Advertisement

ದುಬೈ: 2 ವಾರ ಅಂತಾರಾಷ್ಟ್ರೀಯ ವಿಮಾನ ಹಾರಾಟ ರದ್ದು

10:54 PM Mar 20, 2020 | sudhir |

ದುಬೈ: ಹೊಸ ಕರೋನವೈರಸ್‌ ಹರಡುವಿಕೆಯನ್ನು ತಡೆಗಟ್ಟುವ ಪ್ರಯತ್ನದಲ್ಲಿ ಎರಡು ವಾರಗಳ ವರೆಗೆ ಎಲ್ಲಾ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ನಿಲ್ಲಿಸುವುದಾಗಿ ಸೌದಿ ಅರೇಬಿಯಾ ತಿಳಿಸಿದೆ.

Advertisement

ಈಕ್ಷಣದಿಂದಲೇ ಜಾರಿಗೆ ಬರುವಂತೆ ವಿಮಾನಯಾನಗಳನ್ನು ರದ್ದುಗೊಳಿಸಲಾಗುತ್ತದೆ. 100ಕ್ಕೂ ಹೆಚ್ಚು ದೇಶಗಳಿಗೆ ಹರಡಿದ್ದು, 1,30,000ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಗಲ್ಫ್ ರಾಷ್ಟ್ರಗಳಲ್ಲೂ ಸೋಂಕು ಕಾಣಿಸಿಕೊಂಡಿದೆ. ವಿಶ್ವಾದ್ಯಂತ 5,000ಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗಿದೆ. ಯುಎಇನಲ್ಲಿ ಕರೋನವೈರಸ್‌ ಏಕಾಏಕಿ ಉಂಟಾದ ಕಾರಣ ಆರೋಗ್ಯ ಅಧಿಕಾರಿಗಳು ಮುಖ್ಯವಾಗಿ ಹಿರಿಯನಾಗರಿಕರು ಮನೆಯÇÉೇ ಇರಬೇಕೆಂದು ಸೂಚನೆ ನೀಡಿದ್ದಾರೆ. ಕೆಲವು ಫೆಡರಲ್‌ ಉದ್ಯೋಗಿಗಳು ರವಿವಾರದ ಬಳಿಕ ಎರಡು ವಾರಗಳ ಕಾಲ ಮನೆಯಿಂದ ಕೆಲಸ ಮಾಡಲು ಪ್ರಾರಂಭಿಸಲಿದ್ದಾರೆ. ಅವರಿಗೆ ಕಂಪ್ಯೂಟರ್‌/ಲ್ಯಾಪ್‌ಟಾಪ್‌ಗ್ಳನ್ನು ನೀಡಲಾಗುತ್ತಿದೆ. ನೈಟ್‌ಕ್ಲಬ್‌ಗಳು, ಬಾರ್‌ಗಳು, ಮಾಲ್‌ಗ‌ಳು, ಪ್ರವಾಸಿ ರೆಸ್ಟೋರೆಂಟ್‌ಗಳನ್ನು ಮಾರ್ಚ್‌ ಅಂತ್ಯದವರೆಗೆ ಮುಚ್ಚಲಾಗುತ್ತದೆ.

ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯು ಅಬುಧಾಬಿಯಲ್ಲಿ ಸಂಗೀತ ಕಚೇರಿಗಳು ಸೇರಿದಂತೆ ಎಲ್ಲಾ ಯೋಜಿತ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದೆ. ಈ ನಿರ್ಧಾರ ದುಬೈಗೆ ಅನ್ವಯವಾಗುವುದಿಲ್ಲ.

ಪ್ರಪಂಚದಾದ್ಯಂತ ಹಲವಾರು ಪ್ರಮುಖ ಕ್ರೀಡಾಕೂಟಗಳು, ಸಮ್ಮೇಳನಗಳು ಮತ್ತು ಇತರ ಕೂಟಗಳನ್ನು ರದ್ದುಪಡಿಸಲಾಗಿದೆ. ವೈರಸ್‌ ಹೆಚ್ಚು ಸಾಂಕ್ರಾಮಿಕವಾಗಿದೆ.ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next