Advertisement

ದುಬಾೖ ಕಬಡ್ಡಿ ಲೀಗ್‌: ಭಾರತ-ಇರಾನ್‌ ಫೈನಲ್‌

06:00 AM Jun 30, 2018 | Team Udayavani |

ದುಬಾೖ: ದುಬಾೖ ಕಬಡ್ಡಿ ಲೀಗ್‌ ಪಂದ್ಯಾವಳಿಯ ಫೈನಲ್‌ನಲ್ಲಿ ಭಾರತ ಮತ್ತು ಇರಾನ್‌ ಪ್ರಶಸ್ತಿ ಸುತ್ತಿನಲ್ಲಿ ಸೆಣಸಲಿವೆ. ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಭಾರತ 36-20 ಅಂಕಗಳ ಅಂತರದಿಂದ ದ. ಕೊರಿಯಾ ವನ್ನು ಮಣಿಸಿತು. ವಿರಾಮದ ವೇಳೆ ಭಾರತ 17-10 ಅಂತರದ ಮುನ್ನಡೆ ಸಾಧಿಸಿತ್ತು. ನಾಯಕ ಅಜಯ್‌ ಠಾಕೂರ್‌ ಮತ್ತು ಗಿರೀಶ್‌ ಎರ್ನಾಕ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

Advertisement

ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ನಲ್ಲಿ ಇರಾನ್‌ 40-21ರಿಂದ ಪಾಕಿಸ್ಥಾನವನ್ನು ಪರಾಭವಗೊಳಿಸಿತು. ಅನುಭವಿ ಆಟಗಾರ ರನ್ನು ಒಳಗೊಂಡ ಇರಾನ್‌ ಆರಂಭದಿಂದಲೇ ಪಂದ್ಯವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತು.  ಇರಾನ್‌ ಕೂಡ ಭಾತದಂತೆ ಲೀಗ್‌ ಹಂತದಲ್ಲಿ ಅಜೇಯವಾಗಿ ಉಳಿದಿತ್ತು.

ಫೈನಲ್‌ ಹಣಾಹಣಿ ಶನಿವಾರ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next