Advertisement
2000 ಲೀ. ನೀರಿಗೆ ರೂ. 600 ಹಲವಾರು ವಸತಿಗೃಹಗಳು, ಹೊಟೇಲುಗಳಿಗೆ ಈಗ ಟ್ಯಾಂಕರ್ ನೀರೇ ಗತಿ. ಹೊಟೇಲ್ಲೊಂದಕ್ಕೆ ಪ್ರತಿದಿನ ಕನಿಷ್ಠ 2000 ಲೀ. ನೀರು ಬೇಕಾಗಿದ್ದು, ಖಾಸಗಿಯವರಿಂದ ತರಿಸಿಕೊಳ್ಳುತ್ತಿದ್ದಾರೆ.
ಕೊಡಚಾದ್ರಿ ಬೆಟ್ಟದಲ್ಲಿರುವ ನಾನಾ ರೀತಿಯ ಔಷಧೀಯ ಗಿಡಗಳು ನೀರಿಲ್ಲದೇ ನಾಶವಾಗುತ್ತಿದೆ. ಇದರೊಂದಿಗೆ ಅಭಯಾರಣ್ಯ ಸಹಿತ ಈ ಭಾಗದ ಅರಣ್ಯ ಪ್ರದೇಶಗಳಲ್ಲಿ ವಾಸವಾಗಿರುವ ನಾನಾ ರೀತಿಯ ಪ್ರಾಣಿಗಳು, ಪಕ್ಷಿಗಳು, ಜಲಚರಗಳು ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ. ನದಿ ತಟ ಹಾಗೂ ಹಳ್ಳ ಹೊಂಡಗಳಲ್ಲಿರುವ ಹಾವು, ಮೀನು, ಜಲಚರಗಳು ನೀರಿನ ಅಭಾವದಿಂದ ಸಾವನ್ನಪ್ಪುತ್ತಿವೆ. ಅತಿಥಿಗೃಹಗಳಿಗೆ ನೀರಿನ ಬರದ ಬಿಸಿ
ಶ್ರೀ ಮೂಕಾಂಬಿಕಾ ದೇಗುಲ ಸಹಿತ ಇಲ್ಲಿನ ಸುಮಾರು 45 ಖಾಸಗಿ ವಸತಿಗೃಹಗಳಿಗೆ ನೀರಿಲ್ಲ. ಕೆಲವೊಂದು ಮನೆಗಳಿಂದ ದುಬಾರಿ ಬೆಲೆ ತೆತ್ತು ನೀರು ಸಂಗ್ರಹಿಸಬೇಕಾದ ಅನಿವಾರ್ಯ ಸ್ಥಿತಿ ಬಂದಿದೆ.