Advertisement
ನಗರದ ಪಚ್ಚಪ್ಪ ವೃತ್ತದಿಂದ ರಾಮಸಮುದ್ರದ ವರೆಗೆ 3.10 ಕಿ.ಮೀ. ದೂರದವರೆಗೆ ಬಿ. ರಾಚಯ್ಯ ಜೋಡಿ ರಸ್ತೆಯನ್ನು ನಾಲ್ಕು ಪಥದ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಕೇಂದ್ರ ಭೂಸಾರಿಗೆ ಮಂತ್ರಾಲಯವು 2016- 17ನೇ ಸಾಲಿನ ಕೇಂದ್ರ ರಸ್ತೆ ನಿಧಿ ಯೋಜನೆಯಡಿ 35 ಕೋಟಿ ರೂ. ಅನುದಾನ ನೀಡಿದ್ದು, ಎಂಎಸ್ ಆರ್ ಕನ್ಸ್‌ಟ್ರಕ್ಷನ್ ಎಂಬ ಕಂಪೆನಿ ಕಾಮಗಾರಿ ನಡೆಸುತ್ತಿದೆ.2017ರ ಆಗಸ್ಟ್ 8ರಂದು ಈ ರಸ್ತೆ ಕಾಮಗಾರಿಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು. ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಧೂಳೆದ್ದು ಜನರು ಹಲವು ತಿಂಗಳು ಕಾಲ ಪರಿತಪಿಸ ಬೇಕಾ
ಯಿತು. ಮಾಸ್ಕ್ ಧರಿಸಿ ಸಂಚರಿಸು ವಂತಾಗಿತ್ತು. ಮೊದಲಿಗೆ 80 ಅಡಿ ಅಗಲೀ ಕರಣಗೊಳಿಸುವ ಕಾಮಗಾರಿಯನ್ನು ನಂತರ 100 ಅಡಿಗೆ ಬದಲಿಸಲಾಯಿತು. ಅಕ್ಕಪಕ್ಕದ ಕಟ್ಟಡಗಳಿಗೆ ಜಿಲ್ಲಾಡಳಿತ, ನಗರಸಭೆ ಯಾವುದೇ ಪರಿಹಾರ ನೀಡದಿದ್ದರಿಂದ ಕೆಲವು ಕಟ್ಟಡ ಮಾಲಿಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹೀಗಾಗಿ ಕಾಮಗಾರಿ ಕುಂಟುತ್ತಾ ಸಾಗುತ್ತಿತ್ತು.
ಕಾಂಕ್ರೀಟ್) ಹಾಕಲಾಗುತ್ತಿದೆ. ಇದು ರಸ್ತೆಯ ನಿರ್ಮಾಣದಲ್ಲಿ ಅಂತಿಮ ಹಂತದ ಕಾಮಗಾರಿ. ಇದರ ಅಡಿಗೆ, ಜಿಎಸ್‌ಬಿ (ಗ್ರಾನುಲರ್ ಸಬ್ ಬೇಸ್) ಹಾಗೂ ಡಿಎಲ್‌ಸಿ (ಡ್ರೈಲೀನ್ ಕಾಂಕ್ರೀಟ್) ಹಾಕಲಾಗಿತ್ತು. ಒಟ್ಟಾರೆ ಈ ರಸ್ತೆಯ ಎತ್ತರ 250 ಮಿ.ಮೀ ಇರಲಿದೆ. ರಸ್ತೆಯ ಒಂದು ಬದಿಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಹಳೆಯ ಕಿತ್ತು ಹೋಗಿರುವ ಇನ್ನೊಂದು ಬದಿಯ ರಸ್ತೆಯಲ್ಲಿ ವಾಹನ ಸವಾರರು, ಪಾದಚಾರಿಗಳು ಬಹಳ ಸಂಕಷ್ಟದಲ್ಲಿ ಸಂಚರಿಸಬೇಕಾಗಿದೆ. ಇನ್ನೊಂದು ಬದಿಗೆ ಪೂರ್ತಿ 3.10 ಕಿ.ಮೀ.ಗೆ ಪಿಕ್ಯೂಸಿ ಹಾಕುವ ಕೆಲಸ ಪೂರ್ಣಗೊಳ್ಳಲು ಕನಿಷ್ಠ ಮೂರು ತಿಂಗಳಾಗಲಿದೆ! ಪಿಕ್ಯೂಸಿ ಕೆಲಸ ಮುಗಿದ ಮೇಲೆ ಒಂದು ತಿಂಗಳ ಕಾಲ ಕ್ಯೂರಿಂಗ್‌ಗೇ ರಸ್ತೆಯನ್ನು ಬಿಡಬೇಕಾಗಿದೆ. ಹಾಗಾಗಿ ಇನ್ನೂ ಮೂರು ತಿಂಗಳ ಕಾಲ ಸಾರ್ವಜನಿಕರು ತೊಂದರೆಯನ್ನು ಸಹಿಸಿಕೊಳ್ಳಬೇಕಾಗಿದೆ.
