ಚೆನ್ನೈ: ಟಾಲಿವುಡ್ ನ ಖ್ಯಾತ ಡಬ್ಬಿಂಗ್ ಕಲಾವಿದ ಶ್ರೀನಿವಾಸ ಮೂರ್ತಿ ಹೃದಯಾಘಾತದಿಂದ ಶುಕ್ರವಾರ (ಜ.27 ರಂದು) ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
1990ರ ದಶಕದ ಆರಂಭದಲ್ಲಿ ಅರ್ಜುನ್ ಸರ್ಜಾ ಅವರ ʼಒಕೇ ಒಕ್ಕಡುʼ ಸಿನಿಮಾಕ್ಕೆ ತೆಲುಗಿನಲ್ಲಿ ವಾಯ್ಸ್ ಕೊಟ್ಟ ಶ್ರೀನಿವಾಸ್ ಆ ಬಳಿಕ ಸಾಲು ಸಾಲು ಚಿತ್ರಗಳಿಗೆ ತೆಲುಗಿನಲ್ಲಿ ವಾಯ್ಸ್ ಡಬ್ ಮಾಡಿದ್ದಾರೆ.
ನಟ ಸೂರ್ಯ ಅವರ ʼಸಿಂಗಂʼ ಸರಣಿಯ ಚಿತ್ರಗಳಿಗೆ ತೆಲುಗಿಗೆ ವಾಯ್ಸ್ ಡಬ್ ಮಾಡಿ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡು, ನಟ ಅಜಿತ್ ಅವರ ʼವಿಶ್ವಾಸಂʼ, ಮೋಹನ್ ಲಾಲ್ ಅವರ ʼಜನತಾ ಗ್ಯಾರೇಜ್ʼ ವಿಕ್ರಂ ಅವರ ಸಿನಿಮಾಗಳಿಗೆ ಹೀಗೆ ಸಾವಿರಕ್ಕೂ ಹೆಚ್ಚಿನ ಸಿನಿಮಾಗಳಿಗೆ ತೆಲುಗಿನಲ್ಲಿ ಧ್ವನಿ ಕೊಟ್ಟಿದ್ದಾರೆ.
ಕನ್ನಡದ ಉಪೇಂದ್ರ ಅವರ ಧ್ವನಿಗೆ ತೆಲುಗಿನಲ್ಲಿ ಶ್ರೀನಿವಾಸ್ ಅವರು ಡಬ್ ಮಾಡುತ್ತಿದ್ದರು. ಇದಲ್ಲದೇ ಹಾಲಿವುಡ್ ನ ಸಿನಿಮಾಗಳಿಗೆ ತೆಲುಗಿನಲ್ಲಿ ವಾಯ್ಸ್ ಡಬ್ ನೀಡುತ್ತಿದ್ದರು.
Related Articles
ಇತ್ತೀಚೆಗೆ ʼ ರಾಕೆಟ್ರಿ: ನಂಬಿ ಎಫೆಕ್ಟ್ʼ ಸಿನಿಮಾಕ್ಕೆ ತೆಲುಗಿನಲ್ಲಿ ಡಬ್ಬಿಂಗ್ ಮಾಡಿದ್ದರು. ನೆಗೆಟಿವ್ ರೋಲ್ ಕೆಲ ಪಾತ್ರಗಳಿಗೆ ವಾಯ್ಸ್ ನೀಡುತ್ತಿದ್ದರು. ಡಬ್ಬಿಂಗ್ ಮಾತ್ರವಲ್ಲದೇ ಕೆಲ ತೆಲುಗು ಸಿನಿಮಾಗಳಲ್ಲಿ ನಟನಾಗಿಯೂ ಗುರುತಿಸಿಕೊಂಡಿದ್ದರು.