Advertisement

ಡಿಸೆಂಬರ್ ನಲ್ಲಿ ಅರಬ್ ರಾಷ್ಟ್ರಗಳ ಹವಾಮಾನ ತಂಪಾಗಲಿದೆಯಂತೆ

09:45 AM Nov 29, 2019 | sudhir |

ದುಬೈ: ಅರಬ್‌ ರಾಷ್ಟ್ರಗಳ ಹಾವಾಮಾನಗಳು ಮುಂದಿನ ವಾರದಿಂದ ತಂಪಾಗಲಿದೆ ಎಂದು ಖಗೋಳಶಾಸ್ತ್ರಜ್ಞರು ಮಾಹಿತಿ ನೀಡಿದ್ದಾರೆ. ಡಿಸೆಂಬರ್‌ 7ರ ಬಳಿಕ 40 ದಿನಗಳ ಕಾಲ ಈ ಬದಲಾವಣೆ ಕಂಡುಬರಲಿದ್ದು, ಹಗಲು ಮತ್ತು ರಾತ್ರಿ ಒಂದೇ ಹವಾಮಾನ ಇರಲಿದೆ ಎಂದಿದ್ದಾರೆ.

Advertisement

ಅರಬ್‌ ‘ಯೂನಿಯನ್‌ ಫಾರ್‌ ಸ್ಪೇಸ್‌ ಆ್ಯಂಡ್‌ ಆಸ್ಟ್ರೋನಮಿ’ ಇದರ ಸದಸ್ಯ ಇಬ್ರಾಹಿಂ ಅಲ್‌ ಜರ್ವಾನ್‌ ಅವರು ಈ ಮಾಹಿತಿ ನೀಡಿದ್ದಾರೆ. ಅರಬ್‌ ಋತುಗಳ ಪ್ರಕಾರ 28 ನಕ್ಷತ್ರ ಪುಂಜಗಳಿವೆ ಅವುಗಳ ಪ್ರತಿಯೊಂದು ಹವಾಮಾನಗಳಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿದ್ದಾರೆ. ಡಿಸೆಂಬರ್‌ 7ರಿಂದ ಜನವರಿ 15ರ ವರೆಗೆ ಈ ಋತು ಮುಂದುವರಿಯಲಿದೆ. ಅರೇಬಿಯಾದ ಉತ್ತರ ದ್ವೀಪದಲ್ಲಿ ತಾಪಮಾನವು ಶೂನ್ಯಕ್ಕೆ ಬರುತ್ತದೆ. ಮಧ್ಯ ಅರೇಬಿಯಾದಲ್ಲಿ ಇದು 10 ಸೆ. ದಾಖಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next