Related Articles
ಜನರಿಗೂ ಈಗಿನಷ್ಟು ಕಿರಿಕಿರಿ ಇರುವುದಿಲ್ಲ. ವಾಹನ ಪಾರ್ಕಿಂಗ್‌ಗೆಸ್ಲಾಬ್ ಸದ್ಯಕ್ಕಿಲ್ಲ!
Advertisement
ಈಗ 80 ಅಡಿ ರಸ್ತೆ ನಿರ್ಮಾಣಕ್ಕಷ್ಟೇ ಅನುದಾನ ಲಭ್ಯವಿದೆ. ಗುತ್ತಿಗೆದಾರರು 80 ಅಡಿ ರಸ್ತೆ ಮತ್ತು ಚರಂಡಿ ನಿರ್ಮಾಣಮಾಡಲಿದ್ದಾರೆ. ವಾಹನಗಳ ಪಾರ್ಕಿಂಗ್‌ಗೆ ಬೇಕಾದ ಇನ್ನುಳಿದ ಜಾಗಕ್ಕೆ ಸ್ಲಾಬ್ ಹಾಕಲು ಹೊಸ ಅನುದಾನ ಮಂಜೂರಾಗಬೇಕು. ಅಲ್ಲಿಯವರೆಗೂ ಪಾರ್ಕಿಂಗ್ ಜಾಗಕ್ಕೆ ಇಂಟರ್ ಲಾಕಿಂಗ್ ಸ್ಲಾಬ್ ಹಾಕುವುದಿಲ್ಲ. ಅದಕ್ಕೆ ಮಣ್ಣು ಹಾಕಿ ಹಾಗೆ ಬಿಡಲಾಗುತ್ತದೆ. 80 ಅಡಿಗೆ ಯೋಜನೆಯಾಗಿದ್ದ ರಸ್ತೆಯನ್ನು ಜಿಲ್ಲಾಡಳಿತ 100 ಅಡಿಗೆ ಮಾಡಬೇಕೆಂದು ದಿಢೀರ್ ಎಂದು ಸೂಚನೆ ನೀಡಿದ್ದು ಇದಕ್ಕೆ ಕಾರಣ. ಗುತ್ತಿಗೆದಾರರು ಯೋಜನೆಯಲ್ಲಿ ದ್ದಂತೆ 80 ಅಡಿ ರಸ್ತೆ ಹಾಗೂ ಚರಂಡಿ
ನಿರ್ಮಿಸುತ್ತಿದ್ದಾರೆ. ಉಳಿದ ಜಾಗಕ್ಕೆ ಸ್ಲಾಬ್ ನಿರ್ಮಿಸಲು ಜಿಲ್ಲಾಡಳಿತ ಹೊಸ ಅನುದಾನ ತರಬೇಕಾಗಿದೆ. ಕೆ.ಎಸ್.ಬನಶಂಕರ ಆರಾಧ್ಯ