Advertisement

ಕರ್ತವ್ಯ ನಿರತ ಎಎಸ್‌ಐ ಹೃದಯಾಘಾತದಿಂದ ಸಾವು

01:22 PM Aug 07, 2017 | Team Udayavani |

ಬೆಂಗಳೂರು: ಕರ್ತವ್ಯ ನಿರತ ಸಹಾಯಕ ಪೊಲೀಸ್‌ ಇನ್ಸ್‌ಪೆಕ್ಟರ್‌ವೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವಿಜಯನಗರ ಠಾಣೆಯ ಎಎಸ್‌ಐ ಚಂದ್ರಶೇಖರ್‌ (58)ಮೃತರು. 

Advertisement

ಕೆಲದಿನಗಳ ಹಿಂದೆ ವಿಜಯನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಆತ್ಮಹತ್ಯೆ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ, ಅಧಿಕಾರಿ ಚಂದ್ರಶೇಖರ್‌ ಇಂದಿರಾನಗರದಲ್ಲಿರುವ ದೂರುದಾರರಿಂದ ಮಾಹಿತಿ ಪಡೆದುಕೊಳ್ಳುವ ಸಲುವಾಗಿ ಶನಿವಾರ ರಾತ್ರಿ ವಿಜಯನಗರದಿಂದ ಮೆಟ್ರೋ ಮೂಲಕ ಬೈಯಪನಹಳ್ಳಿ ಮೆಟ್ರೋ ನಿಲ್ದಾಣಕ್ಕೆ 8-20ರ ಸುಮಾರಿಗೆ ಬಂದಿಳಿದಿದ್ದಾರೆ.

ನಿಲ್ದಾಣದಿಂದ ಹೊರ ಬಂದ ಕೂಡಲೇ ಚಂದ್ರಶೇಖರ್‌ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡು ಕುಸಿದುಬಿದ್ದಿದ್ದಾರೆ. ಇದನ್ನು ಗಮನಿಸಿದ ಅಲ್ಲಿದ್ದವರು ತಕ್ಷಣ ಅವರನ್ನು ಸಿಎಂಎಚ್‌ ರಸ್ತೆಯಲ್ಲಿರುವ ಚಿನ್ಮಯಿ ನಾರಾಯಣ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಿಸಿದರೂ, ಚಿಕಿತ್ಸೆ ಫ‌ಲಿಸದೇ 8-45ರ ಸುಮಾರಿಗೆ ಕೊನೆಯುಸಿರೆಳಿದಿದ್ದಾರೆ ಎಂದು ಪೊಲೀಸರು ತಿಳಿಸಿದರು.

 ಅಧಿಕಾರಿ ಚಂದ್ರಶೇಖರ್‌ ಅವರ ಮೃತದೇಹದ ಮರಣೋತ್ತರ  ಪರೀಕ್ಷೆ ಬಳಿಕ ಮಾಗಡಿ ರಸ್ತೆಯ ಪೊಲೀಸ್‌ ಕ್ವಾಟ್ರಸ್‌ನಲ್ಲಿರುವ ಅವರ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಅಧಿಕಾರಿ ಬಸವರಾಜ್‌, ಪತ್ನಿ, ಇಬ್ಬರು ಮಕ್ಕಳು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಪಶ್ಚಿಮ  ವಿಭಾಗದ ಡಿಸಿಪಿ ಅನುಚೇತ್‌, ಸೇರಿದಂತೆ ಹಿರಿಯ ಅಧಿಕಾರಿಗಳು, ಸಹದ್ಯೋಗಿ ಸಿಬ್ಬಂದಿ ಅಂತಿಮ ದರ್ಶನ ಪಡೆದುಕೊಂಡರು. ಬಳಿಕ ಅವರ ಹುಟೂರಾದ ಚನ್ನಪಟ್ಟಣದ ತಾಲೂಕಿನ ವಿರೋಪಾಕ್ಷಪುರಕ್ಕೆ ತೆಗೆದುಕೊಂಡು ಹೋಗಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

ಸ್ನೇಹಪರ ವ್ಯಕ್ತಿತ್ವ
ಈ ಮುಂಚೆ ಉತ್ತರ ವಿಭಾಗದ ಠಾಣೆಯೊಂದರಲ್ಲಿ ಹೆಡ್‌ಕಾನ್ಸ್‌ಟೇಬಲ್‌ ಆಗಿದ್ದ  ಬಸವರಾಜ್‌, ಕಳೆದ ಆರು ತಿಂಗಳ ಹಿಂದೆ ಎಎಸ್‌ಐ ಹುದ್ದೆಗೆ ಬಡ್ತಿ ಹೊಂದಿ ವಿಜಯನಗರ ಠಾಣೆಗೆ ವರ್ಗಾವಾಗಿದ್ದರು. ಅತ್ಯಂತ ಸರಳ ಹಾಗೂ ಮೃದು ಸ್ವಭಾವದ  ವ್ಯಕ್ತಿತ್ವ ಅವರದಾಗಿತ್ತು.

ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರ ಜೊತೆ ಉತ್ತಮ ಭಾಂಧವ್ಯ ಹೊಂದಿದ್ದರು. ಇನ್ನೂ ಮೂರು ವರ್ಷಗಳ ನಂತರ ನಿವೃತ್ತ ಹೊಂದಲಿದ್ದು, ಇದೇ ಮೊದಲ ಬಾರಿಗೆ  ಅಟ್ಯಾಕ್‌ ಆದ ಹೃದಯಾಘಾತದಿಂದ ಸಾವನ್ನಪ್ಪಿದ್ದು ಅಪಾರ ನೋವುಂಟು ಮಾಡಿದೆ ಎಂದು  ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next