರಿಗೆ ಪರ್ಮಿಷನ್‌ ಕೊಡಬೇಕು ಬಿಡಬೇಕು ಎಂಬುದನ್ನು ಕಾರ್ಪೋರೇಶನ್‌ನವರು ತೀರ್ಮಾನ ಮಾಡುತ್ತಾರೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next