Advertisement

ಡಿಟಿಸಿ ಬಸ್ಸಿಗೆ ಟ್ರಕ್‌ ಢಿಕ್ಕಿ: 9 ಮಂದಿಗೆ ಗಾಯ,ಟ್ರಕ್‌ ಚಾಲಕ ಪರಾರಿ

12:07 PM Oct 17, 2018 | udayavani editorial |

ಹೊಸದಿಲ್ಲಿ : ಉತ್ತರ ದಿಲ್ಲಿಯ ವಜೀರಾಬಾದ್‌ ಫ್ಲೈ ಓವರ್‌ ಕೆಳಗೆ ಟ್ರಕ್‌ ಢಿಕ್ಕಿ ಹೊಡೆದ ಕಾರಣ ಪ್ರಯಾಣಿಕರ ಡಿಟಿಸಿ ಬಸ್ಸು ಮಗುಚಿ ಬಿದ್ದ ಅವಘಡದಲ್ಲಿ ಒಂಭತ್ತು ಮಂದಿ ಗಾಯಗೊಂಡರು. ಇವರಲ್ಲಿ ಡ್ರೈವರ್‌ ಮತ್ತು ಕಂಡಕ್ಟರ್‌ ಕೂಡ ಸೇರಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ನಸುಕಿನ ಆರು ಗಂಟೆಯ ವೇಳೆ ಬಸ್ಸು ಕಾಶ್ಮೀರಿ ಗೇಟ್‌ ಮಾರ್ಗವಾಗಿ ಭಲ್‌ಸ್ವಾ ಡೈರಿಯಿಂದ ಬರುತ್ತಿದ್ದಾಗ ಈ ಅವಘಡ ಸಂಭವಿಸಿತು. ಬಸ್ಸಿನಲ್ಲಿ 21 ಮಂದಿ ಇದ್ದರು ಎಂದು ಪೊಲೀಸರು ಹೇಳಿದ್ದಾರೆ.

ಗಾಯಾಳುಗಳನ್ನು ಸುಶ್ರುತಾ ಟ್ರೋಮಾ ಸೆಂಟರ್‌ ಗೆ ಸೇರಿಸಲಾಗಿದೆ; ಟ್ರಕ್‌ ಚಾಲಕ ನಾಪತ್ತೆಯಾಗಿದ್ದಾನೆ; ಟ್ರಕ್ಕನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ (ಉತ್ತರ) ನೂಪುರ್‌ ಪ್ರಸಾದ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next