ಎಮಿರೇಟ್ಸ್ ರವಿವಾರ ಹೊಸ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ವಿಸಾ ನಿಷೇಧಗಳ ಪಟ್ಟಿಯಿಂದ ಕೆಲವು ರಾಷ್ಟ್ರಗಳನ್ನು ತೆಗೆದು ಹಾಕಲಾಗುತ್ತದೆ ಎಂದಿದ್ದಾರೆ. ಮಾರ್ಚ್ 17ರಂದು ದುಬೈ ಎಲ್ಲಾ ರಾಷ್ಟ್ರಗಳ ವಿಸಾವನ್ನು ರದ್ದುಮಾಡಿತ್ತು. ಇದೀಗ ಕೆಲವು ರಾಷ್ಟ್ರಗಳಿಗೆ ವಿನಾಯಿತಿ ನೀಡಲಾಗಿದೆ.
Advertisement
ಆಸ್ಟ್ರೇಲಿಯಾ, ಆಸ್ಟ್ರಿಯಾ, ಬೆಲ್ಜಿಯಂ, ಬ್ರೂನಿ, ಬಲ್ಗೇರಿಯಾ, ಕೆನಡಾ, ಕ್ರೊಯೇಷಿಯಾ, ಸೈಪ್ರಸ್, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಎಸ್ಟೋನಿಯಾ, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಹಾಂಗ್ ಕಾಂಗ್, ಹಂಗೇರಿ, ಐಸ್ಲ್ಯಾಂಡ್, ಐರ್ಲೆಂಡ್, ಇಟಲಿ (ರೊಮ್‌ನಿಂದ ಮಾತ್ರ), ಜಪಾನ್, ಲಾಟ್ವಿಯಾ ,ಲಿಥುವೇನಿಯಾ, ಲಕ್ಸೆಂಬರ್ಗ್, ಮಲೇಷ್ಯಾ, ಮಾಲ್ಟಾ, ಮೊನಾಕೊ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ನಾರ್ವೆ, ಪೋಲೆಂಡ್, ಪೋರ್ಚುಗಲ್, ರೊಮೇನಿಯಾ, ಸ್ಯಾನ್ ಮರಿನೋ, ಸಿಂಗಾಪುರ್, ಸ್ಲೋವಾಕಿಯಾ, ಸ್ಲೊವೇನಿಯಾ, ದಕ್ಷಿಣ ಕೊರಿಯಾ, ಸ್ಪೇನ್, ಸ್ವೀಡನ್, ಸ್ವಿಟ್ಜರ್ಲೆಂಡ್, ವ್ಯಾಟಿಕನ್, ಯುನೈಟೆಡ್ ಕಿಂಗ್‌ಡಂ, ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ವಿಸಾ ನೀಡಲಾಗಿದೆ.