Advertisement

‘ವಿಕ್ರಾಂತ್‌ ರೋಣ’ನಿಗೆ ಸಾಥ್ ನೀಡಿದ ದುಲ್ಕರ್‌ ಸಲ್ಮಾನ್

10:57 AM Jul 18, 2022 | Team Udayavani |

ಕಿಚ್ಚ ಸುದೀಪ್‌ ನಟನೆಯ “ವಿಕ್ರಾಂತ್‌ ರೋಣ’ ಚಿತ್ರದ ಹವಾ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್‌, ಹಾಡುಗಳು ಹಿಟ್‌ಲಿಸ್ಟ್‌ ಸೇರಿವೆ. ಈಗ ಚಿತ್ರತಂಡದಿಂದ ಹೊಸ ಅಪ್‌ಡೇಟ್‌ ಬಂದಿದೆ. ಅದು ಸಿನಿಮಾದ ಬಿಡುಗಡೆಯ ವಿಚಾರವಾಗಿ.

Advertisement

ನಿಮಗೆ ಗೊತ್ತಿರುವಂತೆ “ವಿಕ್ರಾಂತ್‌ ರೋಣ’ ಚಿತ್ರದ ಹಿಂದಿ ಅವತರಣಿಕೆ ಬಿಡುಗಡೆಗೆ ಸಲ್ಮಾನ್‌ ಖಾನ್‌ ಸಾಥ್‌ ನೀಡುತ್ತಿದ್ದಾರೆ. ಈಗ ಮತ್ತೂಂದಿಷ್ಟು ಭಾಷೆಯ ರಿಲೀಸ್‌ಗೆ ಬೇರೆ ಬೇರೆ ಸಂಸ್ಥೆಗಳು, ವ್ಯಕ್ತಿಗಳು ಮುಂದೆ ಬಂದಿದ್ದಾರೆ. ಅದರಲ್ಲಿ ದುಲ್ಕರ್‌ ಸಲ್ಮಾನ್‌ ಕೂಡಾ ಒಬ್ಬರು.

“ವಿಕ್ರಾಂತ್‌ ರೋಣ’ ಚಿತ್ರದ ಮಲಯಾಳಂ ರಿಲೀಸ್‌ಗೆ ಖ್ಯಾತ ನಟ ದುಲ್ಕರ್‌ ಸಲ್ಮಾನ್‌ ಮುಂದೆ ಬಂದಿದ್ದು, ಅವರ ವೇಫ‌ರೆರ್‌ ಫಿಲಂಸ್‌ನಡಿ ಚಿತ್ರ ಬಿಡುಗಡೆ ಮಾಡುತ್ತಿದ್ದಾರೆ. ಈ ಮೂಲಕ ಮೂಲ ಕನ್ನಡ ಸಿನಿಮಾವೊಂದಕ್ಕೆ ದುಲ್ಕರ್‌ ಸಾಥ್‌ ನೀಡಿದಂತಾಗುತ್ತದೆ.

ಇದನ್ನೂ ಓದಿ:ಕಾನೂನು ಬಲವರ್ಧನೆಗೆ ಟಾನಿಕ್‌ ನೀಡುವರೇ ಅಲೋಕಕುಮಾರ?

ಇನ್ನು ಚಿತ್ರದ ತಮಿಳು ಅವತರಣಿಕೆಯನ್ನು ಜೀ ಸ್ಟುಡಿಯೋಸ್‌, ತೆಲುಗು ರಿಲೀಸ್‌ಗೆ ಕಾಸ್ಮೋಸ್‌ ಎಂಟರ್‌ಟೈನ್ಮೆಂಟ್‌ ಹಾಗೂ ಕೆಎಫ್ಸಿ ಸಾಥ್‌ ನೀಡುತ್ತಿದೆ.  ಕನ್ನಡ ವರ್ಶನ್‌ ವಿತರಣೆ ಜಾಕ್‌ ಮಂಜು ಅವರ ಶಾಲಿನಿ ಆರ್ಟ್ಸ್ ಮೂಲಕ ಬಿಡುಗಡೆಯಾಗುತ್ತಿದೆ. ಇದರ ಜೊತೆಗೆ ಚಿತ್ರದ ವಿದೇಶಿ ಬಿಡುಗಡೆ ಹಕ್ಕನ್ನು 128 ಮೀಡಿಯಾ ಪಡೆದುಕೊಂಡಿದೆ.

Advertisement

ಈ ಮೂಲಕ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತಯಾರಾಗಿರುವ “ವಿಕ್ರಾಂತ್‌ ರೋಣ’ ಚಿತ್ರ ಅದ್ಧೂರಿಯಾಗಿ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರವನ್ನು ಜಾಕ್‌ ಮಂಜು ನಿರ್ಮಿಸಿದ್ದು, ಅನೂಪ್‌ ಭಂಡಾರಿ ನಿರ್ದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next